ETV Bharat / bharat

ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ - ಬಿಹಾರದಲ್ಲಿ ನರಭಕ್ಷಕ ಹುಲಿ

ಬಿಹಾರದಲ್ಲಿ ನರಭಕ್ಷಕ ಹುಲಿ ಸೆರೆಗೆ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು, ಆಧುನಿಕ ರೈಫಲ್‌ಗಳೊಂದಿಗೆ ಪ್ರಮಾಣೀಕೃತ ಶೂಟರ್‌ಗಳು ಮತ್ತು 150 ಅನುಭವಿ ಫಾರೆಸ್ಟ್ ಗಾರ್ಡ್‌ಗಳು ಶ್ರಮಿಸುತ್ತಿದ್ದಾರೆ.

bihar-man-eater-tiger-claims-its-second-victim-in-two-days
ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ
author img

By

Published : Oct 7, 2022, 6:45 PM IST

ಬಗಾಹನ್ (ಬಿಹಾರ): ಬಿಹಾರದ ಬಗಾಹನ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನರಭಕ್ಷಕ ಹುಲಿಯೊಂದು ಅಕ್ಷರಶಃ ಜನರನ್ನು ಭಯಭೀತಗೊಳಿಸಿದೆ. ಕಳೆದ ಒಂದು ತಿಂಗಳಲ್ಲಿ ಈ ನರಭಕ್ಷಕ ಹುಲಿಗೆ 7 ಜನ ಬಲಿಯಾಗಿದ್ದಾರೆ. ಇದರಿಂದ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಗಿದೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿಂದಲೂ ಹುಲಿಯ ಹಾವಳಿ ಹೆಚ್ಚಾಗಿದೆ. ಇದುವರೆಗೆ ವಿವಿಧ ಪ್ರದೇಶಗಳಲ್ಲಿ ಒಟ್ಟು ಎಂಟು ಜನರ ಮೇಲೆ ಹುಲಿ ದಾಳಿ ಮಾಡಿದೆ. ಅದರಲ್ಲೂ ಕಳೆದ ಒಂದೇ ತಿಂಗಳಲ್ಲಿ ಏಳು ಜನರ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಇತ್ತ, ಅರಣ್ಯ ಇಲಾಖೆ ಹುಲಿ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ, ಹುಲಿ ತನ್ನ ಸ್ಥಳವನ್ನು ಪದೇ ಪದೆ ಬದಲಾಯಿಸುತ್ತಿದೆ.

ಎರಡೇ ದಿನದಲ್ಲಿ ಇಬ್ಬರ ಬಲಿ: ಕಳೆದ ಎರಡನೇ ದಿನಗಳಲ್ಲಿ 12 ವರ್ಷ ಬಾಲಕಿ ಸೇರಿ ಇಬ್ಬರನ್ನು ಹುಲಿ ಪಡೆದಿದೆ. ಬುಧವಾರ ರಾತ್ರಿ ನರಭಕ್ಷಕ ಹುಲಿ ಜಿಲ್ಲೆಯ ಸಿಂಘಿ ಗ್ರಾಮದ ಮನೆಗೆ ನುಗ್ಗಿ 12 ವರ್ಷದ ಬಾಲಕಿ ಹೊತ್ತುಕೊಂಡು ಹೋಗಿ ಕೊಂದು ಹಾಕಿದೆ. ಬಾಲಕಿ ಮನೆಯಲ್ಲಿ ಮಲಗಿದ್ದಾಗ ಹುಲಿ ಸದ್ದಿಲ್ಲದೇ ತೆವಳಿಕೊಂಡು ಹೋಗಿ ಆಕೆಯನ್ನು ಎತ್ತಿಕೊಂಡು ಹೋಗಿದೆ.

ಗುರುವಾರ ರಾತ್ರಿ ಹುಲಿ ಹರ್ಹಿಯಾ ಸರೆಹ್ ಪ್ರದೇಶದಲ್ಲಿ 35 ವರ್ಷದ ವ್ಯಕ್ತಿಯನ್ನೂ ಕೊಂದು ಹಾಕಿದೆ. ರಾತ್ರಿ ಹೊಲಕ್ಕೆ ಹೋದಾಗ ಆತನನ್ನು ಹುಲಿ ಬಲಿ ಪಡೆದಿದೆ. ಇದರಿಂದ ಎರಡೇ ದಿನಗಳಲ್ಲಿ ಇಬ್ಬರನ್ನೂ ಹುಲಿ ಬೇಟೆಯಾಗಿ ಹತ್ಯೆ ಮಾಡಿದಂತೆ ಆಗಿದೆ. ಹುಲಿ ಕಾಟಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಅಲ್ಲದೇ, ಸಿಟ್ಟಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ವಾಹನಕ್ಕೆ ಹಾನಿ ಮಾಡಿದ್ದಾರೆ.

ಹುಲಿ ಭೀತಿಯಲ್ಲೇ ಜೀವನ ದೂಡುತ್ತಿರುವ ಗ್ರಾಮಸ್ಥರು: ಬಗಾಹನ್ ಹುಲಿ ಸಂರಕ್ಷಿತ ಪ್ರದೇಶದ ಅನೇಕ ಗ್ರಾಮಸ್ಥರು ಹುಲಿ ಭೀತಿಯಲ್ಲೇ ಜೀವನ ದೂಡುವಂತೆ ಆಗಿದೆ. ಅಲ್ಲದೇ, ಕೆಲ ದಿನಗಳಿಂದ ಹೊಲಗಳತ್ತ ಹೋಗುವುದನ್ನೂ ನಿಲ್ಲಿಸಿದ್ದಾರೆ. ಹುಲಿ ಮನೆಗಳತ್ತ ಬರದಂತೆ ಮನೆ ಮುಂದೆ ಬೆಂಕಿ ಹಚ್ಚಿ ರಾತ್ರಿ ಕಳೆಯುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಬಹಳ ದಿನಗಳಿಂದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಇದೀಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿಯನ್ನು ಕೊಲ್ಲಲು ಆದೇಶ ನೀಡಿದೆ. ಇದರಿಂದ ಗ್ರಾಮಸ್ಥರಿಗೆ ಶೀಘ್ರವೇ ಮುಕ್ತಿ ಸಿಗುವ ಭರವಸೆ ಮೂಡಿದೆ.

150 ಫಾರೆಸ್ಟ್ ಗಾರ್ಡ್‌ಗಳ ತಂಡ: ನರಭಕ್ಷಕ ಹುಲಿಯ ಸೆರೆಗೆ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು, ಆಧುನಿಕ ರೈಫಲ್‌ಗಳೊಂದಿಗೆ ಪ್ರಮಾಣೀಕೃತ ಶೂಟರ್‌ಗಳು ಮತ್ತು 150 ಅನುಭವಿ ಫಾರೆಸ್ಟ್ ಗಾರ್ಡ್‌ಗಳು ಶ್ರಮಿಸುತ್ತಿದ್ದಾರೆ. ಕಾಡೆಮ್ಮೆ ಆಮಿಷವೊಡ್ಡಿ ಸೆರೆ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಪ್ರತಿ ಎರಡ್ಮೂರು ಗಂಟೆಗಳಿಗೆ ತನ್ನ ಸ್ಥಳವನ್ನು ಬದಲಾಯಿಸುತ್ತಲೇ ಇರುತ್ತದೆ. ಇದರಿಂದ ಅದರ ಸೆರೆಗೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ನಿರಂತರವಾಗಿ ಸ್ಥಳಗಳನ್ನು ಬದಲಾಯಿಸುತ್ತಿರುವುದರಿಂದ ನಾವು ಹುಲಿಯನ್ನು ಹಿಡಿಯಲು ಕೆಲವು ಅಡೆತಡೆಗಳನ್ನು ಎದುರಿಸುತ್ತಿದ್ದೇವೆ. ಸಿಸಿಟಿವಿ ಕ್ಯಾಮರಾ ದೃಶ್ಯಗಳಿಂದ ಹುಲಿ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ವನ್ಯಜೀವಿ ಸಂರಕ್ಷಣಾಧಿಕಾರಿ ನೇಶಮಣಿ ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡನೇ ಮದುವೆಗೆ ನಿರಾಕರಣೆ: ಯುವತಿಗೆ ಬೆಂಕಿ ಹಚ್ಚಿದ ಪ್ರಿಯಕರ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.