ETV Bharat / bharat

ಬಿಹಾರ: ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಮೂತ್ರ ಕುಡಿಸಿ ವಿಕೃತಿ

author img

By ETV Bharat Karnataka Team

Published : Sep 25, 2023, 11:42 AM IST

ಬಿಹಾರದ ಪಾಟ್ನಾದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ದುರುಳರು, ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ.

File pick
ಸಾಂದರ್ಭಿಕ ಚಿತ್ರ

ಪಾಟ್ನಾ (ಬಿಹಾರ): ಸಾಲ ಮರುಪಾವತಿಸುವ ವಿಚಾರಕ್ಕೆ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ ಕುಡಿಸಿರುವ ಅಮಾನವೀಯ ಘಟನೆ ಪಾಟ್ನಾದಲ್ಲಿ ಶನಿವಾರ ನಡೆದಿದೆ. ಸಂತ್ರಸ್ತೆಯನ್ನು ಆಕೆಯ ಗ್ರಾಮದ ಆರು ಮಂದಿ ದುಷ್ಕರ್ಮಿಗಳು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಬಳಿಕ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಟ್ನಾದ ಖುಸ್ರುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಕರಣದ ಸಂಪೂರ್ಣ ವಿವರ: "ದಲಿತ ಮಹಿಳೆಯು ಆರೋಪಿಗಳಿಂದ 1,500 ರೂ. ಸಾಲ ಪಡೆದಿದ್ದರಂತೆ. ಕೆಲವು ತಿಂಗಳ ಬಳಿಕ ಬಡ್ಡಿಸಮೇತ ಸಾಲವನ್ನು ಮರುಪಾವತಿಸಿದ್ದರು. ಆದರೆ ಸಾಲ ವಾಪಸ್‌ ನೀಡಿದ ಬಳಿಕವೂ ಆರೋಪಿಗಳಾದ ಪ್ರಮೋದ್‌ ಸಿಂಗ್‌ ಹಾಗೂ ಅವರ ಮಗ ಅಂಶು ಮಹಿಳೆಗೆ ಮತ್ತೆ ಕಿರುಕುಳ ನೀಡಿದ್ದರು. ಇನ್ನೂ ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು. ಇದಕ್ಕೆ ಮಹಿಳೆ ನಿರಾಕರಿಸಿದ್ದರು. ಹಣ ನೀಡದಿದ್ದರೆ ವಿವಸ್ತ್ರಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು" ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಅಲ್ಲದೇ ಆರೋಪಿಗಳ ಕಿರುಕುಳ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ: ವಿವಸ್ತ್ರಗೊಳಿಸಿ ಹಲ್ಲೆ, ಲೈಂಗಿಕ ದೌರ್ಜನ್ಯ: ಪೊಲೀಸರ ವಿರುದ್ಧ ಸಂತ್ರಸ್ತ ಮಹಿಳೆಯಿಂದ ತಮಿಳುನಾಡು ಡಿಜಿಪಿಗೆ ದೂರು

ಆರೋಪಿಗಳಾದ ಪ್ರಮೋದ್‌ ಸಿಂಗ್‌, ಮಗ ಅಂಶು ಹಾಗೂ ಇತರೆ ನಾಲ್ವರು ಸಹಚರರು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯ ಮನೆಗೆ ಹೋಗಿ ಆಕೆಯನ್ನು ಬಲವಂತವಾಗಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಬಳಿಕ ವಿವಸ್ತ್ರಗೊಳಿಸಿ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮೋದ್ ಸಿಂಗ್ ತನ್ನ ಮಗನಿಗೆ ಮಹಿಳೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡುವಂತೆ ಹೇಳಿದ್ದಾರೆ. ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ವಾಪಸ್‌ ಆಗಿದ್ದಾರೆ. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀನ ಕೃತ್ಯಕ್ಕೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಕುಟುಂಬ ಹಾಗೂ ದಲಿತ ಸಮುದಾಯದವರು ಒತ್ತಾಯಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಇನ್ಸ್‌ಪೆಕ್ಟರ್‌ ಹೇಳಿದ್ದೇನು?: "ಶನಿವಾರ ಬೆಳಗ್ಗೆ ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಪೊಲೀಸರು ಆಕೆಯ ಮನೆಗೆ ಬಂದು ಘಟನೆಯ ಬಗ್ಗೆ ವಿಚಾರಿಸಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಸದ್ಯ ಮಹಿಳೆಯಿಂದ ದೂರು ಸ್ವೀಕರಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ" ಎಂದು ಖುಸ್ರುಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.