ಮಧುಬನಿ(ಬಿಹಾರ): ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಬಿಹಾರದ ಕೋರ್ಟ್ ವಿಚಿತ್ರ ಶಿಕ್ಷೆ ನೀಡಿದೆ. ಕೋರ್ಟ್ ಇತಿಹಾಸದಲ್ಲಿ ಈ ರೀತಿಯ ಶಿಕ್ಷೆ ನೀಡಿರುವುದು ಇದೇ ಮೊದಲು ಎಂದು ಹೇಳಲಾಗ್ತಿದೆ.
20 ವರ್ಷದ ಲಾಲನ್ ಕುಮಾರ್ ಬಟ್ಟೆ ತೊಳೆಯುವ (ಧೋಬಿ) ಕೆಲಸ ಮಾಡ್ತಿದ್ದ. ಈ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕಳೆದ ಏಪ್ರಿಲ್ ತಿಂಗಳಲ್ಲಿ ಆತನನ್ನು ಬಂಧಿಸಲಾಗಿತ್ತು.
ಸುಮಾರು ಆರು ತಿಂಗಳ ಕಾಲ ಊರಿನಲ್ಲಿರುವ ಎಲ್ಲ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿ ಕೊಡಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಖುದ್ದಾಗಿ ಖರೀದಿ ಮಾಡಬೇಕು ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಗ್ರಾಮದ ಎಲ್ಲ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ.
ಬಟ್ಟೆ ತೊಳೆದು ಇಸ್ತ್ರಿ ಮಾಡುವ ಶಿಕ್ಷೆಯ ಜೊತೆಗೆ ತಲಾ 10 ಸಾವಿರ ರೂ. ಎರಡು ಶ್ಯೂರಿಟಿ ನೀಡುವಂತೆ ನ್ಯಾಯಾಲಯ ತಿಳಿಸಿದ್ದು, ಆರು ತಿಂಗಳ ನಂತರ ಸರ್ಕಾರಿ ಅಧಿಕಾರಿಯಿಂದ ನೀಡಲಾದ ಪ್ರಮಾಣಪತ್ರವನ್ನು ಗ್ರಾಮದ ಸರಪಂಚ್ಗೆ ನೀಡಬೇಕು ಎಂದು ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎಸ್ಹೆಚ್ಒ ಸಂತೋಷ್ ಕುಮಾರ್ ಮಂಡಲ್ ಮಾತನಾಡಿದ್ದು, ಏಪ್ರಿಲ್ 17ರಂದು ಧೋಬಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತದನಂತರ ಆತನ ಬಂಧನ ಮಾಡಲಾಗಿತ್ತು. ಇದೀಗ ಕೋರ್ಟ್ನಿಂದ ಈ ರೀತಿಯ ತೀರ್ಪು ಹೊರಬಿದ್ದಿದೆ ಎಂದು ಹೇಳಿದ್ದಾರೆ.