ಔರಂಗಾಬಾದ್(ಬಿಹಾರ): ಆಧುನಿಕತೆ ತಂತ್ರ ಮುಂದುವರಿದಂತೆ ಹೊಸ ಹೊಸ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಿಂದಿನ ದಿಗಳಲ್ಲಿದ್ದ ಕೇವಲ ವಿವಿಧ ಅಂಗಡಿ ಅಥವಾ ವಿವಿಧ ಕಂಪನಿ, ಕೃಷಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿದ್ದ ಇಂದಿನ ಯುವಜನರು ಹೊಸದೃಷ್ಟಿಕೋನ ಬೆಳೆಸಿಕೊಂಡು ಸ್ವ ಉದ್ಯೋಗದತ್ತ ಹೆಜ್ಜೆ ಇಟ್ಟಿದ್ದಾರೆ.
ಮನುಷ್ಯನಿಗೆ ಮೂಲಭೂತವಾಗಿರುವ ರೊಟ್ಟಿ, ಬಟ್ಟೆ, ಮನೆ ಅವಶ್ಯಕತೆಗೆ ಮಾತ್ರ ಸೀಮಿತವಾಗಿಲ್ಲ. ಇಂದು ನಾವೀನ್ಯ ಬದುಕು ನಡೆಸಲೂ ಹಾತೂರೆಯತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮವೂ(ಸೋಷಿಯಲ್ ಮೀಡಿಯಾ) ಕೂಡ ಹಣ ಗಳಿಕೆಯ ಸಾಧನವಾಗಿ ರೂಪುಗೊಂಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ತಮ್ಮ ಪ್ರತಿಭೆಯ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅವರಲ್ಲಿ ಬಿಹಾರದ ಔರಂಗಾಬಾದ್ ಜಿಲ್ಲೆಯ ಹುಡುಗ ಹರ್ಷ ರಜಪೂತ್ ಕೂಡ ಒಬ್ಬರು ಸಾಕ್ಷಿ. ಈತನು ಯೂಟ್ಯೂಬ್ @harshrajputin ಆರಂಭಿಸಿದ್ದು, ಇದರಿಂದ ಬಂದ ಆದಾಯದಿಂದ ಆಡಿ ಕಾರನ್ನು ಖರೀದಿಸಿ ರೋಲ್ ಮಾಡಲ್ ಆಗಿ ಹೊರಹೊಮ್ಮಿದ್ದಾರೆ.
- " class="align-text-top noRightClick twitterSection" data="
">
ರಜಪೂತ್ ಹರ್ಷನ ಯೂಟ್ಯೂಬ್ ಪಯಣ : ಹರ್ಷ ರಜಪೂತ್ ಅವರು ಯೂಟ್ಯೂಬ್ದಿಂದ ಬಂದ ಹಣದ ಗಳಿಕೆಯಿಂದ ಆಡಿ ಕಾರು ಖರೀದಿಸಿದ್ದಾರೆ. ಬಹುಶಃ ಯೂಟ್ಯೂಬ್ದಲ್ಲಿ ರಜಪೂತ್ ಕಥೆ ಇಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಂದು ಎಲ್ಲರೂ ಹರ್ಷ ಯಾರು ಎಂದು ತಿಳಿಯಲು ಇಷ್ಟಪಡುತ್ತಾರೆ? ಅಷ್ಟಕ್ಕೂ ನಿಜವಾಗಿಯೂ ಈ ಹರ್ಷನೂ 50 ಲಕ್ಷದ ಆಡಿ ಕಾರನ್ನು ಖರೀದಿಸಿದ್ದಾನಾ ? ಎಂದು ಸರ್ಚ್ ಮಾಡಲು ಆರಂಭಿಸಿದ್ದಾರೆ.
ಹರ್ಷ ರಜಪೂತ್ ಬಿಹಾರದ ಔರಂಗಾಬಾದ್ ಜಿಲ್ಲೆಯ ಜಸೋಯಾ ಗ್ರಾಮದ ನಿವಾಸಿ. ಯೂಟ್ಯೂಬ್ನಲ್ಲಿ ಹರ್ಷ್ ಅವರ ಮೊದಲ ವೀಡಿಯೊ 2020 ರಲ್ಲಿ ವೈರಲ್ ಮಾಡಿದ್ದನ್ನೂ ಜನರು ಕೊರೊನಾ ಅವಧಿಯಲ್ಲಿ ವೀಕ್ಷಿಸಿದ್ದಾರೆ. ಇಲ್ಲಿಂದ ಹರ್ಷನ ಪಯಣ ಶುರುವಾಯಿತು. ತಮ್ಮ ಸಾಧನೆ ಬಗ್ಗೆ ಈಟಿವಿ ಭಾರತದೊಂದಿಗೆ ಹರ್ಷ ರಜಪೂತ್ ಮಾತನಾಡಿದ್ದಾರೆ. ಅವರ ಚಾನೆಲ್ನ ಹೆಸರು ಹರ್ಷ ರಜಪೂತ್ ಎಂದು ಹೇಳಿದ್ದು, ಲಾಕ್ಡೌನ್ ಸಮಯದಲ್ಲಿ ಡೈರಿ ಮಿಲ್ಕ್ನ ಮೊದಲ ವಿಡಿಯೊ ವೈರಲ್ ಆಯಿತು. ಆದರೆ ಹೆಚ್ಚು ಕ್ರೆಡಿಟ್ ಪಡೆಯಲಿಲ್ಲ. ಆದರೆ ಕೋವಿಡ್ ವೇಳೆ ವರನ ಮೇಲೆ ಹಲ್ಲೆ ನಡೆಸಿರುವ ನನ್ನ ಹಾಸ್ಯ ವಿಡಿಯೋ ಭಾರೀ ವೈರಲ್ ಆಯಿತು ಎಂದು ತಮ್ಮ ಸಾಧನೆಯ ನೆನಪು ಮಾಡಿಕೊಂಡರು.
- " class="align-text-top noRightClick twitterSection" data="
">
ಇದಾದ ನಂತರ ನನ್ನ ವಿಡಿಯೋಗಳನ್ನು ವೀಕ್ಷಿಸಲೂ ಜನರು ಆರಂಭಿಸಿದರು. ಇದಾದ ಬಳಿಕ 2021 ರಲ್ಲಿ, ಕೋವಿಡ್ ನಿಯಮದ ಶಿಷ್ಟಾಚಾರ ಅನುಸರಿಸದ ವ್ಯಕ್ತಿಯನ್ನೂ ನದಿಯ ದಡಕ್ಕೆ ಕರೆದು ಹೊಡೆದಿರುವ ಹಾಸ್ಯದ ವಿಡಿಯೊ ಕೂಡಾ ಬಹಳಷ್ಟು ಜನರಿಂದ ವೀಕ್ಷಣೆಗೆ ಒಳಪಟ್ಟಿತು ಅಂತಾರೆ ಯೂಟ್ಯೂಬರ್ ಹರ್ಷ ರಜಪೂತ್.
ವಿಡಿಯೋದಲ್ಲಿ ಹಾಸ್ಯದ ಸಮ್ಮಿಲನ: ಹರ್ಷ ರಜಪೂತ್ ಅವರ ಮಾಡಿರುವ ಯೂಟ್ಯೂಬ್ ವಿಡಿಯೋವು ಘಟನೆಯ ವಿವರ ಹಾಗೂ ಹಾಸ್ಯದೊಂದಿಗೆ ವಿವರಣೆ ಮಾಡುವುದು ನನ್ನ ವಿಡಿಯೋಗಳು ಹೆಚ್ಚಿನ ವೀಕ್ಷಣೆಗೆ ಕಾರಣ ಅಂತಾರೆ ಹರ್ಷ. ಹರ್ಷ ತಮ್ಮ ವಿಡಿಯೊದಲ್ಲಿ ತುಂಬಾ ನಿಂದನೆ ಮತ್ತು ಹಾಸ್ಯವನ್ನು ಬೆರೆಸಿಕೊಂಡಿದ್ದಾರೆ. ತಮ್ಮ ಹಾಸ್ಯ ಭರಿತ ವಿವರಣೆಗೆ ದಾಸರಾದ ಜನ ನನ್ನ ಹೆಚ್ಚೆಚ್ಚು ವಿಡಿಯೋಗಳನ್ನು ನೋಡಿ ಅದರ ದಾಸರಾದರು. ಇಂದು ಪ್ರತಿಯೊಬ್ಬರೂ ಅವರ ವಿಡಿಯೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದರೊಂದಿಗೆ 27 ವರ್ಷದ ಹರ್ಷ ರಜಪೂತ್ ಅವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚುತ್ತಿದೆ.
ದನಗಳ ಕೊಟ್ಟಿಗೆಯಲ್ಲಿ ನಿಂತ ಆಡಿ ಕಾರು: ಈಗ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ. ಅಕೌಂಟ್ನಲ್ಲಿ ಜಮೆಯಾದ ಹಣವನ್ನು ಬಳಸಿ 50 ಲಕ್ಷ ರೂ. ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ ಹರ್ಷ ರಜಪೂತ್. ತಾವು ಕಾರು ಖರೀದಿಸಿರುವ ಕುರಿತ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ, ಅವರು ಹೊಳೆಯುವ ಆಡಿ ಕಾರಿನೊಂದಿಗೆ ನಿಂತಿರುವುದನ್ನು ಕಾಣ ಬಹುದಾಗಿದೆ. ವಿಶೇಷ ಎಂದರೆ ಈ ಫೋಟೋವನ್ನು ಅವರು ತಮ್ಮ ಸ್ವಂತ ಗ್ರಾಮದಲ್ಲಿ ಹಸು ಕಟ್ಟಿರು ಕೊಟ್ಟಿಗೆ ಬಳಿ ನಿಂತು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಚಿತ್ರವನ್ನು ನೋಡಿ ಇಂದು ಎಲ್ಲರೂ ವಾವ್ ಹರ್ಷ, ನೀವು ಅದ್ಭುತ ಮಾಡಿದ್ದೀರಿ ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಹರ್ಷ ರಜಪೂತ್ ಡ್ಯಾಶಿಂಗ್ ರಿಪೋರ್ಟರ್: ಹರ್ಷ ರಜಪೂತ್ ಯೂಟ್ಯೂಬ್ ಚಾನೆಲ್ದಲ್ಲಿ ಸಾಮಾನ್ಯವಾಗಿ ಪ್ರತಿ ವಿಡಿಯೋದಲ್ಲಿ ಅವರದ್ದು ನಕಲಿ ಪತ್ರಕರ್ತನ ಪಾತ್ರ. 5ರಿಂದ 10 ನಿಮಿಷದ ವಿಡಿಯೋಗಳನ್ನು ಮಾಡಿ ಹಾಸ್ಯದೊಂದಿಗೆ ವಿಷಯ ವಸ್ತುವನ್ನು ಹೇಳುತ್ತಾರೆ. ಇದು ಜನರಿಗೆ ಇಷ್ಟವಾಗಿದೆ. ಹಾಗಾಗಿ ಮಿಲಿಯನ್ ಗಟ್ಟಲೇ ಕ್ಲಿಕ್ಗಳನ್ನು ಪಡೆದುಕೊಳ್ಳುತ್ತಿವೆ.
ಹರ್ಷ ರಜಪೂತ್ ಯಶೋಗಾಥೆ: ಹರ್ಷ ರಜಪೂತ್ ಜಸೋಯಾ ನಿವಾಸಿ. ನಗರದ ಸಚ್ಚಿದಾನಂದ ಸಿನ್ಹಾ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಅವರು, ಯುಪಿಎಸ್ಸಿ ತಯಾರಿಗಾಗಿ ದೆಹಲಿ ತಲುಪಿದರು. ಅಲ್ಲಿ ಅವರು ಅಸ್ಮಿತಾ ಥಿಯೇಟರ್ ಸೇರಿಕೊಂಡು, ನಾಟಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರ ನಡುವೆ 2020 ರಲ್ಲಿ ಕೊರೊನಾ ಪೀಡಿತನಾಗಿ ಸ್ವಗ್ರಾಮಕ್ಕೆ ಮರಳಿದ್ದರು.
ಮನೆಗೆ ಹಿಂದಿರುಗಿದ ಮೇಲೆ ಸ್ವತಃ YouTube ಚಾನಲ್ ಆರಂಭಿಸಿದರು. ಅದರ ನಂತರ ಹರ್ಷ್ ಯೂಟ್ಯೂಬ್ನಲ್ಲಿ ಭಾರೀ ಪ್ರಸಿದ್ಧಿ ಪಡೆದರು. ಇಂದು ಅವರ ಯುಟ್ಯೂಬ್ ಚಾನಲ್ಗೆ 33 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಹರ್ಷನ ತಂದೆ ಬಿಹಾರ ಪೊಲೀಸ್ನಲ್ಲಿ ಹೋಂ ಗಾರ್ಡ್ ಆಗಿದ್ದಾರೆ.
ಯೂಟ್ಯೂಬ್ದಿಂದ ತಿಂಗಳ ಗಳಿಕೆ: ಯೂಟ್ಯೂಬ್ದಿಂದ ಬಿಹಾರದ ಹರ್ಷ ರಜಪೂತ್ ಅವರು, ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸುತ್ತಾರೆ. ಕೆಲವೊಮ್ಮೆ ನಾಲ್ಕು ಲಕ್ಷ, ಕೆಲವೊಮ್ಮೆ ಏಳು ಮತ್ತು ಕೆಲವೊಮ್ಮೆ ಎಂಟು ಲಕ್ಷ, ಅಂದರೆ ಅವರ ಅಭಿಮಾನಿಗಳ ಪ್ರೀತಿಯೂ ಹರ್ಷ ಅವರ ಮೇಲೆ ಸುರಿಯುತ್ತಲೇ ಇರುತ್ತದೆ. ಇದಲ್ಲದೇ, ಇವರು ಯೂಟ್ಯೂಬ್ ಬ್ರ್ಯಾಂಡ್ ಪ್ರಚಾರದಿಂದ ಗಳಿಸುವುದು ವಿಭಿನ್ನವಾಗಿದೆ.
ಇದನ್ನೂಓದಿ:ಸಭೆಯಿಂದ ತೇಜಸ್ವಿ ಯಾದವ್ರನ್ನು ಹೊರಗಿಟ್ಟ ಸಿಎಂ ನಿತೀಶ್: ಜೆಡಿಯು - ಆರ್ಜೆಡಿ ಬಿಕ್ಕಟ್ಟು ತೀವ್ರ