ETV Bharat / bharat

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡಬಾರದಿತ್ತು: ಜಿ.ಕೆ.ಪಿಳ್ಳೈ

author img

By

Published : Jan 28, 2021, 3:24 PM IST

ಗಣರಾಜ್ಯೋತ್ಸವ ದಿನ ದೇಶದಲ್ಲಿ ಮಹತ್ವದಾಗಿದ್ದು, ಪ್ರತಿಭಟನಾಕಾರರಿಗೆ ರಾಷ್ಟ್ರ ರಾಜಧಾನಿಯೊಳಗೆ ಮೆರವಣಿಗೆ ನಡೆಸಲು ಅಧಿಕಾರಿಗಳು ಅವಕಾಶ ನೀಡಬಾರದಿತ್ತು ಎಂದು ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿದ್ದಾರೆ.

tractor rally
tractor rally

ನವದೆಹಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದ ಕುರಿತು ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅಸಮಾಧಾನ ವ್ಯಕ್ತಪಡಿಸಿದ್ದು, ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಅನುಮತಿ ನೀಡಬಾರದಿತ್ತು ಎಂದಿದ್ದಾರೆ.

ಮುಂಬೈ ಮೂಲದ ಫಿನ್‌ಟೆಕ್ ಸಂಸ್ಥೆ, ಇಪಿಎಸ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನ ದೇಶದಲ್ಲಿ ಮಹತ್ವದಾಗಿದ್ದು, ಪ್ರತಿಭಟನಾಕಾರರಿಗೆ ರಾಷ್ಟ್ರ ರಾಜಧಾನಿಯೊಳಗೆ ಮೆರವಣಿಗೆ ನಡೆಸಲು ಅಧಿಕಾರಿಗಳು ಅವಕಾಶ ನೀಡಬಾರದಿತ್ತು. ಹೋರಾಟದಲ್ಲಿ ಸುಮಾರು 50,000ಕ್ಕೂ ಹೆಚ್ಚು ಜನರು ಸೇರಿದ್ದರಿಂದ ಈ ಗುಂಪುಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟ. ಜೊತೆಗೆ ಟ್ರ್ಯಾಕ್ಟರ್​ಗಳನ್ನು ಆಯುಧಗಳಾಗಿ ಬಳಸಲಾಗಿದೆ ಎಂದು ಆರೋಪಿಸಿದರು.

ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡು ಅನೇಕ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸಲು ಮುಂದಾಗುತ್ತಿದ್ದಂತೆ ಅದನ್ನು ತಡೆಯಲು ಖಾಕಿ ಪಡೆ ಮುಂದಾಗಿದ್ದು, ಈ ವೇಳೆ ಏಕಾಏಕಿಯಾಗಿ ಪೊಲೀಸರ ಮೇಲೆ ನೂರಾರು ಪ್ರತಿಭಟನಾನಿರತರ ಗುಂಪು ದಾಳಿ ಮಾಡಿ, ಟ್ರ್ಯಾಕ್ಟರ್ ಹತ್ತಿಸಲು ಯತ್ನಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.