ETV Bharat / bharat

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ: ರೈಲ್ವೆ ಇಲಾಖೆಯಿಂದ ಭರ್ಜರಿ ಗಿಫ್ಟ್​ - ರೈಲ್ವೆ ಇಲಾಖೆಯು ಭರ್ಜರಿ ಉಡುಗೊರೆ

ಅಕ್ಟೋಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬರುವ ಕ್ರಿಕೆಟ್ ಪ್ರೇಮಿಗಳಿಗೆ ರೈಲ್ವೆ ಇಲಾಖೆಯು ಭರ್ಜರಿ ಉಡುಗೊರೆ ನೀಡಿದೆ.

Railway Department
ರೈಲ್ವೆ ಇಲಾಖೆ
author img

By ETV Bharat Karnataka Team

Published : Oct 12, 2023, 2:22 PM IST

ಅಹಮದಾಬಾದ್ (ಗುಜರಾತ್​) : ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ 2023ರ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಸೆಂಟ್ರಲ್ ಮತ್ತು ಅಹಮದಾಬಾದ್ ನಿಲ್ದಾಣದ ನಡುವೆ ವಿಶೇಷ ದರದಲ್ಲಿ 2 ಸೂಪರ್‌ಫಾಸ್ಟ್ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸುವ ಈ ವಿಶೇಷ ರೈಲಿನ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಪಿಆರ್‌ಒ ಜಿತೇಂದ್ರ ಜಯಂತ್, "ಸೂಪರ್‌ಫಾಸ್ಟ್ ವಿಶೇಷ ರೈಲು ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಮುಂಬೈ ಸೆಂಟ್ರಲ್‌ನಿಂದ ಅಹಮದಾಬಾದ್‌ಗೆ ಸಂಚರಿಸಲಿದೆ. ರೈಲು ಸಂಖ್ಯೆ 09013 ಮತ್ತು 09014 ಸಂಖ್ಯೆಯ ಒಟ್ಟು ಎರಡು ರೈಲುಗಳನ್ನು ಬಿಡಲಾಗುತ್ತಿದೆ ಎಂದು ಹೇಳಿದರು.

ಈ 2 ರೈಲುಗಳ ಬುಕಿಂಗ್ ಅನ್ನು 12 ಅಕ್ಟೋಬರ್ 2023 ರಿಂದ ಎಲ್ಲ PRS ಕೌಂಟರ್‌ಗಳಲ್ಲಿ ಮತ್ತು IRCTC ವೆಬ್‌ಸೈಟ್‌ನಲ್ಲಿ ತೆರೆಯಲಾಗುತ್ತದೆ. ವಿಶೇಷ ದರದಲ್ಲಿ ವಿಶೇಷ ರೈಲುಗಳಾಗಿ ಓಡಿಸಲಾಗುವುದು. ಆದ್ದರಿಂದ, ಈ ರೈಲಿನಲ್ಲಿ ನಿಲುಗಡೆ ಸಮಯ ಮತ್ತು ಪ್ರಯಾಣದ ಬಗ್ಗೆ ವಿವರವಾದ ಮಾಹಿತಿಗಾಗಿ ಪ್ರಯಾಣಿಕರು www.enquiry ವೆಬ್​ ಸೈಟ್​ಗೆ ಭೇಟಿ ನೀಡಬೇಕು. Indianrail.gov.in ನಲ್ಲಿ ಸಹ ಚೆಕ್​ ಮಾಡಬಹುದು. ಭಾರತ-ಪಾಕಿಸ್ತಾನ ನಡುವಿನ ಈ ಪಂದ್ಯ ವೀಕ್ಷಿಸಲು ಜನಸಾಗರವೇ ಹರಿದು ಬರಲು ಮುಂದಾಗಿದ್ದು, ರೈಲ್ವೆ ಇಲಾಖೆ ಕೈಗೊಂಡಿರುವ ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

ಇದನ್ನೂ ಓದಿ : ಹಿಟ್​ಮ್ಯಾನ್​ ರೋಹಿತ್ ಶರ್ಮಾ ಹೆಸರಿನಲ್ಲಿ 'ನೂರಾರು' ದಾಖಲೆ : ಏನೆಲ್ಲಾ ಇಲ್ಲಿ ನೋಡಿ..

09013 ಸಂಖ್ಯೆಯ ರೈಲು ಮುಂಬೈ ಸೆಂಟ್ರಲ್‌ನಿಂದ ಅಹಮದಾಬಾದ್ ಮಾರ್ಗದಲ್ಲಿ ಶುಕ್ರವಾರ (13 ಅಕ್ಟೋಬರ್ 2023 ರಂದು) 21.30 ಗಂಟೆಗೆ ಹೊರಟು ಮರುದಿನ 05.30 ಗಂಟೆಗೆ ಅಹಮದಾಬಾದ್ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 09014 ಅಹಮದಾಬಾದ್ - ಮುಂಬೈ ಸೆಂಟ್ರಲ್ ವಿಶೇಷ ರೈಲು 15 ಅಕ್ಟೋಬರ್ 2023 ರಂದು ಭಾನುವಾರ 04.00 ಗಂಟೆಗೆ ಅಹಮದಾಬಾದ್‌ನಿಂದ ಹೊರಟು ಅದೇ ದಿನ 12.10 ಗಂಟೆಗೆ ಮುಂಬೈ ಸೆಂಟ್ರಲ್ ತಲುಪಲಿದೆ. ಈ ರೈಲು ದಾದರ್, ಬೊರಿವಲಿ, ಪಾಲ್ಘರ್, ವಾಪಿ, ವಲ್ಸಾದ್, ನವಸಾರಿ, ಸೂರತ್ ಮತ್ತು ವಡೋದರಾ ಜಂಕ್ಷನ್ ನಿಲ್ದಾಣಗಳಲ್ಲಿ ಮುಂಬೈನಿಂದ ಅಹಮದಾಬಾದ್ ಮತ್ತು ಅಹಮದಾಬಾದ್‌ನಿಂದ ಮುಂಬೈ ಮಾರ್ಗಗಳಲ್ಲಿ ನಿಲ್ಲುತ್ತದೆ. 2 ಟೈರ್ ಎಸಿ, 3 ಟೈರ್ ಎಸಿ, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಜನರಲ್ ಬೋಗಿಗಳನ್ನು ಹೊಂದಿರುತ್ತದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಭಾರತ ಪಾಕ್​ ಹೈವೋಲ್ಟೇಜ್​ ಪಂದ್ಯ.. ವಿಶ್ವಕಪ್​ ಉದ್ಘಾಟನಾ ಸಂಭ್ರಮ, ಮುಂಬೈಯಿಂದ ವಿಶೇಷ ರೈಲಿನ ವ್ಯವಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.