ETV Bharat / bharat

5 ಸಾವಿರ ರೂ.ಯಿಂದ ಸಾವಿರಾರು ಕೋಟಿಯ ಒಡೆಯನಾದ ರಾಕೇಶ್ ಜುಂಜುನ್ವಾಲಾ ರೋಚಕ ಜರ್ನಿ

ಷೇರು ಮಾರುಕಟ್ಟೆಯ ಬಿಗ್ ಬುಲ್ ಖ್ಯಾತಿಯ ರಾಕೇಶ್ ಜುಂಜುನ್ವಾಲಾ ವಹಿವಾಟು ನಿಲ್ಲಿಸಿ ಇಂದು ಮರೆಯಾಗಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯ ದೈತ್ಯ ಹೂಡಿಕೆದಾರರಾಗಿದ್ದ ಇವರು ಅದೆಷ್ಟೋ ಹೂಡಿಕೆದಾರರಿಗೆ ಮಾದರಿ ಮತ್ತು ಮಾರ್ಗದರ್ಶಕ.

Etv Bharat ರಾಕೇಶ್ ಜುಂಜುನ್ವಾಲಾ Rakesh Jhunjhunwala
Etv Bharat ರಾಕೇಶ್ ಜುಂಜುನ್ವಾಲಾ
author img

By

Published : Aug 14, 2022, 12:59 PM IST

ಷೇರು ಮಾರುಕಟ್ಟೆಯ ಬಿಗ್ ಬುಲ್, ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾದ ರಾಕೇಶ್ ಜುಂಜುನ್ವಾಲಾ ಇಂದು ಕೊನೆಯುಸಿರೆಳೆದಿದ್ದಾರೆ. ಭಾರತೀಯ ಆರ್ಥಿಕತೆ ಪ್ರಗತಿಯ ಬಗ್ಗೆ ಅಪಾರ ಆಶಾವಾದಿಯಾಗಿದ್ದ ರಾಕೇಶ್ ಹೆಜ್ಜೆ ಗುರುತುಗಳು ಮುಂಬೈ ದಲಾಲ್ ಸ್ಟ್ರೀಟ್​ನಲ್ಲಿ ಅಚ್ಚಳಿಯದಂತಿವೆ. ಷೇರುಪೇಟೆಯಲ್ಲಿ 37 ವರ್ಷಗಳ ಕಾಲ ಪಾರುಪತ್ಯ ಮೆರೆದು ಅದೆಷ್ಟೋ ಹೂಡಿಕೆದಾರರಿಗೆ ಇವರು ಮಾದರಿ ಮತ್ತು ಮಾರ್ಗದರ್ಶಕರಾಗಿದ್ದರು.

ಷೇರು ಮಾರುಕಟ್ಟೆಯ ದೈತ್ಯ ಹೂಡಿಕೆದಾರನಾಗಿ ಬೆಳೆದ ರಾಕೇಶ್ ಜುಂಜುನ್ವಾಲಾ ಬದುಕು ಕೂಡಾ ರೋಚಕವಾಗಿದೆ. 62 ವರ್ಷಗಳ ಜೀವಿತಾವಧಿಯಲ್ಲಿ 37 ವರ್ಷ ಷೇರು ಮಾರುಕಟ್ಟೆಯ ಏರಿಳಿತದೊಂದಿಗೆ ರಾಕೇಶ್ ಯಶಸ್ಸು ಕಂಡವರು. ರಾಜಸ್ಥಾನದ ಮೂಲದ ಇವರು ಜುಲೈ 5, 1960 ರಂದು ಮುಂಬೈನಲ್ಲಿ ಜನಿಸಿದ್ದರು. ವಾಣಿಜ್ಯ ನಗರಿಯಲ್ಲೇ ವಿದ್ಯಾಭ್ಯಾಸ ಮಾಡಿದರು. ಚಾರ್ಟೆಡ್ ಅಕೌಂಟೆಂಟ್‌ ಪದವೀಧರರಾಗಿದ್ದ ಇವರಿಗೆ ಷೇರು ಮಾರುಕಟ್ಟೆಯ ಮೇಲೆ ವಿಶೇಷ ಆಸಕ್ತಿ ಇತ್ತು. ಅಂತೆಯೇ ಕೋರ್ಸ್ ಮುಗಿಯುತ್ತಿದ್ದಂತೆ ಷೇರುಪೇಟೆ ಪ್ರವೇಶಿಸಲು ನಿರ್ಧರಿಸುತ್ತಾರೆ. ಆದ್ರೆ ಅವರ ತಂದೆ ವಹಿವಾಟು ಮಾಡಲು ಹಣ ಕೊಡಲ್ಲ, ಬದಲಾಗಿ ನೀನೇ ದುಡಿದು ಹೂಡಿಕೆ ಮಾಡು ಅಂತಾರೆ. ಮುಂದೇನಾಯ್ತು ಗೊತ್ತೇ?

5 ಸಾವಿರ ರೂ.ನಿಂದ ಸಾವಿರಾರು ಕೋಟಿಯ ಒಡೆಯ: ಆ ಬಳಿಕ 1985ರಲ್ಲಿ ಕೇವಲ 5 ಸಾವಿರ ಹಣದಿಂದ ಮುಂಬೈ ದಲಾಲ್ ಸ್ಟ್ರೀಟ್​​ಗೆ ಬರ್ತಾರೆ. ಆ ಬಳಿಕ ಹಂತಹಂತವಾಗಿ ಮಾರುಕಟ್ಟೆಯ ಆಳ ಅರಿತರು. ಆರಂಭದಲ್ಲೇ ಟಾಟಾ ಟೀ ಷೇರು ಇವರಿಗೆ ಮಲ್ಟಿ ಬ್ಯಾಗರ್ ಆಗಿ ಲಾಭ ತಂದುಕೊಡುತ್ತೆ. ಬಳಿಕ 1992ರಲ್ಲಿ ಹರ್ಷದ್ ಮೆಹ್ತಾ ಹಗರಣ ಬಯಲಾದಾಗ ಮಾರುಕಟ್ಟೆ ಪಾತಾಳಕ್ಕಿಳಿದಿತ್ತು. ಆದ್ರೆ ತಮ್ಮ ಚಾಣಾಕ್ಷತೆಯಿಂದ ರಾಕೇಶ್, ಶಾರ್ಟ್ ಸೆಲ್ಲಿಂಗ್ ಮಾಡಿ ಕೋಟಿ ಕೋಟಿ ರೂ. ಹಣ ಗಳಿಸಿದ್ದರು. ಆರಂಭದಿಂದಲೂ ಟಾಟಾ ಇವರ ಅದೃಷ್ಟದ ಸಂಸ್ಥೆಯಾಗಿತ್ತು. 2003ರಲ್ಲಿ ಲಿಸ್ಟ್ ಆದ ಟಾಟಾ ಸಂಸ್ಥೆಯ ಟೈಟನ್ ಷೇರು ರಾಕೇಶ್ ಅವರನ್ನು ಕೆಲವೇ ವರ್ಷಗಳಲ್ಲಿ ಬಿಲಿಯನೇರ್ ಹೂಡಿಕೆದಾರನ್ನಾಗಿಸಿತು. ನಂತರ ಜುಂಜುನ್ವಾಲಾ ಹಿಂತಿರುಗಿ ನೋಡಿದ್ದಿಲ್ಲ. ಇವರ ಪತ್ನಿ ರೇಖಾ ಕೂಡ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ.

ಇದೀಗ ರಾಕೇಶ್ 46 ಸಾವಿರ ಕೋಟಿ ಆಸ್ತಿಯ ಒಡೆಯ. ದೇಶದ 36ನೇ ಹಾಗೂ ವಿಶ್ವದ 438ನೇ ಶ್ರೀಮಂತ ವ್ಯಕ್ತಿ. ಟೈಟನ್, ಸ್ಟಾರ್​ ಹೆಲ್ತ್​​, ಟಾಟಾ ಮೋಟಾರ್ಸ್​​​ ಮತ್ತು ಮೆಟ್ರೋ ಬಾಂಡ್​ ಸೇರಿ 47 ಸಂಸ್ಥೆಗಳಲ್ಲಿ ರಾಕೇಶ್ ಹೂಡಿಕೆ ಮಾಡಿದ್ದಾರೆ. ಆದರೆ ಟೈಟನ್‌, ಟಾಟಾ ಟೀ, ಟಾಟಾ ಮೋಟರ್ಸ್‌ ಷೇರು ಭಾರಿ ಲಾಭ ತಂದು ಕೊಟ್ಟಿವೆ.

ಷೇರು ಮಾರುಕಟ್ಟೆ ಅಷ್ಟೇ ಅಲ್ಲದೇ, ಸಿನಿಮಾ ಹಾಗೂ ವಾಯುಯಾನ ಸೇವೆಯಲ್ಲೂ ರಾಕೇಶ್ ಅಡಿ ಇಟ್ಟಿದ್ದರು. ರಾರೆ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆ ಕೂಡ ಕಟ್ಟಿದ್ದರು. ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರು. ಸಮಾಜ ಸೇವೆಗೂ ನೂರಾರು ಕೋಟಿ ದಾನ ಮಾಡಿ ಮಾನವೀಯತೆ ತೋರಿದ್ದರು. ಇತ್ತೀಚೆಗಷ್ಟೇ ಆಕಾಸ ಏರ್​ಲೈನ್ಸ್ ಆರಂಭಿಸಿ, ಕಳೆದ ವಾರವಷ್ಟೇ ಮೊದಲ ವಿಮಾನ ಹಾರಾಟ ನಡೆಸಿತ್ತು. ಈ ವಿಮಾನಗಳು ರೆಕ್ಕೆ ಪುಕ್ಕ ಬಿಚ್ಚಿ ಹಾರುವ ಮುನ್ನವೇ ಅದರ ಸಂಸ್ಥಾಪಕ ಮರೆಯಾಗಿದ್ದಾರೆ.

ಇದನ್ನೂ ಓದಿ: ಬಿಲಿಯನೇರ್‌ ಹೂಡಿಕೆದಾರ ರಾಕೇಶ್​ ಜುಂಜುನ್ವಾಲಾ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.