ETV Bharat / bharat

ಮಹಿಳೆಯ ಮನೆಗೆ ಬೆಂಕಿ ಹಚ್ಚಲು ಬಂದು ತಾನೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ! - ಮಹಿಳೆಯ ಮನೆಗೆ ಬೆಂಕಿ

ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಕೆಯ ಮನೆಗೆ ಬಂದು ಕಬ್ಬಿಣದ ಏಣಿಯ ಮೂಲಕ ಎರಡನೇ ಮಹಡಿ ಏರಿದ್ದ. ಬಾಗಿಲು ಮುರಿದು ಆಕೆಯಿದ್ದ ಬೆಡ್​ರೂಮ್​ಗೆ ಬೆಂಕಿ ಹಚ್ಚಿದ್ದಾನೆ. ಆದರೆ, ಮನೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಸ್ಥಳೀಯರು ಬರುವುದು ನೋಡಿ ಆರೋಪಿಯು ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.

ಕೋಯಿಕ್ಕೋಡ್
Kozhikode
author img

By

Published : Mar 29, 2022, 4:00 PM IST

ಕೋಯಿಕ್ಕೋಡ್ (ಕೇರಳ): ಮಹಿಳೆಯ ಮನೆಗೆ ಬೆಂಕಿ ಹಚ್ಚಲು ಬಂದ ವ್ಯಕ್ತಿಯೋರ್ವ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾದಪುರಂನಲ್ಲಿ ನಡೆದಿದೆ. ಇಲ್ಲಿನ ವಲಯಂ ನಿವಾಸಿ 41 ವರ್ಷದ ರತ್ನೇಶ್​ ಎಂಬಾತ ಮೃತ ವ್ಯಕ್ತಿ.

ತನ್ನ ಮನೆಯಿಂದ ಕೇವಲ ಅರ್ಧ ಕಿಲೋ ಮೀಟರ್​ ದೂರದಲ್ಲಿರುವ ಮಹಿಳೆಯ ಮನೆಗೆ ನುಗ್ಗಿ ಆಕೆಗೆ ಬೆಂಕಿ ಹಚ್ಚಲು ರತ್ನೇಶ್​ ಸಂಚು ಹೂಡಿದ್ದ. ಅಂತೆಯೇ ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಆಕೆಯ ಮನೆಗೆ ಬಂದು ಕಬ್ಬಿಣದ ಏಣಿ ಬಳಸಿ ಎರಡನೇ ಮಹಡಿ ಏರಿದ್ದ. ಬಾಗಿಲು ಮುರಿದು ಆಕೆ ಇದ್ದ ಬೆಡ್​ರೂಮ್​ಗೆ ಬೆಂಕಿ ಹಚ್ಚಿದ್ದ.

ಆದರೆ, ಮನೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ನೆರೆ ಮನೆಯ ಒಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮನೆಯ ಕಡೆ ಓಡಿ ಬರುತ್ತಿದ್ದಾಗ ಆರೋಪಿಯು ಮಹಡಿಯಿಂದ ಕೆಳಗಡೆ ಇಳಿದು ಬಂದಿದ್ದಾನೆ. ಅಲ್ಲದೇ, ತನ್ನ ಮೇಲೆ ತಾನೇ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ಇಡೀ ದೇಹಕ್ಕೆ ಬೆಂಕಿ ವ್ಯಾಪಿಸಿ ಮನೆ ಗೇಟ್​ ಬಳಿ ಕುಸಿದು ಮೃತಪಟ್ಟಿದ್ದಾನೆ.

ಈ ಘಟನೆಯಲ್ಲಿ ಮಹಿಳೆ, ಆಕೆಯ ಸಹೋದರ ಹಾಗು ಅತ್ತಿಗೆಗೆ ಸುಟ್ಟ ಗಾಯಗಳಾಗಿವೆ. ಇವರನ್ನು ವಡಕಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಗಾಯಾಳು ಮಹಿಳೆಯ ಮದುವೆ ಏಪ್ರಿಲ್​ನಲ್ಲಿ ನಿಗದಿಯಾಗಿತ್ತು ಎನ್ನಲಾಗಿದೆ. ಆದ್ರೆ ಆರೋಪಿಯು ಮಹಿಳೆಯ ಮನೆಗೆ ಬೆಂಕಿ ಹಚ್ಚಲು ನಿರ್ಧರಿಸಿದ್ದೇಕೆ ಎಂಬ ಕುರಿತಾಗಿ ಸದ್ಯ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯುವ ಗೀಳು; ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.