ನವದೆಹಲಿ: ಭೂತಾನ್ ರಾಷ್ಟ್ರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ನ್ಗಡಗ್ ಪೆಲ್ ಗಿ ಖೋರ್ಲೋ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ. ಕಳೆದ ಕೆಲ ವರ್ಷಗಳಿಂದ, ಅದರಲ್ಲಿಯೂ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪಿಎಂ ಮೋದಿ ಭೂತಾನ್ಗೆ ನೀಡಿದ ಬೇಷರತ್ ಬೆಂಬಲ ಹಾಗೂ ಸ್ನೇಹದ ಗೌರವಾರ್ಥವಾಗಿ ಭೂತಾನ್ ರಾಷ್ಟ್ರೀಯ ದಿನವಾದ ಇಂದು ಈ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಇದಕ್ಕೆ ಪ್ರಧಾನಿ ಮೋದಿ ಕೂಡ ಕೃತಜ್ಞತೆ ಸಲ್ಲಿಸಿದ್ದಾರೆ.
-
Thank you, Lyonchhen @PMBhutan! I am deeply touched by this warm gesture, and express my grateful thanks to His Majesty the King of Bhutan. https://t.co/uVWC4FiZYT
— Narendra Modi (@narendramodi) December 17, 2021 " class="align-text-top noRightClick twitterSection" data="
">Thank you, Lyonchhen @PMBhutan! I am deeply touched by this warm gesture, and express my grateful thanks to His Majesty the King of Bhutan. https://t.co/uVWC4FiZYT
— Narendra Modi (@narendramodi) December 17, 2021Thank you, Lyonchhen @PMBhutan! I am deeply touched by this warm gesture, and express my grateful thanks to His Majesty the King of Bhutan. https://t.co/uVWC4FiZYT
— Narendra Modi (@narendramodi) December 17, 2021
ಭಾರತವು ಯಾವಾಗಲೂ ಭೂತಾನ್ ಅನ್ನು ತನ್ನ ಆಪ್ತ ರಾಷ್ಟ್ರ ಮತ್ತು ಅಲ್ಲಿನ ಜನರನ್ನು ನೆರೆಹೊರೆಯವರಂತೆ ಗೌರವಿಸುತ್ತದೆ. ನಾವು ಭೂತಾನ್‌ನ ಅಭಿವೃದ್ಧಿ ಪ್ರಯಾಣದಲ್ಲಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರಿಗೆ ಈಗಾಗಲೇ ಸೌದಿ ಅರೇಬಿಯಾ, ಅಫ್ಘಾನಿಸ್ತಾನ, ಪ್ಯಾಲೆಸ್ತೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ರಷ್ಯಾ, ಮಾಲ್ಡೀವ್ಸ್ ಸೇರಿದಂತೆ ಕೆಲ ರಾಷ್ಟ್ರಗಳು ವಿವಿಧ ಕಾರಣಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.