ETV Bharat / bharat

32 ವರ್ಷಗಳಿಂದ ಹೆಂಡತಿಯ ಚಿತಾಭಸ್ಮದೊಂದಿಗೆ ಬದುಕುತ್ತಿರುವ ಭೋಲಾನಾಥ್.. ಕಾರಣ? - litterateur from Purnia, has preserved the ashes of his wife

ಪೂರ್ಣಿಯಾದ 90 ವರ್ಷದ ಸಾಹಿತಿ ಭೋಲಾನಾಥ್ ಅಲೋಕ್ ಅವರು ತಮ್ಮ ಪತ್ನಿಯ ಚಿತಾಭಸ್ಮವನ್ನು ಕಳೆದ 32 ವರ್ಷಗಳಿಂದ ಸಂರಕ್ಷಿಸಿದ್ದಾರೆ. ಅವರ ಸಾವಿನ ನಂತರ ಪತ್ನಿಯ ಚಿತಾಭಸ್ಮವನ್ನು ಎದೆಯ ಮೇಲೆ ಇಟ್ಟು ಕೊನೆಯ ಯಾತ್ರೆಯನ್ನು ಮಾಡಬೇಕೆಂಬುದು ಅವರ ಆಸೆಯಾಗಿದೆಯಂತೆ.

litterateur from Purnia, has preserved the ashes of his wife
ಹೆಂಡತಿಯ ಚಿತಾಭಸ್ಮವನ್ನು ಸಂರಕ್ಷಿಸಿಟ್ಟುಕೊಂಡಿರುವ ಭೋಲಾನಾಥ್
author img

By

Published : Feb 14, 2022, 8:27 PM IST

ಪೂರ್ಣಿಯಾ (ಬಿಹಾರ): ಪೂರ್ಣಿಯಾ ರುಪೌಲಿಯ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ಮಡದಿಯ ಚಿತಾಭಸ್ಮವನ್ನು, ಕಳೆದ 32 ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದು, ಇಂದಿಗೂ ಆಕೆಯ ನೆನಪಿನಲ್ಲಿ ಬದುಕುತ್ತಿದ್ದಾರೆ.

ಹೆಂಡತಿಯ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಭೋಲಾನಾಥ್ ಅಲೋಕ್​ ಅವರು, ಚಿತಾಭಸ್ಮವನ್ನು ನೀರಿನಲ್ಲಿ ಬಿಡದೇ ತಮ್ಮ ತೋಟದ ಮರದ ಕೊಂಬೆಗೆ ನೇತು ಹಾಕಿ ಕಾಪಾಡಿಕೊಂಡು ಬಂದಿದ್ದಾರೆ. ಸತ್ತ ನಂತರ ಅವರಿಬ್ಬರು ಒಟ್ಟಿಗೆ ಇಹಲೋಕ ತ್ಯಜಿಸಬೇಕು ಎಂಬ ಉದ್ದೇಶದಿಂದ ಇದನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಅವರು ಸತ್ತ ನಂತರ ಈ ಚಿತಾಭಸ್ಮವನ್ನು ಅವರ ಎದೆಗೆ ಜೋಡಿಸಬೇಕಂತೆ.

ಹೆಂಡತಿಯ ಚಿತಾಭಸ್ಮವನ್ನು ಸಂರಕ್ಷಿಸಿಟ್ಟುಕೊಂಡಿರುವ ಭೋಲಾನಾಥ್

ನಾವು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇವು. ನಂತರ ನಾವಿಬ್ಬರೂ ಬದುಕಿದ್ರೂ ಒಟ್ಟಿಗೆ, ಸತ್ತರು ಒಟ್ಟಿಗೆ ಸಾಯಬೇಕು ಎಂದು ಪ್ರತಿಜ್ಞೆ ಮಾಡಿದ್ದೇವು. ಆದ್ರೆ ಆಕೆ ನನ್ನನ್ನು ಬಿಟ್ಟು ಹೋದಳು, ನಾನು ಸಾಯಲು ಸಾಧ್ಯವಾಗಲಿಲ್ಲ. ನಾನು ನನ್ನ ಹೆಂಡತಿಯ ನೆನಪುಗಳೊಂದಿಗೆ ಬದುಕುತ್ತಿದ್ದೇನೆ. ಮನೆಯ ತೋಟದಲ್ಲಿ ಮರಕ್ಕೆ ನೇತಾಡುತ್ತಿರುವ ಕಟ್ಟು ತೋರಿಸಿ 32 ವರ್ಷಗಳಿಂದ ಪತ್ನಿಯ ಚಿತಾಭಸ್ಮವನ್ನು ಕೊಂಬೆಗೆ ನೇತು ಹಾಕಿಕೊಂಡು ಸುರಕ್ಷಿತವಾಗಿ ಇಡುತ್ತಿದ್ದೇನೆ. ಬಹುಶಃ ನನ್ನ ಪದ್ಮಾ (ಹೆಂಡತಿಯ ಹೆಸರು) ಇಲ್ಲ, ಆದರೆ ಈ ಚಿತಾಭಸ್ಮ ಅವಳ ನೆನಪುಗಳನ್ನು ಅಳಿಸಲು ಬಿಡುವುದಿಲ್ಲ. ನನ್ನ ಕೊನೆಯ ಪ್ರಯಾಣದಲ್ಲಿ ಹೆಂಡತಿಯ ಚಿತಾಭಸ್ಮವನ್ನು ನನ್ನೊಂದಿಗೆ ಇಡುವಂತೆ ಮಕ್ಕಳಿಗೆ ಹೇಳಿದ್ದೇನೆ ಎಂದು ಭೋಲಾನಾಥ್ ಹೇಳುತ್ತಾರೆ.

ಇದನ್ನೂ ಓದಿ: ತಮ್ಮನ್ನ 'ನಿಜವಾದ ಸಮಾಜವಾದಿ' ಎಂದಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ನಿತೀಶ್ ಕುಮಾರ್

ನನಗೆ ನನ್ನ ಭರವಸೆಯನ್ನು ಪೂರೈಸಲು ಬೇರೆ ದಾರಿ ಕಾಣಲಿಲ್ಲ, ಆದ್ದರಿಂದ ನಾನು ಈ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ನಾನು ಪ್ರತಿದಿನ ಈ ಚಿತಾಭಸ್ಮವನ್ನು ನೋಡುತ್ತೇನೆ. ಈ ಮೂಲಕ ಪದ್ಮಾ ನನ್ನೊಂದಿಗೆ ಇದ್ದಾಳೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಶುಭ ಕಾರ್ಯಗಳು ನಡೆದಾಗ ಮರಕ್ಕೆ ಹೋಗಿ ಆಶೀರ್ವಾದ ಪಡೆಯುತ್ತೇವೆ. ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಇಡುತ್ತೇವೆ. ನನ್ನ ಮಗಳು ಎಲ್ಲಿಗಾದ್ರೂ ಹೋಗುವುದಕ್ಕಿಂತ ಮುನ್ನ ತಾಯಿಯ ಆಶೀರ್ವಾದ ಪಡೆಯಲು ಮರೆಯುವುದಿಲ್ಲ ಎಂದು ಹಿರಿಯ ಸಾಹಿತಿ ಭೋಲಾನಾಥ್ ಅಲೋಕ್ ಹೇಳುತ್ತಾರೆ.

ಅಸ
ಭೋಲಾನಾಥ್ ಅವರ ಹೆಂಡತಿ ಪದ್ಮಾ

ಇಂದಿಗೂ ಹೆಂಡತಿಯ ಬಗ್ಗೆ ಮಾತನಾಡುವಾಗ ಭೋಲಾನಾಥ್​ ಅವರ ಕಣ್ಣಲ್ಲಿ ಕಣ್ಣೀರು ಬರುತ್ತಿತ್ತು. ಸುಮಾರು 32 ವರ್ಷಗಳ ಹಿಂದೆ ಅವರ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಆದ್ರೆ ಭೋಲಾನಾಥ್​ ತಮ್ಮ ಮಗಳಿಗೋಸ್ಕರ ಇಂದಿಗೂ ಹೆಂಡತಿಯ ನೆನಪಿನ ಜೊತೆ ಬದುಕುತ್ತಿದ್ದಾರೆ.

ಈಗಲೂ ಪ್ರತಿನಿತ್ಯ ಅವರು ಪತ್ನಿಯನ್ನು ನೆನೆದು ಭಾವುಕರಾಗುತ್ತಾರೆ. ಇಂದಿನ ಯುವ ಪೀಳಿಗೆ ಪ್ರೇಮಿಗಳ ದಿನವನ್ನು ಆಚರಿಸುತ್ತದೆ, ಆದರೆ ನಿಜವಾದ ಪ್ರೀತಿ ಏನೆಂದು ಅವರು ಇವರನ್ನು ನೋಡಿ ಕಲಿಯಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.