ETV Bharat / bharat

ನದಿಯಲ್ಲಿ ನಾಣ್ಯ ತೆಗೆಯಲು ಹೋದವನಿಗೆ ಸಿಕ್ತು ಕಚ್ಚಾ ಗ್ರೆನೇಡ್..! - ಪಹುಜ್ ನದಿ

ನದಿಯಲ್ಲಿ ನಾಣ್ಯ ತೆಗೆಯಲು ಹೋದ ಯುವಕನಿಗೆ ಕಚ್ಚಾ ಗ್ರೆನೇಡ್ ಸಿಕ್ಕಿದ್ದು, ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಚ್ಚಾ ಗ್ರೆನೇಡ್
ಕಚ್ಚಾ ಗ್ರೆನೇಡ್
author img

By

Published : Jul 16, 2021, 6:27 AM IST

ಭಿಂದ್ (ಮಧ್ಯಪ್ರದೇಶ): ಮಧ್ಯಪ್ರದೇಶ - ಉತ್ತರಪ್ರದೇಶ ಗಡಿಯ ಮಿಹೋನಾ ಪ್ರದೇಶದ ನದಿಯಲ್ಲಿ ಕಚ್ಚಾ ಗ್ರೆನೇಡ್​ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉತ್ತರಪ್ರದೇಶದ ಜಲಾನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಥಳೀಯ ಯುವಕನೊಬ್ಬ ಪಹುಜ್ ನದಿಯಲ್ಲಿ ನಾಣ್ಯಗಳನ್ನು ತೆಗೆಯಲು ಹೋದ ವೇಳೆ ಆತನ ಕೈಗೆ ಕಚ್ಚಾ ಗ್ರೆನೇಡ್​ ಸಿಕ್ಕಿದ್ದು, ಗಾಬರಿಯಾಗಿದ್ದಾನೆ. ಆದರೂ, ಸ್ಫೋಟಕ ವಸ್ತು ಹೊರ ತಂದಿದ್ದು, ಸ್ಥಳೀಯರು ಅದನ್ನು ಸೇತುವೆ ಬಳಿ ಎಸೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಜಮೀನು ವಿವಾದ:‌ ಮಚ್ಚು, ದೊಣ್ಣೆಗಳಿಂದ ಹೊಡೆದಾಡಿಕೊಂಡ ದಾಯದಿಗಳು

ಸದ್ಯ ಸ್ಫೋಟಕ ವಸ್ತುವನ್ನು ಬಾಂಬ್ ಸ್ಕ್ವಾಡ್​ ವಶಕ್ಕೆ ಪಡೆದು ಪರಿಶೀಲಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.