ಭಿಲ್ವಾರ(ರಾಜಸ್ಥಾನ) : ಭಿಲ್ವಾರಾ ನಗರದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 79ರಲ್ಲಿ ಸಾರಿಗೆ ಇಲಾಖೆ ನೌಕರರು ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಃ ಫೀಲ್ಡ್ಗಿಳಿದು ಮಾವಲಿ ಶಾಸಕ ಧರಂ ನಾರಾಯಣ ಜೋಶಿ ಅವರು ಪರಿಶೀಲಿಸಿದ್ದಾರೆ. ಈ ವೇಳೆ ಸಾರಿಗೆ ಇಲಾಖೆ ನೌಕರರಿಗೆ ಶಾಸಕರು ಛೀಮಾರಿ ಹಾಕಿದ್ದಾರೆ. ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಉದ್ಯೋಗಿಯೊಬ್ಬರು ಶಾಸಕರ ಬೈಗುಳಕ್ಕೆ ಹೆದರಿ ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಇದಕ್ಕೂ ಮೊದಲು ಭಿಲ್ವಾರದ ಸಾರಿಗೆ ಇಲಾಖೆ ಸಿಬ್ಬಂದಿ ಜನಸಾಮಾನ್ಯರಿಂದ ಅಕ್ರಮ ವಸೂಲಿ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು.
ವಿವರ : ಮಾವಲಿ ಶಾಸಕ ಧರಂ ನಾರಾಯಣ ಜೋಶಿ ಗುರುವಾರ ಸಂಜೆ ಜೈಪುರದಿಂದ ಉದಯಪುರಕ್ಕೆ ಹೋಗುತ್ತಿದ್ದರು. ಆ ವೇಳೆ ಭಿಲ್ವಾರಾ ಬಳಿಯ ರಾಷ್ಟ್ರೀಯ ಹೆದ್ದಾರಿ 79ರ ಹಜಾರಿ ಖೇಡಾ ಬಳಿ ಸಾರಿಗೆ ತಪಾಸಣಾ ವಾಹನ ದಳ ನಿಂತಿತ್ತು. ಸಾರಿಗೆ ದಳದ ವಾಹನದಲ್ಲಿ ಇನ್ಸ್‌ಪೆಕ್ಟರ್ ಚಂಚಲ್ ಮಾಥುರ್ ಹಾಗೂ ರಸ್ತೆಯಲ್ಲಿದ್ದ ಇಬ್ಬರು ಸಮವಸ್ತ್ರಧಾರಿಗಳು ಟ್ರಕ್ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು.
ಪರಿಣಾಮ ರಸ್ತೆಯಲ್ಲಿ ದೀರ್ಘ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಈ ವೇಳೆ ಏನಾಗಿರಬಹುದುದೆಂದು ನೋಡಲು ತಮ್ಮ ವಾಹನದಿಂದ ಇಳಿದು ಹೊರ ಬಂದಿದ್ದಾರೆ. ಆ ವೇಳೆ ಅಕ್ರಮ ವಸೂಲಿ ಮಾಡುತ್ತಿದ್ದ ಸಾರಿಗೆ ಸಮವಸ್ತ್ರಧಾರಿ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿ, ರಶೀದಿ ನೀಡದೆ ವಸೂಲಾತಿ ಮಾಡುತ್ತಿದ್ದಕ್ಕೆ ಕಾರಣ ಕೇಳಿದ್ದಾರೆ. ಅಲ್ಲದೆ ಅವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕುಡಿದು ಬಂದು ಕುಟುಂಬಕ್ಕೆ ಬೆಂಕಿ ಹಚ್ಚಿದ ದುರುಳ: ಹೆಂಡತಿ ಸಾವು, ಮಕ್ಕಳು ಗಂಭೀರ