ETV Bharat / bharat

'ಭಾರತದ ಧ್ವಜ ನಮ್ಮ ಪ್ರಾಣ ಉಳಿಸಿತು'.. ಉಕ್ರೇನ್​​ನಿಂದ ವಾಪಸ್​​ ಬಂದ ವಿದ್ಯಾರ್ಥಿನಿ ಶಿವಾಂಗಿ ಮನದಾಳ - ಭಾರತದ ಧ್ವಜ ನಮ್ಮ ಪ್ರಾಣ ಉಳಿಸಿತು

ಉಕ್ರೇನ್​ನಿಂದ ಸಾವಿರಾರು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್​ ಆಗಿದ್ದು, ಇವರೊಂದಿಗೆ ಆಗಮಿಸಿರುವ ರಾಜಸ್ಥಾನ ಭಿಲ್ವಾರ್​​ನ ಶಿವಾಂಗಿ ತಾವು ಅನುಭವಿಸಿರುವ ಕಷ್ಟ ಬಿಚ್ಚಿಟ್ಟಿದ್ದಾರೆ.

bhilwara daughter shivangi
bhilwara daughter shivangi
author img

By

Published : Feb 28, 2022, 10:53 PM IST

ಭಿಲ್ವಾರ್​​(ರಾಜಸ್ಥಾನ): ಉಕ್ರೇನ್​ ವಿರುದ್ಧ ಸಮರ ಸಾರಿರುವ ರಷ್ಯಾ ಕಳೆದ ಐದು ದಿನಗಳಿಂದ ವಿವಿಧ ನಗರಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದು, ನೂರಾರು ನಾಗರಿಕರ ಹತ್ಯೆ ಮಾಡಿದೆ. ಇದರ ಮಧ್ಯೆ ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇಲ್ಲಿಯವರೆಗೆ 1400 ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್​​ ಆಗಿದ್ದಾರೆ.

ಉಕ್ರೇನ್​​ನಿಂದ ಭಾರತಕ್ಕೆ ಬಂದಿರುವ ಭಿಲ್ವಾರದ ಶಿವಾಂಗಿ 'ಈಟಿವಿ ಭಾರತ' ಜೊತೆ ತಮ್ಮ ಮನದಾಳ ಬಿಚ್ಚಿಟ್ಟಿದ್ದು, ಭಾರತದ ತ್ರಿವರ್ಣ ಧ್ವಜ ತಮ್ಮ ಜೀವ ಉಳಿಸಿತು ಎಂದಿದ್ದಾರೆ.

ಉಕ್ರೇನ್​​ನಿಂದ ವಾಪಸ್​​ ಬಂದ ವಿದ್ಯಾರ್ಥಿನಿ ಶಿವಾಂಗಿ ಮಾತು

ಇದನ್ನೂ ಓದಿರಿ: ಪದ್ಮವಿಭೂಷಣ ಜಗದ್ಗುರುಗಳ ಉತ್ತರಾಧಿಕಾರಿಯಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ!

ಉಕ್ರೇನ್​​ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಸಂಘರ್ಷ ಉಂಟಾಗುತ್ತಿದ್ದಂತೆ ಭಾನುವಾರ ತಾಯ್ನಾಡಿಗೆ ಮರಳಿದ್ದಾರೆ. ಭಿಲ್ವಾರ್ ತಲುಪುತ್ತಿದ್ದಂತೆ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದು, ಈ ವೇಳೆ ತಾನು ಅನುಭವಿಸಿರುವ ಕಷ್ಟದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್​ ಪರಿಸ್ಥಿತಿ ತುಂಬಾ ಭಯಾನಕವಾಗಿದೆ ಎಂದಿರುವ ಶಿವಾಂಗಿ, ತಮ್ಮ ಕಣ್ಣೆದುರೇ ಗುಂಡಿನ ಚಕಮಕಿ ನೋಡಿ, ಆತಂಕಕ್ಕೊಳಗಾಗಿದ್ದೆವು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಹಾಗೂ ತ್ರಿವರ್ಣ ಧ್ವಜ ಹೊಂದಿದ್ದ ಕಾರಣ ನಾವು ಸುರಕ್ಷಿತವಾಗಿ ಭಾರತಕ್ಕೆ ಬರಲು ಸಹಕಾರಿಯಾಯಿತು. ನಾವು ಪ್ರಯಾಣ ಮಾಡ್ತಿದ್ದ ಬಸ್​​​​ ಮುಂಭಾಗದಲ್ಲಿ ಭಾರತದ ರಾಷ್ಟ್ರಧ್ವಜವಿದ್ದ ಕಾರಣ ರಷ್ಯಾ ಹಾಗೂ ಉಕ್ರೇನ್ ಸೈನಿಕರು ನಮ್ಮ ಮೇಲೆ ಗುಂಡು ಹಾರಿಸಲಿಲ್ಲ ಎಂದರು. ಉಕ್ರೇನ್​​ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದು, ಅವರನ್ನೆಲ್ಲ ಆದಷ್ಟು ಬೇಗ ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.