ETV Bharat / bharat

ಖಮ್ಮಂನಲ್ಲಿ ಬಿಆರ್‌ಎಸ್‌ನ ಅದ್ಧೂರಿ ಬಹಿರಂಗ ಸಭೆ: ಮೂರು ರಾಜ್ಯದ ಮುಖ್ಯಮಂತ್ರಿಗಳು ಬರುವ ಸಾಧ್ಯತೆ

author img

By

Published : Jan 9, 2023, 7:10 PM IST

ಖಮ್ಮಂನ ರಾಜಕೀಯ ಬೆಳವಣಿಗೆ ಮತ್ತು ಭೌಗೋಳಿಕ ಲಕ್ಷಣಗಳನ್ನು ನೋಡಿ ಜಿಲ್ಲಾ ಕಚೇರಿ ಉದ್ಘಾಟನೆ - 18ರಂದು ಖಮ್ಮಂನಲ್ಲಿ ಬೃಹತ್​ ಸಮಾವೇಶ - ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗಳಿಗೆ ಆಹ್ವಾನ.

Bharat Rashtra Samithi
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ​ರಾವ್​

ತೆಲಂಗಾಣ: ರಾಷ್ಟ್ರ ರಾಜಕಾರಣ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ​ರಾವ್​ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಕಳೆದ ವರ್ಷ ಅಕ್ಟೋಬರ್​ 5 ರಂದು ಘೋಷಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್)​ ಎಂದಿದ್ದ ಅವರ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎಂದು ಮರುನಾಮಕರಣ ಮಾಡಿದ್ದರು. ಡಿಸೆಂಬರ್​ 15 ರಂದು ಪಕ್ಷದ ರಾಷ್ಟೀಯ ಕಚೇರಿಯನ್ನು ತೆಲಂಗಾಣದಲ್ಲಿ ತೆರದಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಭಾಗಹಿಸಿದ್ದರು.

ಭಾರತ್ ರಾಷ್ಟ್ರ ಸಮಿತಿಯ ಸಾರ್ವಜನಿಕ ಸಭೆಯನ್ನು ಇದೇ ತಿಂಗಳ 18 ರಂದು ಖಮ್ಮಂನಲ್ಲಿ ನಡೆಸಲು ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ​ರಾವ್ ನಿರ್ಧರಿಸಿದ್ದಾರೆ. ದೆಹಲಿ, ಪಂಜಾಬ್ ಮತ್ತು ಕೇರಳ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಭಗವಂತಮಾನ್, ಪಿಣರಾಯಿ ವಿಜಯನ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಈಗಾಗಲೇ ಕೇಜ್ರಿವಾಲ್, ಭಗವಂತಮಾನ್ ಮತ್ತು ಅಖಿಲೇಶ್ ಸಭೆಗೆ ಬರಲು ಒಪ್ಪಿಕೊಂಡಿದ್ದಾರೆ. ಸೋಮವಾರ ಕೇರಳ ಸಿಎಂ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಖಮ್ಮಂ ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಭೆ: 18ರಂದು ಖಮ್ಮಂ ಜಿಲ್ಲೆಯಲ್ಲಿ ನಡೆಯಲಿರುವ ಭಾರತ ಉದಯ ಸಾರ್ವಜನಿಕ ಸಭೆಯ ಬಗ್ಗೆ ಚರ್ಚೆ ನಡೆಸಲು ಇಂದು ಸಿಎಂ ಕೆಸಿಆರ್ ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಪುವ್ವಾಡ ಅಜಯ್ ಕುಮಾರ್, ಸಂಸದರಾದ ನಾಮ ನಾಗೇಶ್ವರ ರಾವ್, ರವಿಚಂದ್ರ, ಪಾರ್ಥಸಾರಥಿ ರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.

ಖಮ್ಮಂನಲ್ಲಿ ಜಿಲ್ಲಾಧಿಕಾರಿ ಕಚೇರಿ ಉಧ್ಘಾಟನೆ: 18 ರಂದು ಸಿಎಂ ಖಮ್ಮಂ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಬಿಆರ್​ಎಸ್ ಜಿಲ್ಲಾ ಪಕ್ಷದ ನೂತನ ಕಚೇರಿ ಉದ್ಘಾಟನೆ ನಡೆಯಲಿದೆ. ವೈದ್ಯಕೀಯ ಕಾಲೇಜು ಮತ್ತು ಫಾರ್ಮಸಿ ಕಾಲೇಜಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಬಳಿಕ ಖಮ್ಮಂ ಕಲೆಕ್ಟರೇಟ್ ಬಳಿಯ 100 ಎಕರೆ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಸಭೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ತಿಂಗಳ 12ರಂದು ಮೆಹಬೂಬಾಬಾದ್ ಹಾಗೂ ಭದ್ರಾದ್ರಿ ಕೊತಗುಡೆಂನಲ್ಲಿ ಜಿಲ್ಲಾ ಕಚೇರಿ ಉದ್ಘಾಟಿಸಿ ಸಭೆ ನಡೆಸಲಿದ್ದಾರೆ. 18ರಂದು ಖಮ್ಮಂ ನಡೆಯುವ ಸಭೆಗೆ ಮಹಬೂಬಾಬಾದ್, ಭದ್ರಾದ್ರಿ, ಸೂರ್ಯಪೇಟ್, ನಲ್ಗೊಂಡ, ವಾರಂಗಲ್, ಮುಳುಗು, ಭೂಪಾಲಪಲ್ಲಿ ಜಿಲ್ಲೆಗಳಿಂದ ಜನ ಸೇರಲಿದ್ದಾರೆ.

ಖಮ್ಮಂ ಸಭೆ ಮಾಡುವ ಉದ್ದೇಶ: ಕೆ ಚಂದ್ರಶೇಖರ್ ​ರಾವ್​ ರಾಷ್ಟ್ರೀಯ ಪಕ್ಷ ಘೋಷಿಸಿರುವುದರಿಂದ ಖಮ್ಮಂ ಕೇಂದ್ರವಾಗಿ ಮಾಡಿಕೊಮಡಿದ್ದಾರೆ. ಖಮ್ಮಂ ಮೂರು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು, ಇಲ್ಲಿ ಕಚೇರಿ ತೆರೆಯುವುದರಿಂದ ಪ್ರಭಾವ ಬೀರಲು ಸಹಕಾರಿ ಆಗಲಿದೆ ಎಂಬ ಉದ್ದೇಶ ಹೊಂದಿದ್ದಾರೆ. 18ರಂದು ಬೃಹತ್​ ಸಭೆ ಮಾಡುವುದರಿಂದ ಹೆಚ್ಚಿನ ಜನರನ್ನು ಸೆಳೆಯುವ ಉದ್ದೇಶವನ್ನೂ ಹಾಕಿಕೊಂಡಿದ್ದಾರೆ. ಛತ್ತೀಸ್‌ಗಢದಲ್ಲೂ ಇದೇ ರೀತಿಯ ಪಕ್ಷದ ಶಾಖೆ ಸ್ಥಾಪಿಸಲು ಕೆಸಿಆರ್​ ಯೋಜನೆ ರೂಪಿಸಿದ್ದಾರೆ.

ಖಮ್ಮಂನಲ್ಲಿ ಬಿಆರ್​ಎಸ್ ಸಾರ್ವಜನಿಕ ಸಭೆ: ಜಂಟಿ ಖಮ್ಮಂ ಜಿಲ್ಲೆಯ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಭೇಟಿ ಪ್ರಾಧಾನ್ಯತೆ ಪಡೆಯಲಿದೆ. ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಪ್ರಕರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಹೊತ್ತಿನಲ್ಲಿ ಸಿಎಂ ಭೇಟಿ ಕುತೂಹಲ ಮೂಡಿಸಿದೆ. 18ರಂದು ಖಮ್ಮಂನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕೆಸಿಆರ್ ಭಾಷಣ ಮಾಡಿರುವುದು ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಬಿಆರ್‌ಎಸ್ ರಾಷ್ಟ್ರೀಯ ಕಚೇರಿ ಉದ್ಘಾಟಿಸಿದ ಕೆಸಿಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.