ಹೈದರಾಬಾದ್: ಎಲ್ಲಕ್ಕಿಂತ ಮಾನವೀಯತೆ ದೊಡ್ಡದು. ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ದೇಶದಲ್ಲಿ ಈಗ ತುಂಬಾ ಕ್ಲಿಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ. ಈ ನಡುವೆಯೂ ಈ ಪೊಲೀಸರು ಮಾಡಿದ ಮಾನವೀಯ ಕಾರ್ಯಕ್ಕೆ ಸಲಾಂ ಹೇಳಲೇ ಬೇಕು.
ಇನ್ಸ್ಟಾಗ್ರಾಂನಲ್ಲಿ ಯುವರಾಜ್ಸಿಂಗ್ ಶೇರ್ ಮಾಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಆನ್ ಡ್ಯೂಟಿ ಪೊಲೀಸರು, ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ವಿಚಾರಿಸಿದ್ದಾರೆ. ಆತನನ್ನು ನೋಡಿ ಮರುಗಿದ ಪೊಲೀಸರು, ಹಸಿದಾತನಿಗೆ ತಮ್ಮ ಪಾಲಿನ ಊಟ ಕೊಟ್ಟು ವ್ಯಕ್ತಿಯ ಹಸಿವು ತಣಿಸಿದ್ದಾರೆ. ತಮ್ಮ ಒತ್ತಡದ ಕೆಲಸದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
- " class="align-text-top noRightClick twitterSection" data="
">
ಈ ವಿಡಿಯೋವನ್ನು ಶೇರ್ ಮಾಡಿರುವ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್, ಈ ಪೊಲೀಸರು ತೋರಿರುವ ಮಾನವೀಯ ಕಾರ್ಯ ಮನಮುಟ್ಟುವಂತಿದೆ. ಇಂತಹ ಕಠಿಣ ಸನ್ನಿವೇಶದಲ್ಲೂ ತಮ್ಮ ಪಾಲಿನ ಅನ್ನವನ್ನು ಹಂಚಿದ ಅವರ ಉದಾರತನಕ್ಕೆ ನಮ್ಮ ಗೌರವ ಸಲ್ಲಬೇಕು ಎಂದು ಅಡಿಬರಹ ಹಾಕಿ ಪೋಸ್ಟ್ ಮಾಡಿದ್ದಾರೆ.