ಜಲಂಧರ್(ಪಂಜಾಬ್): ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಲಾಗಿದ್ದು, ಅನವಶ್ಯಕವಾಗಿ ವಾಹನ ಸಂಚಾರ ನಡೆಸದಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಹೊರಹಾಕಿವೆ. ಇದರ ಮಧ್ಯೆ ಕೂಡ ಕೆಲವು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಪಂಜಾಬ್ನ ಜಲಂಧರ್ನಲ್ಲಿ ವಾಹನ ಸವಾರನೋರ್ವ ತಮ್ಮ ಕಾರ್ ಬಾನೆಟ್ ಮೇಲೆ ಎಎಸ್ಐ ಎಳೆದುಕೊಂಡು ಹೋಗಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ಕಾರಿನಲ್ಲಿಯೇ ಕುಳಿತ ಕಾರು ಚಾಲಕ ಕಾರು ಚಾಲನೆಗೆ ಮುಂದಾಗಿದ್ದಾನೆ. ಈ ವೇಳೆ ಎಎಸ್ಐ ಅದನ್ನು ತಡೆಯುವ ಉದ್ದೇಶದಿಂದ ಕಾರಿನ ಬಾನೆಟ್ ಮೇಲೆ ಹತ್ತಿದ್ದಾರೆ. ಇದನ್ನು ನಿರ್ಲಕ್ಷಿಸಿದ ಚಾಲಕ ಕಾರು ಡ್ರೈವ್ ಮಾಡಿಕೊಂಡೇ ಹೇಗಿದ್ದಾನೆ. ಇದಾದ ಬಳಿಕ ಆತನನ್ನು ಪೊಲೀಸರು ಅರೆಸ್ಟ್ ಮಾಡಿ ಕೇಸ್ ಹಾಕಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಚೆಕ್ಪೊಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಕೈ ಕತ್ತರಿಸಿದ್ದ ಘಟನೆ ಜಲಂಧರ್ನಲ್ಲಿ ನಡೆದಿತ್ತು.