ಲಖನೌ: ಮಹಾಮಾರಿ ಕೊರೊನಾ ದೇಶದಲ್ಲಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ದಿನಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಉತ್ತರಪ್ರದೇಶ ಯೋಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಏಪ್ರಿಲ್ 14ರವರೆಗೆ ದೇಶದಲ್ಲಿ ಲಾಕ್ಡೌನ್ ಮುಂದುವರಿದಿದ್ದು, ಇದರ ಮಧ್ಯೆ ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ರಾಜ್ಯದ 15 ಜಿಲ್ಲೆಗಳನ್ನ ಸಂಪೂರ್ಣವಾಗಿ ಬಂದ್ ಮಾಡಿ ಆದೇಶ ಹೊರಹಾಕಿದ್ದಾರೆ. ಇದರಿಂದಾಗಿ ಬೇರೆ ಯಾವುದೇ ಜಿಲ್ಲೆ ಜನರು ಅಲ್ಲಿಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.
ಇಂದು ಮಧ್ಯರಾತ್ರಿಯಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ಯಾವುದೇ ಕಾರಣಕ್ಕೂ ಏಪ್ರಿಲ್ 13ವರೆಗೆ ಇಲ್ಲಿಗೆ ಹೋಗಲು ಅವಕಾಶ ಇರಲ್ಲ. ಪ್ರಮುಖವಾಗಿ ಲಖನೌ, ವಾರಣಾಸಿ, ನೋಯ್ಡಾ, ಸೀತಾಪುರ್ ಗೌತಮ್ ಬುದ್ಧನಗರ, ಗಾಜಿಯಾಬಾದ್, ಮಿರತ್,ಆಗ್ರಾ, ಶಾಮ್ಲಿ ಹಾಗೂ ಶಾರಾದಾಪೂರ್ ಕೂಡ ಇದರಲ್ಲಿ ಸೇರಿಕೊಂಡಿವೆ.