ETV Bharat / bharat

ಯೆಸ್​ ಬ್ಯಾಂಕ್​​ ಪ್ರಕರಣ: ಸಿಬಿಐನಿಂದ ನೋಟಿಸ್​, ಪ್ರಮುಖ ಸ್ಥಳಗಳಲ್ಲಿ ಮುಂದುವರಿದ ಶೋಧಕಾರ್ಯ! - ಸಿಬಿಐ ಯೆಸ್​ ಬ್ಯಾಂಕ್​

ದೇಶದ ಬ್ಯಾಂಕಿಂಗ್ ವಲಯದಲ್ಲಿನ ಪ್ರಮುಖ ಯೆಸ್ ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಇದರಿಂದ ಬ್ಯಾಂಕಿನ ಗ್ರಾಹಕರು ತೀವ್ರ ತೊಂದರೆಗೆ ಒಳಗಾಗಿದ್ದು, ಇದರ ಮಧ್ಯೆ, ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಮಾಹಿತಿ ಕಲೆ ಹಾಕಿಕೊಳ್ಳುತ್ತಿದೆ.

Yes Bank scam
Yes Bank scam
author img

By

Published : Mar 9, 2020, 1:03 PM IST

Updated : Mar 9, 2020, 7:18 PM IST

ನವದೆಹಲಿ: ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಖಾಸಗಿ ರಂಗದ ಪ್ರಮುಖ ಯೆಸ್​ ಬ್ಯಾಂಕ್​​ನಲ್ಲಿ ಬಿಕ್ಕಟ್ಟು ಉದ್ಭವವಾಗಿದ್ದು, ಅದರಲ್ಲಿ ನಡೆದಿರುವ ಅಕ್ರಮದ ಬಗ್ಗೆ ಇದೀಗ ಸಿಬಿಐ ತನಿಖೆ ನಡೆಸುತ್ತಿದೆ.

ಯೆಸ್​ ಬ್ಯಾಂಕ್​​​ ಸಂಸ್ಥಾಪಕ ರಾಣಾ ಕಪೂರ್​, ಆತನ ಪತ್ನಿ ಬಿಂದು ರಾಣಾ ಕಪೂರ್​ ಹಾಗೂ ಮಗಳು ರೋಶಿನಿ ಕಪೂರ್​​​, ರಕ್ಷಾ ಕಪೂರ್​​​ ಹಾಗೂ ರಾಧಾ ಕಪೂರ್​​​ DHFLನ ಚೇರಮನ್​​​ ಕಪಿಲ್​​ ಹಾಗೂ ಡೈರೆಕ್ಟರ್​​​ ಧೀರಜ್​ ರಾಜೇಶ್​ ಕುಮಾರ್​ಗೆ ಇದೀಗ ಸಿಬಿಐ ನೋಟಿಸ್​ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಪ್ರಮುಖ ಸ್ಥಳಗಳಲ್ಲಿ ಸಿಬಿಐ ಶೋಧಕಾರ್ಯ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಯೆಸ್​ ಬ್ಯಾಂಕ್​ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್​ ಕುಟುಂಬ, ದಿವಾನ್ ಹೌಸಿಂಗ್​ ಫೈನಾನ್ಸ್​ ಕಾರ್ಪೋರೇಶನ್​ (ಡಿಎಚ್​ಎಫ್​ಎಲ್​) ಮಾಲೀಕತ್ವದ ಕಂಪನಿಗಳೊಂದಿಗೆ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಶಂಕೆ ಸಿಬಿಐ ವಿಚಾರಣೆ ವೇಳೆ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅಧಿಕಾರಿಗಳು ಪ್ರಮುಖ 7 ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಪ್ರಮುಖ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಮುಂಬೈನಲ್ಲಿರುವ ಬಲ್ಲಾರ್ಡ್​​ ಪಿಯರ್​ ಕಚೇರಿ, ಕಪೂರ್​ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಏಪ್ರಿಲ್​ ಹಾಗೂ ಜೂನ್​ 2018ರಲ್ಲಿ ಯೆಸ್ ಬ್ಯಾಂಕ್​​​ 3,700 ರೂ ಡಿಎಚ್​ಎಫ್​ಎಲ್​ ಸಾಲದ ರೂಪದಲ್ಲಿ ನೀಡಿತ್ತು. ಇದಾದ ಬಳಿಕ ಬೇರೆ ಬೇರೆ ಕಂಪನಿಗಳಿಗೆ ಹಣವನ್ನ ಕಿಕ್​ಬ್ಯಾಕ್​ ನೀಡಿದೆ ಎಂಬ ಅಂಶ ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ವರದಿಯಾಗಿದೆ.

Last Updated : Mar 9, 2020, 7:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.