ಹೈದರಾಬಾದ್: ಇಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಿಂಹ ದಿನವನ್ನು ಪ್ರತಿ ವರ್ಷ ಆಗಸ್ಟ್ 10 ರಂದು ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುವುದು. ಸಿಂಹವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಲಾಗಿದೆ. ಭಾರತದಲ್ಲಿ ಕಂಡುಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಏಷ್ಯಾಟಿಕ್ ಸಿಂಹ ಕೂಡ ಒಂದಾಗಿದೆ.
2013 ರಿಂದ ವಿಶ್ವ ಸಿಂಹ ದಿನವನ್ನು ಆಚರಿಸಲು ಆರಂಭಿಸಲಾಯಿತು. ವಿಶ್ವ ಸಿಂಹ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಎಂಬ ದಂಪತಿಗಳು ಆಚರಣೆಗೆ ತಂದರು.
ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನ ಗಿರ್ ಕಾಡುಗಳಲ್ಲಿ ವಾಸಿಸುವ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯಲ್ಲಿ ಭಾರತವು 29% ಹೆಚ್ಚಳವನ್ನು ದಾಖಲಿಸಿದೆ. 2015 ರಲ್ಲಿ 523 ರಷ್ಟಿದ್ದ ಸಿಂಹಗಳ ಸಂಖ್ಯೆಯು 2020 ರಲ್ಲಿ 674 ಕ್ಕೆ ಏರಿದೆ. 2015 ರಲ್ಲಿ 22,000 ಚದರ ಕಿ.ಮೀ. ಇದ್ದ ಸಿಂಹಗಳ ವಿತರಣಾ ಪ್ರದೇಶ 2020 ರಲ್ಲಿ 30,000 ಚದರ ಕಿ.ಮೀ.ಗೆ ವಿಸ್ತಾರಗೊಂಡಿದೆ.
ಪ್ರಸ್ತುತ, ಸಂಶೋಧಕರು ಭೂಮಿಯ ಮೇಲೆ ಕಳೆದ ನಾಲ್ಕು ದಶಕಗಳಲ್ಲಿ, ಸಿಂಹದ ಜನಸಂಖ್ಯೆಯು 50 ಪ್ರತಿಶತದಷ್ಟು ಕುಸಿದಿದೆ ಎಂದು ತಿಳಿಸಿದ್ದಾರೆ.
ಅಳಿವಿನಂಚಿನತ್ತ ಸಿಂಹಗಳು:
- ಕಳೆದ 100 ವರ್ಷಗಳಲ್ಲಿ ಸಿಂಹಗಳು ತಮ್ಮ ಐತಿಹಾಸಿಕ ವ್ಯಾಪ್ತಿಯ 80 ಪ್ರತಿಶತದಿಂದ ಕಣ್ಮರೆಯಾಗಿವೆ.
- 27 ಆಫ್ರಿಕನ್ ದೇಶಗಳಲ್ಲಿ 26 ದೇಶಗಳಲ್ಲಿ ಸಿಂಹಗಳು ಅಳಿವಿನಂಚಿನಲ್ಲಿವೆ. 7 ದೇಶಗಳು ಮಾತ್ರ 1,000 ಕ್ಕೂ ಹೆಚ್ಚು ಸಿಂಹಗಳನ್ನು ಹೊಂದಿವೆ.
- ಮಾನವರು ತಮ್ಮ ಆವಾಸಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದಂತೆ ಮಾನವ-ಸಿಂಹ ಸಂಘರ್ಷಕ್ಕೆ ಉತ್ತೇಜನ ನೀಡುತ್ತದೆ. ಇದರಲ್ಲಿ ಪ್ರತೀಕಾರವಾಗಿ ಸಿಂಹಗಳನ್ನು ಕೊಲ್ಲಲಾಗುತ್ತದೆ. ಇದರಿಂದ ಸಿಂಹಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ.
ಸಂರಕ್ಷಣಾ ಪ್ರಯತ್ನಗಳು:
- 1975 ರಿಂದ ಸಿಂಹವನ್ನು CITES ಅನುಬಂಧ II, ಮತ್ತು ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹ, ಅಂದರೆ CITES ಅನುಬಂಧ I ರಲ್ಲಿ ಉಪಜಾತಿಗಳಾದ ಪಿ.ಲಿಯೋ ಪರ್ಸಿಕಾದಲ್ಲಿ ಸೇರಿಸಲಾಗಿದೆ.
- ಆಫ್ರಿಕಾದಲ್ಲಿ, ಸಿಂಹಗಳು ಹಲವಾರು ದೊಡ್ಡ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಸಂರಕ್ಷಿತ ಪ್ರದೇಶಗಳಲ್ಲಿವೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಹೆಚ್ಚಿನ ಶ್ರೇಣಿಯ ರಾಜ್ಯಗಳು ವನ್ಯಜೀವಿ ಪ್ರವಾಸೋದ್ಯಮವನ್ನು ಬೆಂಬಲಿಸುವ ಮೂಲಸೌಕರ್ಯವನ್ನು ಹೊಂದಿವೆ. ಈ ರೀತಿಯಾಗಿ, ಸಿಂಹಗಳ ಉದ್ಯಾನ ನಿರ್ವಹಿಸುವ ಮುಖೇನ ಸ್ಥಳೀಯ ಸಮುದಾಯಗಳಿಗೆ ಗಮನಾರ್ಹವಾದ ಆದಾಯವನ್ನು ಗಳಿಸಲು ಸಹಾಯಕವಾಗಿವೆ. ಅಲ್ಲದೇ ವೈಲ್ಡ್ ಲ್ಯಾಂಡ್ ಸಂರಕ್ಷಣೆಗೆ ಬಲವಾದ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
- ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ಮತ್ತು ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಸಿಂಹಗಳಿಗೆ ಪ್ರಾದೇಶಿಕ ಸಂರಕ್ಷಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರೀಯ, ಸಮುದಾಯ ಮತ್ತು ಭೂದೃಶ್ಯ ಮಟ್ಟಗಳ ಮೇಲೆ ಕ್ರಮ ಕೈಗೊಳ್ಳಲು ಸಾಮಾನ್ಯ ಆದ್ಯತೆಗಳನ್ನು ರೂಪಿಸುವ ಮೂಲಕ ಪ್ರಾದೇಶಿಕ ಸಂರಕ್ಷಣಾ ಕಾರ್ಯತಂತ್ರಗಳು ಸಿಂಹಗಳ ಸ್ಥಿತಿ ಮತ್ತು ನಿರ್ವಹಣೆಯ ವಿಶಾಲ ಮತ್ತು ಗಮನಾರ್ಹ ಸುಧಾರಣೆಯ ಸಾಮರ್ಥ್ಯವನ್ನು ಹೊಂದಿವೆ. ಸಿಂಹ ಸಂರಕ್ಷಣಾ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಈ ಪ್ರಾದೇಶಿಕ ತಂತ್ರಗಳನ್ನು ಅನೇಕ ದೇಶಗಳಲ್ಲಿ ಬಳಸಲಾಗಿದೆ.