ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರತಿ ಎಸೆತ ಉಭಯ ತಂಡಗಳಿಗೆ ಮಹತ್ವದ್ದಾದರೆ, ಅದೇ ಪಂದ್ಯದ ಪ್ರತಿ ಸೆಕೆಂಡು, ಜಾಹಿರಾತು ವಿತರಣಾ ಹಕ್ಕು ಖರೀದಿದಾರರಿಗೆ ಚಿನ್ನದ ಮೊಟ್ಟೆ ಇಡುವ ಸಮಯ!
ಎಂಟು ವರ್ಷಕ್ಕೆ 12 ಸಾವಿರ ಕೋಟಿ ರೂ. ನೀಡಿ ಸ್ಯಾಟ್ಲೈಟ್ ಹಕ್ಕು ಪಡೆದ ಸ್ಟಾರ್ ಇಂಡಿಯಾ, ವರ್ಲ್ಡ್ಕಪ್ನಲ್ಲಿ ಭರ್ಜರಿ ಹಣ ಬಾಚಿಕೊಳ್ಳಲು ಪ್ರತಿ ಸೆಕೆಂಡ್ ಜಾಹೀರಾತಿಗೆ ₹ 1.7 ಲಕ್ಷದಿಂದ ₹ 2 ಲಕ್ಷದವರೆಗೆ ದರ ವಿಧಿಸಿದೆ. ಇದು ಭಾರತ ಮೇಲೆ ನಡೆಯುವ ಪಂದ್ಯಾವಳಿಗೆ ನಿಗದಿಪಡಿಸಿದ ಮೊತ್ತ ಮಾತ್ರ ಅನ್ನೋದು ಗಮನಾರ್ಹ ಸಂಗತಿ.
ಪಂದ್ಯದಲ್ಲಿನ ಓವರ್ ಮುಕ್ತಾಯದಲ್ಲಿ ಪ್ರಸಾರವಾಗುವ ರನ್ ಆಫ್ ಶೆಡ್ಯೂಲ್ನ (ಆರ್ಒಎಸ್) 10 ಸೆಕೆಂಡ್ ಜಾಹೀರಾತಿಗೆ ₹ 17 ಲಕ್ಷದಿಂದ ₹ 20 ಲಕ್ಷದವರೆಗೂ ದರ ವಿಧಿಸಲಾಗುತ್ತದೆ. ಭಾರತ ಹೊರತುಪಡಿಸಿ ವಿದೇಶ ಪಂದ್ಯಗಳಿಗೆ ₹ 6 ಲಕ್ಷದಿಂದ ₹ 7 ಲಕ್ಷದವರೆಗೆ ಸ್ಲಾಟ್ ದರವಿದೆ.
ಸೆಮಿ ಫೈನಲ್, ಫೈನಲ್ ಹಾಗೂ ಕೊನೆಯ ಓವರ್ಗಳಲ್ಲಿನ ತೀವ್ರ ಕುತೂಹಲ- ಹಣಾಹಣಿಯಿಂದ ಕೂಡಿರುವ ಪಂದ್ಯಗಳಿಗೆ ಜಾಹೀರಾತು ದರ ಮೊತ್ತ ಇನ್ನಷ್ಟು ಅಧಿಕವಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.