ತಮಿಳುನಾಡು: ತಂದೆ ಮತ್ತು ಮಗ ಪಿ ಜಯರಾಜ್ ಹಾಗೂ ಜೆ ಬೆನಿಕ್ಸ್ ಅವರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಹಿನ್ನೆಲೆ ಇನ್ಮುಂದೆ ಪೊಲೀಸ್ ಸಿಬ್ಬಂದಿಯ ಮನೆಗೆ ಹಾಲು ಸರಬರಾಜು ಮಾಡುವುದಿಲ್ಲ ಎಂದು ತಮಿಳುನಾಡು ಹಾಲು ವ್ಯಾಪಾರಿ ಕಲ್ಯಾಣ ಸಂಘವು ಘೋಷಿಸಿದೆ.
ಸಂಘದ ರಾಜ್ಯಾಧ್ಯಕ್ಷ ಎಸ್ ಎ ಪೊನ್ನುಸಾಮಿ ಮಾತನಾಡಿ, ಸರ್ಕಾರದ ನಿಯಂತ್ರಣದ ಹೊರತಾಗಿಯೂ ಪೊಲೀಸರು ಹಾಲು ಮಾರಾಟಗಾರರು ಮತ್ತು ಏಜೆಂಟರಿಗೆ ಲಾಕ್ ಡೌನ್ ನಿರ್ಬಂಧಗಳನ್ನು ಉಲ್ಲೇಖಿಸಿ ಕಿರುಕುಳ ನೀಡುತ್ತಿದ್ದಾರೆ. ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಿದ್ರೂ ಸಹ ಅನೇಕ ವ್ಯಾಪಾರಿಗಳನ್ನು ಹಾಲು ಮಾರಾಟ ಮಾಡುತ್ತಿರುವುದಕ್ಕಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪಿ.ಜಯರಾಜ್ ಮತ್ತು ಜೆ ಬೆನಿಕ್ಸ್ ಅವರು ಸಾಥಂಕುಲಂ ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಮೃತಪಟ್ಟಿದ್ದರು. ಪೊಲೀಸರು ನೀಡಿದ ಚಿತ್ರಹಿಂಸೆಯಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಆರೋಪಿಸಿದ್ದಾರೆ. ತಮಿಳುನಾಡು ಸರ್ಕಾರ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದು, ಅಲ್ಲಿ ಕರ್ತವ್ಯದಲ್ಲಿದ್ದ ಇತರ ಪೊಲೀಸರನ್ನು ವರ್ಗಾಯಿಸಲಾಗಿದೆ.