ಅನಂತಪುರ(ಆಂಧ್ರಪ್ರದೇಶ): ಪ್ರಕೃತಿಯಲ್ಲಿ ಕೆಲವೊಂದು ವಿಸ್ಮಯ ಹಾಗೂ ಆಶ್ಚರ್ಯಕರ ಸಂಗತಿ ನಡೆಯುವುದು ಸರ್ವೆ ಸಾಮಾನ್ಯ. ಇದೀಗ ಆಂಧ್ರಪ್ರದೇಶದ ಅನಂತಪುರದ ಬಿಲುಗುಪ್ ಮಂಡಲ್ನಲ್ಲಿ ಗಂಡು ಮೇಕೆ ಪ್ರತಿ ದಿನ ಲೀಟರ್ಗಂಟಲೇ ಹಾಲು ನೀಡ್ತಿದೆ.
ಬುಲುಗುಪ್ ಮಂಡಲ್ದಲ್ಲಿ ವಾಸವಾಗಿರುವ ರೈತ ನಾಗಣ್ಣ 30ಕ್ಕೂ ಹೆಚ್ಚು ಮೇಕೆ ಸಾಕಾಣೆ ಮಾಡಿದ್ದು, ಅದರಲ್ಲಿ ಗಂಡು ಮೇಕೆ ಕಳೆದ 15 ದಿನಗಳಿಂದ ಹಾಲು ನೀಡಲು ಶುರು ಮಾಡಿದೆ. ಇದನ್ನು ನೋಡಲು ಜನರು ತಂಡ ತಂಡವಾಗಿ ಆಗಮಿಸ್ತಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಪಶು ವೈದ್ಯ ಅನುವಂಶಿಕ ತೊಂದರೆಯಿಂದ ಈ ರೀತಿಯಾಗಿ ನಡೆಯಬಹುದು ಎಂದಿದ್ದಾರೆ.