ಲಂಡನ್ : ಕ್ರಿಕೆಟ್ ಮ್ಯಾಚ್ ನಡೆಯುವ ವೇಳೆ ಹಲವಾರು ಅವಘಡಗಳು ನಡೆಯುವುದನ್ನು ನಾವು ನೋಡಿದ್ದೇವೆ. ಕೆಲವು ಬಾರಿ ಮ್ಯಾಚ್ ನಡೆಯುವ ವೇಳೆ ಕ್ರೀಡಾಂಗಣಕ್ಕೆ ಪ್ರಾಣಿಗಳು ಎಂಟ್ರಿ ಕೊಟ್ಟು ಹಾಸ್ಯ ಸೃಷ್ಟಿಸುವುದನ್ನೂ ಕಂಡಿದ್ದೇವೆ.
ಆದರೆ, ಇಂದು ನಡೆಯುತ್ತಿರುವ ವಿಶ್ವಕಪ್ 2019ರ ಫೈನಲ್ ಮ್ಯಾಚ್ ವೇಳೆ ಒಬ್ಬ ಮಹಿಳೆ ನೀಲಿ ಚಿತ್ರಗಳ ವೆಬ್ಸೈಟ್ವೊಂದರ ಪ್ರಚಾರ ಮಾಡಲು ಯತ್ನಿಸಿದ್ದಾಳೆ. ಈ ಮಹಿಳೆಯನ್ನು ಕಿನ್ಸೆ ವೊಲನ್ಸ್ಕಿ ಎಂದು ಗುರುತಿಸಲಾಗಿದ್ದು, ಈಕೆ ಯೂಟ್ಯೂಬ್ನ ಫ್ರಾಂಕ್ ಸ್ಟಾರ್ ವಿಟಲಿ ದೊರೊವೆಟ್ಸ್ಕಿಯ ಎಂಬಾತನ ತಾಯಿ ಎಂದು ಹೇಳಲಾಗಿದೆ.
-
My mom is crazy!!!!! pic.twitter.com/GuDfyM2aU2
— Vitaly Zdorovetskiy (@Vitalyzdtv) July 14, 2019 " class="align-text-top noRightClick twitterSection" data="
">My mom is crazy!!!!! pic.twitter.com/GuDfyM2aU2
— Vitaly Zdorovetskiy (@Vitalyzdtv) July 14, 2019My mom is crazy!!!!! pic.twitter.com/GuDfyM2aU2
— Vitaly Zdorovetskiy (@Vitalyzdtv) July 14, 2019
ಪೋರ್ನ್ ವೆಬ್ಸೈಟ್ ಪ್ರಚಾರ ಮಾಡುವ ಉದ್ದೇಶದಿಂದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದತ್ತ ನುಗ್ಗಿದ್ದಾಳೆ. ಈ ಸಮಯದಲ್ಲಿ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆ ಮಹಿಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆಯುವ ವೇಳೆ ಮಹಿಳೆಯು ಕಪ್ಪು ಸ್ವಿಮ್ ಕೋಟ್ ಧರಿಸಿದ್ದು, ಈಕೆಯ ಅವಾಂತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆ ಮಹಿಳೆಯ ಮಗ ವಿಟಲಿ 'ಮೈ ಮಾಮ್ ಈಸ್ ಕ್ರೇಜಿ' ಎಂದು ಬರೆದುಕೊಂಡಿದ್ದಾನೆ.