ETV Bharat / bharat

ಸಂಬಂಧಿಕರ ಜತೆ ಸೇರಿ ಮಾಜಿ ಪತ್ನಿ ಮೇಲೆ ರೇಪ್​​​... ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆ! - ಸಾಮೂಹಿಕ ಅತ್ಯಾಚಾರ

ಸಂಬಂಧಿಕರೊಂದಿಗೆ ಸೇರಿ ಮಾಜಿ ಪತ್ನಿ ಮೇಲೆ ಗಂಡನೋರ್ವ ಅಮಾನವೀಯ ರೀತಿಯಲ್ಲಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Oct 9, 2019, 4:47 PM IST

ಭೋಪಾಲ್​: ಸಂಬಂಧಿಕರೊಂದಿಗೆ ಸೇರಿ ಮಾಜಿ ಪತ್ನಿ ಅಪಹರಣ ಮಾಡಿ ವಿಷಪೂರಿತ ಆಹಾರ ತಿನ್ನಿಸಿ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭೋಪಾಲ್​​ನಿಂದ ಪಶ್ಚಿಮಕ್ಕೆ 293 ಕಿ.ಮೀ. ದೂರದಲ್ಲಿರುವ ರತ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊದಲು ಮಹಿಳೆಯನ್ನು ಅಪಹರಣ ಮಾಡಿರುವ ಕಾಮುಕರು, ಅತ್ಯಾಚಾರವೆಸಗುವುದಕ್ಕೂ ಮುಂಚಿತವಾಗಿ ಮದ್ಯ ಸೇವನೆ ಮಾಡಿದ್ದಾರೆ. ತದನಂತರ ಆಕೆಗೆ ವಿಷಪೂರಿತ ಆಹಾರ ತಿನ್ನಿಸಿ ಅತ್ಯಾಚಾರವೆಸಗಿದ್ದು, ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ.

ಸೋಮವಾರ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ರಸ್ತೆ ಬದಿಯಲ್ಲಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ಸಂತ್ರಸ್ತೆಯ ಎರಡನೇ ಗಂಡನೊಂದಿಗೆ ಮೊದಲನೇ ಗಂಡ ಜಗಳ ಮಾಡಿಕೊಂಡಿದ್ದ. ಇದಕ್ಕೆ ಮಹಿಳೆ ಪ್ರಮುಖ ಸಾಕ್ಷಿಯಾಗಿದ್ದಳು. ಈ ವೇಳೆ ಯಾವುದೇ ಸಾಕ್ಷಿ ಹೇಳದಂತೆ ಆಕೆಗೆ ಮೊದಲ ಗಂಡ ಕೇಳಿಕೊಂಡಿದ್ದ. ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಹೀಗಾಗಿ ಮಾಜಿ ಪತಿ ಹಾಗೂ ನಾಲ್ವರು ಸಂಬಂಧಿಕರು ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಜತೆಗೆ ಮಹಿಳೆಯ ದೇಹದ ಕೆಲ ಭಾಗಗಳಿಗೆ ಸಿಗರೇಟ್​​ನಿಂದ ಸುಟ್ಟಿದ್ದಾರೆ ಎನ್ನಲಾಗಿದೆ.

ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Intro:Body:

ಸಂಬಂಧಿಕರ ಜತೆ ಸೇರಿ ಮಾಜಿ ಪತ್ನಿ ಮೇಲೆ ರೇಪ್​... ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ! 

ಭೋಪಾಲ್​: ಸಂಬಂಧಿಕರೊಂದಿಗೆ ಸೇರಿ ಮಾಜಿ ಪತ್ನಿ ಅಪಹರಣ ಮಾಡಿ  ವಿಷಪೂರಿತ ಆಹಾರ ತಿನ್ನಿಸಿ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಭೋಪಾಲ್​​ನಿಂದ ಪಶ್ಚಿಮಕ್ಕೆ 293 ಕಿ.ಮೀ ದೂರದಲ್ಲಿರುವ ರತ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊದಲು ಮಹಿಳೆ ಅಪಹರಣ ಮಾಡಿರುವ ಕಾಮುಕರು, ಅತ್ಯಾಚಾರವೆಸಗುವುದಕ್ಕೂ ಮುಂಚಿತವಾಗಿ ಮದ್ಯ ಸೇವನೆ ಮಾಡಿದ್ದಾರೆ. ತದನಂತರ ಆಕೆಗೆ ವಿಷಪೂರಿತ ಆಹಾರ ತಿನ್ನಿಸಿ ಅತ್ಯಾಚಾರವೆಸಗಿದ್ದು, ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ. 

ಸೋಮವಾರ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ರಸ್ತೆ ಬದಿಯಲ್ಲಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ಸಂತ್ರಸ್ತೆ ಸಂಗೀತ ಸೋಲಂಕಿಯ ಎರಡನೇ ಗಂಡನೊಂದಿಗೆ ಮಹಿಳೆಯ ಮೊದಲನೇ ಗಂಡ ಜಗಳ ಮಾಡಿಕೊಂಡಿದ್ದನು. ಇದಕ್ಕೆ ಮಹಿಳೆ ಪ್ರಮುಖ ಸಾಕ್ಷಿಯಾಗಿದ್ದಳು. ಈ ವೇಳೆ ಯಾವುದೇ ಸಾಕ್ಷಿ ಹೇಳದಂತೆ ಆಕೆಗೆ ಮೊದಲ ಗಂಡ ಕೇಳಿಕೊಂಡಿದ್ದನು. ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಹೀಗಾಗಿ ಮಾಜಿ ಪತಿ ಹಾಗೂ ನಾಲ್ವರು ಸಂಬಂಧಿಕರು ಈ ರೀತಿಯಾಗಿ ನಡೆದುಕೊಂಡಿದ್ದಾರೆ.ಜತೆಗೆ ಮಹಿಳೆಯ ಕೆಲವೊಂದ ಭಾಗಗಳಿಗೆ ಸಿಗರೇಟ್​​ನಿಂದ ಸುಟ್ಟಿದ್ದಾರೆ. 

ಇದೀಗ ಮಹಿಳೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.