ETV Bharat / bharat

ಬಿಹಾರ ಪ್ರವಾಹ.. NDRF ರಕ್ಷಣಾ ದೋಣಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ತಂಡವು ಆಶಾ ಕಾರ್ಯಕರ್ತೆಯರ ಸಹಾಯದಿಂದ ಸುರಕ್ಷಿತ ಹೆರಿಗೆಗೆ ಸಹಾಯ ಮಾಡಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ದೆಹಲಿಯಲ್ಲಿ ತಿಳಿಸಿದ್ದಾರೆ..

Bihar
ಬಿಹಾರ ಪ್ರವಾಹ
author img

By

Published : Jul 26, 2020, 7:12 PM IST

ಪಾಟ್ನಾ : ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿಯೊಬ್ಬಳು ಎನ್‌ಡಿಆರ್‌ಎಫ್ ತಂಡದ ರಕ್ಷಣಾ ದೋಣಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಬಿಹಾರದ ಪೂರ್ವ ಚಂಪಾರಣ್​ ಜಿಲ್ಲೆಯ ಗೋಬಾರಿ ಗ್ರಾಮದ ತನ್ನ ಮನೆಯಲ್ಲಿದ್ದ ಗರ್ಭಿಣಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಳು. ಈ ವೇಳೆ ಎನ್‌ಡಿಆರ್‌ಎಫ್ ಸಿಬ್ಬಂದಿ ತಮ್ಮ ರಕ್ಷಣಾ ದೋಣಿಯಲ್ಲಿ ಬುರ್ಹಿ ಗಂಡಕ್ ನದಿಯಲ್ಲಿ ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಆ ವೇಳೆ ಆಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಧ್ಯಾಹ್ನ 1:40ರ ಸುಮಾರಿಗೆ ಹೆರಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bihar
NDRF ರಕ್ಷಣಾ ಕಾರ್ಯ

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ತಂಡವು ಆಶಾ ಕಾರ್ಯಕರ್ತೆಯರ ಸಹಾಯದಿಂದ ಸುರಕ್ಷಿತ ಹೆರಿಗೆಗೆ ಸಹಾಯ ಮಾಡಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ದೆಹಲಿಯಲ್ಲಿ ತಿಳಿಸಿದ್ದಾರೆ.

Bihar
ಬಿಹಾರ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಿರುವ NDRF

ಸದ್ಯ ತಾಯಿ ಮತ್ತು ನವಜಾತ ಶಿಶುವನನ್ನು ಆ್ಯಂಬುಲೆನ್ಸ್ ಮೂಲಕ ಮೋತಿಹಾರಿ ಜಿಲ್ಲೆಯ ಬಂಜರಿಯಾ ಗ್ರಾಮದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.