ETV Bharat / bharat

ಹೆಂಡ್ತಿ ಎಂದು ಹೇಳಿ ಪ್ರಿಯಕರನೊಂದಿಗೆ ಕ್ವಾರಂಟೈನ್​​ ಆದ ಮಹಿಳಾ ಕಾನ್ಸ್​ಟೇಬಲ್​! - ಕ್ವಾರಂಟೈನ್​

ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ವೋರ್ವರು ಲವರ್​ನನ್ನು ಗಂಡ ಎಂದು ಸುಳ್ಳು ಹೇಳಿ ಕ್ವಾರಂಟೈನ್​ ಸೆಂಟರ್​​ನಲ್ಲಿರಿಸಿಕೊಂಡಿರುವ ಘಟನೆ ನಡೆದಿದೆ.

woman constable
woman constable
author img

By

Published : Jul 17, 2020, 7:25 PM IST

ನಾಗ್ಪುರ್​ (ಮಹಾರಾಷ್ಟ್ರ): ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಇದರ ಆರ್ಭಟ ಬಲು ಜೋರಾಗಿದೆ. ಸೋಂಕಿತರನ್ನ ವಿವಿಧ ಕ್ವಾರಂಟೈನ್​​ ಸೆಂಟರ್​ಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಮಧ್ಯೆ ವಿಚಿತ್ರ ಘಟನೆವೊಂದು ನಡೆದಿದೆ.

ಮಹಾರಾಷ್ಟ್ರದ ನಾಗ್ಪುರ್​ದಲ್ಲಿ ಪೊಲೀಸ್​ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್ಸ್​​ಟೇಬಲ್​ವೋರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ಕ್ವಾರಂಟೈನ್​ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಈ ವೇಳೆ ಅಧಿಕಾರಿಗಳ ಮುಂದೆ ನನ್ನ ಗಂಡನಿಗೂ ಸೋಂಕು ಇರುವ ಸಾಧ್ಯತೆ ಇದ್ದು, ಅವರನ್ನೂ ತನ್ನೊಂದಿಗೆ ಕ್ವಾರಂಟೈನ್​ ಮಾಡುವಂತೆ ಸುಳ್ಳು ಹೇಳಿದ್ದಾಳೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಜತೆ ಕ್ವಾರಂಟೈನ್​ ಮಾಡಲಾಗಿದೆ. ಆದರೆ ಈಗಾಗಲೇ ಈ ವ್ಯಕ್ತಿಗೆ ಮದುವೆಯಾಗಿದ್ದು, ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​ನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದನು ಎಂದು ತಿಳಿದು ಬಂದಿದೆ.

ಮೂರು ದಿನ ಕಳೆದರೂ ಗಂಡ ಮನೆಗೆ ಬಾರದ ಕಾರಣ ಆತಂಕಕ್ಕೊಳಗಾದ ಹೆಂಡತಿ ಮಾಹಿತಿ ಪಡೆದುಕೊಳ್ಳಲು ಅಂಚೆ-ಇಲಾಖೆಗೆ ಫೋನ್​ ಮಾಡಿ ತಿಳಿದುಕೊಂಡಿದ್ದಾಳೆ. ಈ ವೇಳೆ ಕ್ವಾರಂಟೈನ್​ ಮಾಡಿರುವ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳುತ್ತಿದ್ದಂತೆ ಪೊಲೀಸ್​​ ಕಾನ್ಸ್​​ಟೇಬಲ್​ ಜತೆ ಕ್ವಾರಂಟೈನ್​ ಆಗಿರುವ ವಿಷಯ ಗೊತ್ತಾಗಿದೆ. ತಕ್ಷಣವೇ ಬಜಾಜ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್​ ತಿಂಗಳಲ್ಲಿ ಸರ್ಕಾರಿ ಕೆಲಸದ ವೇಳೆ ಇವರಿಬ್ಬರು ಪರಸ್ಪರ ಪರಿಚಯವಾಗಿ, ಪ್ರೀತಿಯ ಬಲೆಗೆ ಸಿಲುಕಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.