ರಣಘಾಟ್: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಗೆಳೆಯನೊಬ್ಬ ಅಶ್ಲೀಲ ಫೋಟೋಗಳನ್ನು ಹರಿಬಿಟ್ಟ ಹಿನ್ನೆಲೆ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಡಿಯಾ ಜಿಲ್ಲೆಯ ಧಂತಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಆರು ತಿಂಗಳ ಹಿಂದೆ ಯುವತಿಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ. ಇವರ ಪರಿಚಯ ಸ್ನೇಹವಾಗಿತ್ತು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದೂರವಾಗಿದ್ದರು.
ಇನ್ನು ಆ ವ್ಯಕ್ತಿ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ತೆರೆದು ತನ್ನ ಸ್ನೇಹಿತೆಯ ಅಶ್ಲೀಲ ಫೋಟೋಗಳನ್ನು ಹರಿ ಬಿಟ್ಟಿದ್ದಾನೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಗಮನಕ್ಕೆ ಬಂದಿತ್ತು. ಅಶ್ಲೀಲ ಫೋಟೋಗಳನ್ನು ನೋಡಿದ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಸಂಬಂಧ ಯುವತಿ ತಂದೆ ಧಂತಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.