ETV Bharat / bharat

ಎನ್​ಆರ್​ಸಿ ಪಟ್ಟಿಗೆ ಮೊದಲ ಬಲಿ.. ಹೆಸರಿಲ್ಲ ಎಂದು ಬಾವಿಗೆ ಹಾರಿದ ಮಹಿಳೆ - ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್

ಇಂದು ಬಿಡುಗಡೆಯಾದ ಅಸ್ಸೋಂನ ಎನ್​ಆರ್​ಸಿ ಪಟ್ಟಿಯಲ್ಲಿ ಹೆಸರಿಲ್ಲದ 50 ವರ್ಷದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎನ್​ಆರ್​ಸಿ ಪಟ್ಟಿಗೆ ಮೊದಲ ಬಲಿ
author img

By

Published : Aug 31, 2019, 12:54 PM IST

ಗುವಾಹಟಿ: ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ (ಎನ್​​ಆರ್​ಸಿ) ಪಟ್ಟಿ ಬಿಡುಗಡೆಯಾಗಿದ್ದು, ಎನ್​ಆರ್​ಸಿ ಪಟ್ಟಿಯಲ್ಲಿ ಹೆಸರಿಲ್ಲದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಸೊಂತಿಪುರ್ ಜಿಲ್ಲೆಯಲ್ಲಿ 50 ವರ್ಷದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎನ್ಆರ್​​ಸಿ ಪಟ್ಟಿಯಲ್ಲಿ ( 3,11,21,004 ) 3.11 ಕೋಟಿ ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದಂತೆ 19.06 ಲಕ್ಷ ಮಂದಿ ಎನ್​​ಆರ್​​ಸಿಯಲ್ಲಿ ಅರ್ಹತೆ ಪಡೆದುಕೊಂಡಿಲ್ಲ.

ಎನ್​ಆರ್​ಸಿ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಮೇಲ್ಮನವಿ ಸಲ್ಲಿಸಲು 60 ರಿಂದ 120 ದಿನಗಳ ಕಾಲಾವಕಾಶ ನೀಡಲಾಗಿದೆ. ಇವರು ವಿದೇಶಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಐದು ಅಂಶಗಳ ಸಲಹೆ ಹೊರಡಿಸಲಾಗಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.