ETV Bharat / bharat

ನೊಬೆಲ್​ ಪ್ರಶಸ್ತಿಗೋಸ್ಕರ ಹೌರಾ ಸೇತುವೆ ಏರಿ ಕುಳಿತ ಮಹಿಳೆ... ವಿಡಿಯೋ!

ತನಗೆ ನೀಡಿರುವ ನೊಬೆಲ್​ ಪ್ರಶಸ್ತಿ ಚಿಕ್ಕವಳಾಗಿದ್ದಾಗ ಕಳ್ಳತನವಾಗಿದ್ದು, ಅದನ್ನು ಹುಡುಕಿಕೊಡುವಂತೆ ಮಹಿಳೆಯೋರ್ವಳು ಹೌರಾ ಸೇತುವೆ ಏರಿ ಪ್ರತಿಭಟನೆ ನಡೆಸಿರುವ ವಿಚಿತ್ರ ಘಟನೆ ನಡೆದಿದೆ.

Woman climbs up Howrah bridge,
Woman climbs up Howrah bridge,
author img

By

Published : Jul 10, 2020, 2:02 AM IST

ಕೋಲ್ಕತ್ತಾ: ವಿಶ್ವ ಪ್ರಸಿದ್ದ ಹೌರಾ ಸೇತುವೆ ಮೇಲೆ ಏರಿ ಕುಳಿತ ಮಹಿಳೆಯೋರ್ವಳು ತನಗೆ ನೀಡಿದ್ದ ನೊಬೆಲ್​ ಪ್ರಶಸ್ತಿ ವಾಪಸ್​​ ನೀಡುವಂತೆ ಆಗ್ರಹಿಸಿರುವ ಘಟನೆ ನಡೆದಿದ್ದು, ಆಕೆಯನ್ನ ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ನೊಬೆಲ್​ ಪ್ರಶಸ್ತಿಗೋಸ್ಕರ ಹೌರಾ ಸೇತುವೆ ಏರಿ ಕುಳಿತ ಮಹಿಳೆ

ಬಾಲ್ಯದಲ್ಲಿ ತಾನು ಪಡೆದುಕೊಂಡಿದ್ದ ನೊಬೆಲ್​ ಪ್ರಶಸ್ತಿ ಕಳವು ಮಾಡಲಾಗಿದ್ದು, ಇದೀಗ ಅದು ಅಮರ್ತ್ಯ ಸೇನ್​​ ಅವರ ಕೈಯಲ್ಲಿದೆ. ಈಗಾಗಲೇ ಅದನ್ನ ಹುಡುಕಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಅನೇಕ ಸಲ ಪತ್ರ ಬರೆದಿದ್ದೇನೆ ಎಂದಿರುವ ಮಹಿಳೆ ತಕ್ಷಣವೇ ಹಿಂದಿರುಗಿಸುವಂತೆ ಒತ್ತಾಯಿಸಿ ಹೌರಾ ಸೇತುವೆ ಏರಿದ್ದಾಳೆ. ಈ ವೇಳೆ ಆಕೆಯೊಂದಿಗೆ ಅನೇಕ ನಿಮಿಷಗಳ ಕಾಲ ಮಾತುಕತೆ ನಡೆಸಿದ ಪೊಲೀಸರು ಮನವೊಲಿಕೆ ಮಾಡಿ ಕೆಳಗಿಳಿಸಿದ್ದಾರೆ.

ಮಹಿಳೆ ಮಾನಸಿಕ ಅಸ್ವಸ್ಥ್ಯೆ ಎಂದು ಹೇಳಲಾಗುತ್ತಿದ್ದು, ಹೌರಾದ ನಾಲ್ಕನೇ ಸೇತುವೆ ಏರಿ ಕುಳಿತುಕೊಂಡಿದ್ದಳು. ಈ ವೇಳೆ ಪೊಲೀಸರು ಮತ್ತು ಆಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು ಕೆಳಗೆ ಇಳಿಸಿದ್ದಾರೆ. ಇದಾದ ಬಳಿಕ ಮಹಿಳೆಯನ್ನ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.