ನವದೆಹಲಿ: ರಾಷ್ಟ್ರೀಯ ಭದ್ರತೆಗಾಗಿ ಚೀನಾದ ಹೂಡಿಕೆಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ, 2017ರ ಸಾಮಾನ್ಯ ಹಣಕಾಸು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಭಾರತದ ರಕ್ಷಣೆಯ ಆಧಾರದ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ಹಾಗೂ ಗಡಿ ವಿವಾದ ಹೊಂದಿರುವ ದೇಶಗಳು ಹೂಡಿಕೆ ಮಾಡುವುದನ್ನು ನಿರ್ಬಂಧ ಹೇರಲು ಸಾಧ್ಯವಾಗುವಂತೆ ತಿದ್ದುಪಡಿ ಮಾಡಲಾಗಿದೆ.
ಭಾರತದ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ಬಲಪಡಿಸಲು ಈ ಕುರಿತು ವಿವರವಾದ ಆದೇಶ ಹೊರಡಿಸಲಾಗಿದೆ.
ಕಳೆದ ತಿಂಗಳು ಟಿಕ್ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾ ಸಂಬಂಧಿತ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಸರ್ಕಾರ ಇದೀಗ ರಾಷ್ಟ್ರೀಯ ಭದ್ರತೆಗಾಗಿ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದೆ.