ETV Bharat / bharat

ಬಿಜೆಪಿಯ ಗೋಪಾಲ್​ಗೆ ಗುನ್ನಾ ಕೊಡ್ತಾರಾ ನಟಿ ರಂಗೀಲಾ​ ? - ಉರ್ಮಿಳಾ ಮಾತೋಂಡ್ಕರ್

ಒಂದು ಬಾರಿ ಎಂಎಲ್​ಎ ಆಗಿದ್ದ ಗೋಪಾಲ್ ಶೆಟ್ಟಿ 2014 ರ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಕೆಲವೊಂದು ವಿವಾದಾತ್ಮಕ ಹೇಳಿಕೆ ನೀಡಿ ಕ್ಷೇತ್ರದ ಜನರ ಕೆಂಗಣ್ಣಿಗೂ ಗುರಿಯಾಗಿದ್ದ ಗೋಪಾಲ್​, ಇದೀಗ ಮರು ಆಯ್ಕೆ ಬಯಸಿ ಚುನಾವಣೆ ಎದುರಿಸಿದ್ದಾರೆ.

ಚಿತ್ರಕೃಪೆ : ಟ್ವಿಟ್ಟರ್
author img

By

Published : May 22, 2019, 3:21 PM IST

ಬಾಲಿವುಡ್​ನಲ್ಲಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿ ಮಿಂಚಿದ್ದ ನಟಿ ಉರ್ಮಿಳಾ ಮಾತೋಂಡ್ಕರ್ ಸದ್ಯ ರಾಜಕಾರಣಿ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರಿದ್ದ ಈ ರಂಗೀಲಾ, ಮುಂಬೈನ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಬಣ್ಣದ ಲೋಕ ಬಿಟ್ಟು ರಾಜಕಾರಣಕ್ಕೆ ಧುಮುಕಿರುವ ಇವರು, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಗೋಪಾಲ್​ ಶೆಟ್ಟಿಗೆ ಸೋಲಿನ ರುಚಿ ತೋರಿಸಲು ರಣತಂತ್ರ ಹೆಣೆದಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ತುಂಬೆಲ್ಲಾ ಓಡಾಡಿ ಭರ್ಜರಿ ಪ್ರಚಾರ ನಡೆಸಿದ್ದರು. ಹೈಕಮಾಂಡ್​ ನಾಯಕರ ಬೆಂಬಲವು ಉರ್ಮಿಳಾಗೆ ಇದ್ದು, ಗೆಲುವಿನ ಉತ್ಸಾಹದಲ್ಲಿದ್ದಾರೆ.

ಇತ್ತ ಒಂದು ಬಾರಿ ಎಂಎಲ್​ಎ ಆಗಿದ್ದ ಗೋಪಾಲ್ ಶೆಟ್ಟಿ 2014 ರ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಕೆಲವೊಂದು ವಿವಾದಾತ್ಮಕ ಹೇಳಿಕೆ ನೀಡಿ ಕ್ಷೇತ್ರದ ಜನರ ಕೆಂಗೆಣ್ಣಿಗೂ ಗುರಿಯಾಗಿದ್ದ ಗೋಪಾಲ್​, ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಧರ್ಮದವರು ಪಾಲ್ಗೊಂಡಿರಲಿಲ್ಲವೆಂದು ಆರೋಪಿಸಿದ್ದರು. ಅದರಂತೆ ರೈತರ ಆತ್ಮಹತ್ಯೆ ಬಗ್ಗೆ ಇವರು ಮಾತಾಡಿದ್ದು ಕೂಡ ಕಾಂಟ್ರವರ್ಸಿಯಾಗಿತ್ತು. ಇದೀಗ ಮರು ಆಯ್ಕೆ ಬಯಸಿ ಚುನಾವಣೆ ಎದುರಿಸಿದ್ದಾರೆ.

ಮುಂಬೈ ನಾರ್ಥ್​ ಲೋಕಸಭಾ ಕ್ಷೇತ್ರ ಆರು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಇವುಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಶಿವಸೇನಾ ಹಾಗೂ ಕಾಂಗ್ರೆಸ್​ನ ತಲಾ ಒಬ್ಬೊಬ್ಬರು ಎಂಎಲ್​​ಎಗಳಿದ್ದಾರೆ.

ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಆರು ಬಾರಿ ಗೆಲುವು ಪಡೆದಿದೆ. 1989, 1991, 1996, 1998, 1999 ಹಾಗೂ 2014ರಲ್ಲಿ ಕಮಲ ಅರಳಿದೆ. ಐದು ಬಾರಿ ಕಾಂಗ್ರೆಸ್ ( 1957, 1962, 1984, 2004, 2009)​, ಸಿಪಿಐ ( 1952), ಭಾರತೀಯ ಲೋಕ್​ ದಳ ( 1977), ಜನತಾ ಪಾರ್ಟಿ (1980 ) ತಲಾ ಒಂದೊಂದು ಬಾರಿ ಮುಂಬೈ ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.