ETV Bharat / bharat

ನಂಗೆ ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುವೆ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಯಾವತ್ತಾದರೂ ನನಗೆ ಕೋವಿಡ್​ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿಪಾತ್ರರನ್ನು- ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್​ ಹಜ್ರಾ ಹೇಳಿದ್ದಾರೆ.

author img

By

Published : Sep 28, 2020, 12:36 PM IST

Updated : Sep 28, 2020, 12:56 PM IST

BJP's national secretary
ಅನುಪಮ್​ ಹಜ್ರಾ

ಕೋಲ್ಕತ್ತಾ: ನನಗೆ ಕೊರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್​ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ರ‍್ಯಾಲಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತಾದರೂ ನನಗೆ ಕೋವಿಡ್​ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿಪಾತ್ರರನ್ನು-ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆ

ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ರ‍್ಯಾಲಿ ವೇಳೆ ಅನುಪಮ್​ ಹಜ್ರಾ ಆಗಲಿ, ಇತರ ಬಿಜೆಪಿ ಕಾರ್ಯಕರ್ತರಾಗಲಿ ಮಾಸ್ಕ್​ಗಳನ್ನ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.

ರಾಹುಲ್ ಸಿನ್ಹಾರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟ ಪಕ್ಷ ಅನುಪಮ್​ ಹಜ್ರಾರನ್ನು ಇವರ ಸ್ಥಾನಕ್ಕೆ ನೇಮಕ ಮಾಡಿದೆ. ಭೋಲ್ಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್​ನ ಮಾಜಿ ಲೋಕಸಭಾ ಸಂಸದರಾಗಿದ್ದ ಹಜ್ರಾ ಅವರನ್ನು 'ಪಕ್ಷ ವಿರೋಧಿ' ಚಟುವಟಿಕೆಗಳಿಂದಾಗಿ ಪಕ್ಷದಿಂದ ಹೊರಹಾಕಲಾಗಿತ್ತು.

Last Updated : Sep 28, 2020, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.