ನವದೆಹಲಿ: ದೇಶದ ಹಲವೆಡೆ ಕೃಷಿ ಮಸೂದೆಗಳಿಗೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
-
जायज़ माँगे हैं किसानों की,
— Rahul Gandhi (@RahulGandhi) September 26, 2020 " class="align-text-top noRightClick twitterSection" data="
देश की आवाज़ सुनो, मोदी जी।
जय किसान, जय हिंदुस्तान।#SpeakUpForFarmers pic.twitter.com/wrKLbwkvhJ
">जायज़ माँगे हैं किसानों की,
— Rahul Gandhi (@RahulGandhi) September 26, 2020
देश की आवाज़ सुनो, मोदी जी।
जय किसान, जय हिंदुस्तान।#SpeakUpForFarmers pic.twitter.com/wrKLbwkvhJजायज़ माँगे हैं किसानों की,
— Rahul Gandhi (@RahulGandhi) September 26, 2020
देश की आवाज़ सुनो, मोदी जी।
जय किसान, जय हिंदुस्तान।#SpeakUpForFarmers pic.twitter.com/wrKLbwkvhJ
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ರಾಹುಲ್, ರೈತರು ಕಾನೂನುಬದ್ದ ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಧ್ವನಿಯನ್ನು ಕೇಳಬೇಕು ಎಂದಿದ್ದಾರೆ.
ನೀವು ನಿರಂತರವಾಗಿ ದಾಳಿಗಳನ್ನು ಮಾಡುತ್ತಿದ್ದೀರಿ. ಮೊದಲ ನೋಟು ಅಮಾನ್ಯೀಕರಣ ಮಾಡಿದ್ದೀರಿ, ಆ ನಂತರ ಜಿಎಸ್‌ಟಿ ಜಾರಿ, ಇದೀಗ ಕೋವಿಡ್ ಸಮಯದಲ್ಲಿ ನಿಮಗೆ ಆರ್ಥಿಕ ನೆರವು ನೀಡಿದ್ದಾರೆ. ಕಾರ್ಪೋರೇಟರ್‌ಗಳ ಗುಲಾಮಗಿರಿಯಾಗಿ ರೈತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೃಷಿಯನ್ನು ಖಾಸಗೀಕರಣ ಮಾಡಲು ಈ ಮೂವರು ಕೃಷಿ ಮಸೂದೆಗಳನ್ನು ಜಾರಿಗೆ ತರುತ್ತಿದ್ದೀರಿ. ನಾವು ಸೈನಿಕರಂತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ರೈತರಿಗೆ ಅಭಯ ನೀಡಿದ್ದಾರೆ. ಮಸೂದೆಗಳನ್ನು ತಡೆಯಲು ಒಟ್ಟಾಗಿ ಹೋರಾಡೋಣ ಎಂದಿದ್ದಾರೆ.
ಕಾಂಗ್ರೆಸ್ ಇಂದು #SpeakUpForFarmers ಎಂಬ ಅಭಿಯಾನವನ್ನು ಆರಂಭಿಸಿದ್ದು, ಅದರ ಭಾಗವಾಗಿ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.