ETV Bharat / bharat

ಇಂದಿರಾಗೆ ಬಾಂಗ್ಲಾ​ ವಿಭಜನೆ ಕ್ರೆಡಿಟ್​​​ ಒಕೆ, ಏರ್​ಸ್ಟ್ರೈಕ್​​​ ಕ್ರೆಡಿಟ್​​​​​​ ಮೋದಿಗೇಕಿಲ್ಲ: ರಾಜನಾಥ್​​ ಸಿಂಗ್​​​​

ಪಾಕಿಸ್ತಾನ ವಿಭಜಿಸಿ ಬಾಂಗ್ಲಾ ರಾಷ್ಟ್ರ ಉದಯಿಸಿದ ಕ್ರೆಡಿಟ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲುವುದಾದರೆ, ಬಾಲಾಕೋಟ್ ಏರ್​ಸ್ಟ್ರೈಕ್​ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬಾರದೇಕೆ: ರಾಜನಾಥ್ ಸಿಂಗ್ ಪ್ರಶ್ನೆ

author img

By

Published : Mar 30, 2019, 9:48 PM IST

ಆರ್ಮಿ ಕ್ರೆಡಿಟ್​ ವಾರ್​

ಅಹಮದಾಬಾದ್: ಪುಲ್ವಾಮಾ ದಾಳಿಗೆ ಪ್ರತೀಕಾರವಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುಪಡೆ ದಾಳಿಯ ಕ್ರೆಡಿಟ್​ ವಾಕ್ ವಾರ್ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿರಾ ಗಾಂಧಿಯವರ ನಡೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಮಪತ್ರ ಸಲ್ಲಿಕೆಯ ಬಳಿಕ ಸಾರ್ವಜನಿಕ ಮೆರವಣಿಗೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್​, ಪಾಕಿಸ್ತಾನ ವಿಭಜಿಸಿ ಬಾಂಗ್ಲಾ ರಾಷ್ಟ್ರ ಉದಯಿಸಿದ ಕ್ರೆಡಿಟ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲುವುದಾದರೆ, ಬಾಲಾಕೋಟ್ ಏರ್​ಸ್ಟ್ರೈಕ್​ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬಾರದು ಏಕೆ ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಸೈನಿಕರ ಸಾಮರ್ಥ್ಯದಿಂದ ಪಾಕಿಸ್ತಾನ ವಿಂಗಡನೆಯಾಗಿ ಬಾಂಗ್ಲಾದೇಶ ಜನ್ಮ ತಾಳಿತು. ಭಾರತ-ಪಾಕ್​ ನಡುವೆ ಸಂಭವಿಸಿದ್ದ ಯುದ್ಧದ ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಇಂದಿರಾ ಗಾಂಧಿ ಅವರನ್ನು ಪ್ರಶಂಸಿದ್ದರು. ಇದರ ಜೊತೆಗೆ ಅವರು ಇಡೀ ದೇಶದ ಪ್ರಶಂಸೆಗೆ ಪಾತ್ರರಾಗಿದ್ದರು. ಈಗ ಮೋದಿಯನ್ನು ಏಕೆ ಪ್ರಶ್ನಿಸುತ್ತಿರಾ ಎಂದರು.

'ನಮ್ಮ ಸಿಆರ್​ಪಿಎಫ್​ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದರ ಸೇಡು ತೀರಿಸಿಕೊಳ್ಳಲು ನಮ್ಮ ಪ್ರಧಾನಿ ಏರ್​ಸ್ಟ್ರೈಕ್ ಮುಖಾಂತರ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ನಮ್ಮ ಪ್ರಧಾನಿಯನ್ನು ಏಕೆ ಪ್ರಶಂಸಿಸಬಾರದು ಎಂದಿದ್ದಾರೆ.

2008ರಲ್ಲಿ ನಡೆದ 26/11 ಮುಂಬೈ ಭಯೋತ್ಪಾದನಾ ದಾಳಿಯ ನಂತರ ಇದೇ ರೀತಿಯ ಪ್ರತೀಕಾರ ಕ್ರಮ ಕೈಗೊಳ್ಳದೆ ಅಂದಿನ ಕಾಂಗ್ರೆಸ್​ ಪ್ರಧಾನಿ ಹಿಂದೆ ಸರಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಂದು ಪಾಕಿಸ್ತಾನದ ವಿರುದ್ಧ ಏನೂ ಮಾಡಲು ಆಗಲಿಲ್ಲ. ರಾಜಕೀಯ ಮತ್ತು ಮಿಲಿಟರಿ ಶಕ್ತಿ ಕೈಗೆತ್ತಿಕೊಂಡಾಗ ವಿಶ್ವದ ಮಿಲಿಟರಿ ಶಕ್ತಿ ಸವಾಲೊಡ್ಡಬಹುದೆಂಬ ಅಳುಕಿತ್ತು ಎಂದು ಟೀಕಿಸಿದರು.

ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಭಯೋತ್ಪಾದಕರ ಆತ್ಮಾಹುತಿ ದಾಳಿಯಲ್ಲಿ 49 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಮುಕ್ತ ಅವಕಾಶ ನೀಡಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದರು.

Intro:Body:

ಇಂದಿರಾಗೆ ಬಾಂಗ್ಲಾ​ ವಿಭಜನೆ ಕ್ರೆಡಿಟ್​ ಒಕೆ... ಏರ್​ಸ್ಟ್ರೈಕ್​ ಕ್ರೆಡಿಟ್ ಮೋದಿಗೇಕಿಲ್ಲ: ರಾಜನಾಥ್ ಸಿಂಗ್​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.