ನವದೆಹಲಿ: ದೇಶದಲ್ಲಿ ಆವರಿಸಿಗೊಂಡ ಕೊರೊನಾ ವೈರಸ್ ಎಂಬ ಮಹಾಮಾರಿಯಿಂದಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರುಗಳು ಹಸಿವಿನಿಂದ ಬಳಲತ್ತಿದ್ದರೆ, ಇತ್ತ ಸರ್ಕಾರ ಮಾತ್ರ ಬಡವರು ಬೆವರಿ ಸುರಿಸಿ ದುಡಿದ ಹಣದಿಂದಾಗಿ ಸ್ಯಾನಿಟೈಸರ್ಗಳನ್ನು ತಯಾರಿಸುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಇದ್ದಕ್ಕಿದ್ದಂತೆ ಭಾರತ ದೇಶದಲ್ಲಿ ವ್ಯಾಪಿಸಿದ ಕೊರೊನಾ ವೈರಸ್ನಿಂದಾಗಿ ಸ್ಯಾನಿಟೈಸರ್ಗಳಿಗೆ ಎಂದಿಲ್ಲಿದ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ಗಳು ಮಾರಾಟವಾದಷ್ಟು ಬೇರಾವು ವಸ್ತುವೂ ಮಾರಾಟವಾಗುತ್ತಿಲ್ಲ. ಸ್ಯಾನಿಟೈಸರ್ನಿಂದ ಕೈಗಳನ್ನು ಶುಚಿಗೊಳಿಸಿದರೆ ಕೊರನಾ ವೈರಸ್ ತಗುಲುವುದಿಲ್ಲ ಎಂಬ ಕಾರಣಕ್ಕೆ ಜನರು ಈ ಉತ್ಪನ್ನಕ್ಕೆ ಅತೀ ಹೆಚ್ಚಾಗಿ ಮುಗಿಬೀಳುತ್ತಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ.
ಭಾರತದಲ್ಲಿನ ಬಡವರು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದೆ. ನೀವು ಹಸಿವಿನಿಂದ ಸಾಯುತ್ತಿದ್ದೀರಿ, ಆದರೆ ನಿಮ್ಮ ದುಡಿಮೆಯ ಪಾಲಿನಿಂದ ಸ್ಯಾನಿಟೈಸರ್ಗಳನ್ನು ತಯಾರಿಸಿ ಶ್ರೀಮಂತರ ಕೈಗಳಲ್ಲಿನ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಸರ್ಕಾರ ನಿರತವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಸಣ್ಣ ಮತ್ತು ದೊಡ್ಡ ಉಪಕರಣಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಬೇಡಿ ಎಂದು ಈ ಹಿಂದೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಲ್ಲದೆ, ಕೊರೊನಾ ವೈರಸ್ ಬಿಕ್ಕಟ್ಟನ್ನು ತಡೆಗಟ್ಟಲು ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ವಯಾನಾಡಿನ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಗಾ ಉಲ್ಲೇಖಿಸಿದ್ದಾರೆ.