ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಎರಡನೇ ಅವಧಿಯ ಬಹು ನಿರೀಕ್ಷಿತ ಬಜೆಟ್ ಮಂಡನೆಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದು, 30.42 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯವನ್ನು ರಾಷ್ಟ್ರದ ಜನತೆಯ ಮುಂದಿಟ್ಟರು.
![Nirmala Sitharaman](https://etvbharatimages.akamaized.net/etvbharat/prod-images/5923628_jay.jpg)
2020-21ನೇ ವಿತ್ತೀಯ ವರ್ಷದ ಬಜೆಟ್ ಭಾಷಣವನ್ನು 11.20ಕ್ಕೆ ಆರಂಭಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಸುಮಾರು 2 ಗಂಟೆ 41 ನಿಮಿಷಗಳವರೆಗೆ ಆಯವ್ಯಯ ಪ್ರತಿಗಳನ್ನು ಓದಿದ್ರು. ಈ ನಡುವೆ ಗಂಟಲು ಒಣಗಿದಂತಾಗಿ ಮೂರು ಬಾರಿ ನೀರು ಕುಡಿದರು. ಅವರ ಪರಿಸ್ಥಿತಿ ಗಮನಿಸಿದ ಪ್ರತಿಪಕ್ಷ ನಾಯಕರು ಭಾಷಣ ನಿಲ್ಲಿಸುವಂತೆ ಆಗ್ರಹಿಸಿದ್ದರೂ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.