ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ ಮಮತಾ, ರಾಜ್ಯದ ಹೆಸರನ್ನು 'ಬಾಂಗ್ಲಾ' ಎಂದು ಬದಲಿಸಲು ಪ್ರಧಾನಿಗೆ ಮನವಿ ಸಲ್ಲಿಸಿದರು. ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ವಿವಿಧ ಅನುದಾನಗಳ ತ್ವರಿತ ಬಿಡುಗಡೆಗೆ ಮನವಿ ಮಾಡಿದ್ರು.
ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಮತಾ, ಮೋದಿಯವರೊಂದಿಗೆ ನಡೆಸಿದ ಸಭೆ ಉತ್ತಮವಾಗಿತ್ತು. ರಾಜ್ಯದ ಹೆಸರು ಬದಲಿಸಲು ಇತ್ತ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಏನಾದರೂ ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದರು.
-
West Bengal CM Mamata Banerjee in Delhi: The meeting with Prime Minister was good. We discussed changing the name of West Bengal to 'Bangla'. He has promised to do something about the matter. pic.twitter.com/pujLHoooev
— ANI (@ANI) September 18, 2019 " class="align-text-top noRightClick twitterSection" data="
">West Bengal CM Mamata Banerjee in Delhi: The meeting with Prime Minister was good. We discussed changing the name of West Bengal to 'Bangla'. He has promised to do something about the matter. pic.twitter.com/pujLHoooev
— ANI (@ANI) September 18, 2019West Bengal CM Mamata Banerjee in Delhi: The meeting with Prime Minister was good. We discussed changing the name of West Bengal to 'Bangla'. He has promised to do something about the matter. pic.twitter.com/pujLHoooev
— ANI (@ANI) September 18, 2019
ನವರಾತ್ರಿ ಪೂಜೆಯ ಬಳಿಕ, ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿರುವ ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಬ್ಲಾಕ್, ದಿಯೋಚಾ ಪಚಾಮಿಗೆ ಹಾಜರಾಗುವಂತೆ ನಾನು ಪ್ರಧಾನಿಯನ್ನು ವಿನಂತಿಸಿದ್ದೇನೆ. ಈ ಯೋಜನೆಯ ಒಟ್ಟು ಮೌಲ್ಯ 12,000 ಕೋಟಿ ರೂ. ಎಂದು ಮಮತಾ ತಿಳಿಸಿದರು.
ಇದನ್ನೂ ಓದಿ : ಧೂಮಪಾನಿಗಳಿಗೆ ಶಾಕಿಂಗ್! ಸೇದಿದ್ರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಶಿಕ್ಷೆ, ಯಾವುದೀ ಸಿಗರೇಟ್?
ಬೆಜೆಪಿ ಮತ್ತು ನರೇಂದ್ರ ಮೋದಿಯವರನ್ನು ಸದಾ ಟೀಕಿಸುತ್ತಿದ್ದ ಮಮತಾ ಬ್ಯಾನರ್ಜಿ, ಇಂದು ಅವರೊಂದಿಗೆ ನಡೆಸಿರುವ ಚರ್ಚೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.