ETV Bharat / bharat

ಖಗೋಳ ಮಾದರಿಗಳ ಅಧ್ಯಯನದ ಸುವರ್ಣ ಯುಗ ಈ ದಶಕ..! - ಮಂಗಳನ ಮೇಲ್ಮೈ

1969 ರಿಂದ 1972ರ ಅವಧಿಯಲ್ಲಿ ಅಪೋಲೊ ಗಗನಯಾತ್ರಿಗಳು 842 ಪೌಂಡ್ ತೂಕದ ಖಗೋಳ ಮಾದರಿಗಳನ್ನು ಭೂಮಿಗೆ ತಂದಿದ್ದರು. ಅಲ್ಲಿಗೆ 50 ವರ್ಷ ಕಳೆದರೂ ಇನ್ನೂವರೆಗೂ ವಿಜ್ಞಾನಿಗಳು ಆ ಮಾದರಿಗಳನ್ನು ಸಂಶೋಧನೆ ಮಾಡುತ್ತಲೇ ಇದ್ದು, ಈಗಲೂ ಹೊಸ ಅಧ್ಯಯನಾ ವರದಿಗಳನ್ನು ಪ್ರಕಟಿಸುತ್ತಿದ್ದಾರೆ.

We are living in a golden age of sample return missions
ಈ ದಶಕ ಖಗೋಳ ಮಾದರಿಗಳ ಅಧ್ಯಯನದ ಸುವರ್ಣ ಯುಗ
author img

By

Published : Feb 7, 2021, 6:26 PM IST

ದೂರದಿಂದ ಅನ್ಯಗ್ರಹ, ಆಕಾಶಕಾಯ ಅಥವಾ ಧೂಮಕೇತುಗಳನ್ನು ನೋಡುವುದು ಹಾಗೂ ಅವುಗಳ ಬಗ್ಗೆ ಅಧ್ಯಯನ ಮಾಡುವುದು ಬಹುಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಆದರೆ, ದೂರದಿಂದ ನೋಡಿ ಅಧ್ಯಯನ ಮಾಡುವುದರಿಂದ ಮಾತ್ರವೇ ಈಗ ಮಾನವ ಸಂತುಷ್ಟನಾಗಿಲ್ಲ. ಖಗೋಳ ವಿಜ್ಞಾನ ಬೆಳೆದಂತೆ ಜ್ಯೋತಿರ್ವರ್ಷಗಳಷ್ಟು ದೂರವಿರುವ ಆಕಾಶಕಾಯಗಳಿಗೂ ಲಗ್ಗೆ ಇಡಲು ಮಾನವಕುಲ ಇಂದು ಯೋಜನೆಗಳನ್ನು ರೂಪಿಸುತ್ತಿದೆ. ಈ ಮಧ್ಯೆ ಗ್ರಹ, ಧೂಮಕೇತು ಹಾಗೂ ಆಕಾಶಕಾಯಗಳತ್ತ ಉಪಗ್ರಹಗಳನ್ನು ಹಾರಿಸಿ, ಅವುಗಳ ಮೇಲ್ಮೈಯಲ್ಲಿರುವ ಕಲ್ಲು, ಮಣ್ಣು ಇತ್ಯಾದಿಗಳನ್ನು ಭೂಮಿಗೆ ತರುವ ಹಲವಾರು ಯೋಜನೆಗಳು ಸದ್ಯ ಪ್ರಗತಿಯಲ್ಲಿವೆ.

ಭೂಮಿ ಬಿಟ್ಟು ಮತ್ತೆಲ್ಲಾದರೂ ಜೀವಸಂಕುಲವಿದೆಯೇ?

ಸೌರ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ಭೂಮಿಯ ಮೇಲೆ ಜೀವಕೋಶಗಳು ಹುಟ್ಟಿದ್ದು ಹೇಗೆ? ಭೂಮಿ ಬಿಟ್ಟು ಮತ್ತಾವುದಾದರೂ ಗ್ರಹದಲ್ಲಿ ಜೀವಸಂಕುಲವಿದೆಯೇ? ಖಗೋಳ ವಿಜ್ಞಾನಕ್ಕೆ ಈ ಎಲ್ಲ ಪ್ರಶ್ನೆಗಳು ಬಹುಕಾಲದಿಂದ ಕಾಡುತ್ತಲೇ ಇವೆ. ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಆ ಗ್ರಹಗಳ ಮೇಲಿನ ಕಲ್ಲು, ಮಣ್ಣು ಮುಂತಾದ ವಸ್ತುಗಳನ್ನು ಭೂಮಿಗೆ ತಂದು ಪರೀಕ್ಷೆ ಮಾಡುವುದು ಅತಿ ಅಗತ್ಯವಾಗಿದೆ.

ಬ್ರಹ್ಮಾಂಡದ ರಚನೆಯ ಬಗ್ಗೆ ನಮ್ಮ ತಿಳುವಳಿಕೆ ಹಾಗೂ ವಾಸ್ತವದಲ್ಲಿ ಬ್ರಹ್ಮಾಂಡ ಹೇಗೆ ಕೆಲಸ ಮಾಡುತ್ತಿದೆ ಎಂದುದನ್ನು ತಿಳಿಯಬೇಕಾದರೆ ಅನ್ಯಗ್ರಹಗಳ ಮಾದರಿಗಳನ್ನು ಭೂಮಿಗೆ ತಂದು ಅಧ್ಯಯನ ಮಾಡುವುದೊಂದೇ ನಮಗಿರುವ ದಾರಿ ಎನ್ನುತ್ತಾರೆ ಮೆಸಾಚುಸೆಟ್ಸ್​ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳ ಜೀವವಿಜ್ಞಾನಿ ತಂಜಾ ಬೋಸಕ್.

2020ರ ವರ್ಷ: ಖಗೋಳ ಮಾದರಿ ಸಂಗ್ರಹಣೆಯಲ್ಲಿ ಮಹತ್ತರ ಪಾತ್ರ

ಖಗೋಳ ಮಾದರಿಗಳನ್ನು ಭೂಮಿಗೆ ತರುವಲ್ಲಿ 2020ನೇ ವರ್ಷವು ಅತ್ಯಂತ ನಿರ್ಣಾಯಕ ವರ್ಷವೆಂದು ಪರಿಗಣಿಸಲ್ಪಟ್ಟಿದೆ. ಇದೇ ವರ್ಷದಲ್ಲಿ ನಾಸಾದ ಓಸಿರಿಸ್-ರೆಕ್ಸ್​ ಉಪಗ್ರವು ಬೆನ್ನು ಎಂಬ ಕ್ಷುದ್ರಗ್ರಹದ ಮೇಲಿಳಿದು ಅದರ ಮೇಲ್ಮೈಯಲ್ಲಿನ ಮಾದರಿಗಳನ್ನು ಯಶಸ್ವಿಯಾಗಿ ಎತ್ತಿಕೊಂಡಿದೆ. ಬರುವ ಮೇ ತಿಂಗಳಲ್ಲಿ ಈ ಉಪಗ್ರಹ ಸ್ಯಾಂಪಲ್​ಗಳನ್ನು ಹೊತ್ತು ಮರಳಿ ಭೂಮಿಗೆ ಪ್ರಯಾಣ ಬೆಳೆಸಲಿದೆ. ಕಳೆದ ಡಿಸೆಂಬರ್​ನಲ್ಲಿ ಜಪಾನಿನ ಹಯಾಬುಸಾ-2 ಉಪಗ್ರಹವು ರಿಯುಗು ಎಂಬ ಕ್ಷುದ್ರಗ್ರಹದ ಸ್ಯಾಂಪಲ್​ಗಳನ್ನು ಯಶಸ್ವಿಯಾಗಿ ಭೂಮಿಗೆ ತಂದಿದೆ. 45 ವರ್ಷಗಳ ನಂತರ ಚೀನಾ ಮತ್ತೊಮ್ಮೆ ಚಂದ್ರನ ಮೇಲಿನ ಸ್ಯಾಂಪಲ್​ಗಳನ್ನು ಭೂಮಿಗೆ ತಂದಿದೆ.

We are living in a golden age of sample return missions
ಈ ದಶಕ ಖಗೋಳ ಮಾದರಿಗಳ ಅಧ್ಯಯನದ ಸುವರ್ಣ ಯುಗ

ಇನ್ನಷ್ಟೇ ಬರಲಿವೆ ಅತಿ ರೋಚಕ ಖಗೋಳ ಮಾದರಿಗಳು!

ಖಗೋಳ ವಿಜ್ಞಾನ ಸಂಶೋಧನೆಯಲ್ಲಿ ಮಹತ್ತರ ಪಾತ್ರ ವಹಿಸಬಲ್ಲ ಅತ್ಯಂತ ರೋಚಕವಾದ ಖಗೋಳ ಮಾದರಿಗಳು ಇನ್ನಷ್ಟೇ ಬರಲಿವೆ. ಕಳೆದ ವರ್ಷ ಹಾರಿಬಿಡಲಾದ ಪರ್ಸೀವರೆನ್ಸ್​ ರೋವರ್ ಎಂಬ ಉಪಗ್ರಹವು ಕೆಲವೇ ವಾರಗಳಲ್ಲಿ ಮಂಗಳನ ಮೇಲೆ ಇಳಿಯಲಿದ್ದು, ಪ್ರಾಚೀನ ಕಾಲದಲ್ಲಿ ಅಲ್ಲಿ ಯಾವುದಾದರೂ ಜೀವಿಗಳಿದ್ದವಾ ಅಥವಾ ಈಗ ಯಾವುದಾದರೂ ಜೀವಸಂಕುಲ ಅಲ್ಲಿ ವಾಸಿಸುತ್ತಿದೆಯಾ ಎಂಬ ಕುರುಹುಗಳ ಬಗ್ಗೆ ಪತ್ತೆ ಮಾಡಲಿದೆ. ಮಂಗಳನ ಮೇಲ್ಮೈ ಮೇಲೆ ಆಳವಾಗಿ ಗುಂಡಿ ತೋಡಿ ಮಣ್ಣು, ಕಲ್ಲುಗಳ ಮಾದರಿಯನ್ನು ಇದು ಸಂಗ್ರಹಿಸಲಿದೆ. ಆದರೆ ಇದು ಮರಳಿ ಭೂಮಿಗೆ ಯಾವಾಗ ಬರಲಿದೆ ಎಂಬುದು ಈಗಲೇ ಖಚಿತವಿಲ್ಲ!

ಚೀನಾ ತನ್ನ ಚಾಂಗ್​ಇ ಉಪಗ್ರಹದ ಮೂಲಕ ಮತ್ತಷ್ಟು ಚಂದ್ರನ ಮಾದರಿಗಳನ್ನು 2023ರ ಹೊತ್ತಿಗೆ ಭೂಮಿಗೆ ತರಲಿದೆ. ರಷ್ಯಾ ಸಹ ತನ್ನ ಲೂನಾ ಮಿಷನ್ ಮೂಲಕ 2027ರ ವೇಳೆಗೆ ಇದೇ ರೀತಿಯ ಮಾದರಿಗಳನ್ನು ತರುವ ಉದ್ದೇಶ ಹೊಂದಿದೆ.

ಪ್ರಸಕ್ತ ದಶಕ ಮುಗಿಯುವುದರೊಳಗೆ ಮಂಗಳನ ಮೇಲ್ಮೈ ಮಾದರಿಗಳನ್ನು ತರಲು ಚೀನಾ ಹಾಗೂ ರಷ್ಯಾ ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಇನ್ನು ಜಪಾನ್, ಮಾರ್ಶಿಯನ್ ಮೂನ್ ಎಕ್ಸಪ್ಲೊರೇಶನ್ ಮಿಷನ್ ಹೆಸರಿನಲ್ಲಿ ಯೋಜನೆಯೊಂದನ್ನು ತಯಾರಿಸಿದ್ದು, 2024ರಲ್ಲಿ ಹಾರಿಬಿಡಲಾಗುವ ಈ ಮಿಷನ್ ಉಪಗ್ರಹವು ಮಾರ್ಶಿಯನ್ ಮೂನ್ ಮೇಲಿನ ಮಾದರಿಗಳನ್ನು ಸಂಗ್ರಹಿಸಿ 2029ಕ್ಕೆ ಭೂಮಿಗೆ ಮರಳಲಿದೆ. ಹಾಗೆಯೇ ಕುಬ್ಜ ಗ್ರಹ 'ಸೆರೆಸ್​' ಮೇಲಿನ ಮಾದರಿಗಳನ್ನು ಭೂಮಿಗೆ ತರಲು ಚೀನಾ ಸಂಶೋಧನೆಗಳನ್ನು ನಡೆಸುತ್ತಿದೆ. ಮಂಗಳ ಗ್ರಹದ ವಾತಾವರಣದಲ್ಲಿ ಫಾಸ್ಫಿನ್ ಅನಿಲವಿದೆ ಎಂಬ ವಾದಗಳಿಗೆ ಬಲ ನೀಡುವ ಹೊಸ ಪುರಾವೆಗಳೇನಾದರೂ ಸಿಗಲಿವೆಯಾ ಎಂಬ ಬಗ್ಗೆ ಜಗತ್ತಿನ ವಿಜ್ಞಾನಿಗಳು ಹಾಗೂ ಎಂಜಿನಿಯರುಗಳು ವಿಪರೀತ ಕುತೂಹಲಭರಿತರಾಗಿದ್ದಾರೆ.

ಖಗೋಳ ಮಾದರಿಗಳ ಸುವರ್ಣಯುಗ ಈ ದಶಕ.. ಇಲ್ಲಿವೆ ಕಾರಣಗಳು:

  • ಉಪಗ್ರಹಗಳ ನಿರ್ಮಾಣಕ್ಕೆ ಬೇಕಾದ ಹಾರ್ಡವೇರ್​ ಈಗ ಮೊದಲಿಗಿಂತಲೂ ಅಗ್ಗವಾಗಿದ್ದು, ಒಟ್ಟಾರೆ ಖರ್ಚು ಅತ್ಯಂತ ಕಡಿಮೆಯಾಗಿದೆ.
  • ಗ್ರಹಗಳ ಮೇಲಿನ ಖನಿಜಗಳು ಹಾಗೂ ಸಂಯುಕ್ತ ವಸ್ತುಗಳನ್ನು ಗುರುತಿಸುವ ಸ್ಪೆಕ್ಟ್ರೋಮೀಟರ್​ಗಳು ಈಗ ಗಾತ್ರದಲ್ಲಿ ಮತ್ತಷ್ಟು ಚಿಕ್ಕದಾಗಿದ್ದು, ಇನ್ನಷ್ಟು ನಿಖರತೆಯನ್ನು ಹೊಂದಿವೆ. ಅಲ್ಲದೇ ಅತಿ ಕಡಿಮೆ ಇಂಧನ ಬಳಸಿ ಇವು ಕೆಲಸ ಮಾಡಬಲ್ಲವು.
  • ನ್ಯಾಚುರಲ್ ಫೀಚರ್ ಟ್ರ್ಯಾಕಿಂಗ್ ಮೂಲಕ ರಿಯಲ್ ಟೈಂ ನಲ್ಲಿ ಗ್ರಹಗಳ ಮೇಲ್ಮೈ ಅನ್ನು ನೋಡಬಹುದಾಗಿರುವುದರಿಂದ, ಅವುಗಳ ಮೇಲಿನ ಅಪಾಯಕಾರಿ ಉಬ್ಬು-ತಗ್ಗುಗಳ ಬಗ್ಗೆ ಮೊದಲೇ ತಿಳಿದು ಭೂ ಉಪಗ್ರಹಕ್ಕೆ ಹಾನಿಯಾಗದಂತೆ ತಡೆಯಬಹುದು.

ಯೋಜನೆ ಮತ್ತು ಕಾರ್ಯಾಚರಣೆ ... ಪೇಪರ್ ಟು ಪ್ರ್ಯಾಕ್ಟೀಸ್..!

ಒಂದು ನಿರ್ದಿಷ್ಟ ಖಗೋಳ ಸ್ಥಳಕ್ಕೆ ಮುಟ್ಟುವ ಯೋಜನೆ ಹಾಗೂ ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಮರಳುವುದು ಈ ಎರಡು ಅಂಶಗಳು ಯಾವುದೇ ಒಂದು ಖಗೋಳ ಮಾದರಿ ಸಂಗ್ರಹಣಾ ಕಾರ್ಯಾಚರಣೆಯ ಯಶಸ್ಸಿಗೆ ಅತಿ ಪ್ರಮುಖ ಅಂಶಗಲಾಗಿವೆ ಎನ್ನುತ್ತಾರೆ ಎಂಐಟಿ ವ್ಯೋಮಯಾನಿ ರಿಚರ್ಡ್​ ಬಿಂಜೆಲ್.

ಏನೇ ಆದರೂ ಖಗೋಳ ಮಾದರಿಗಳನ್ನು ತರುವ ಮಾತ್ರದಿಂದಲೇ ಭೂಮಿಯ ಉಗಮ, ಇಲ್ಲಿ ಜೀವಕೋಶಗಳ ಉಗಮದ ಬಗೆಗಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಾರವು. ಜೀವಕೋಶದ ಉಗಮಕ್ಕೆ ಬೇಕಾದ ಅನಿಲಗಳು ಹಾಗೂ ಇತರ ವಾತಾವರಣ ಹೇಗೆ ಭೂಮಿಯ ಮೇಲೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ಒಂದು ಹಂತದವರೆಗೆ ನಾವು ಈ ಖಗೋಳ ಮಾದರಿಗಳಿಂದ ತಿಳಿಯಲು ಯತ್ನಿಸಬಹುದಷ್ಟೇ ಎಂಬುದು ಬಿಂಜೆಲ್ ಅವರ ಅಭಿಪ್ರಾಯ.

ಅಪೋಲೊ ಗಗನಯಾತ್ರಿಗಳು ತಂದಿದ್ದರು 842 ಪೌಂಡ್ ತೂಕದ ಖಗೋಳ ಸ್ಯಾಂಪಲ್

1969 ರಿಂದ 1972ರ ಅವಧಿಯಲ್ಲಿ ಅಪೋಲೊ ಗಗನಯಾತ್ರಿಗಳು 842 ಪೌಂಡ್ ತೂಕದ ಖಗೋಳ ಮಾದರಿಗಳನ್ನು ಭೂಮಿಗೆ ತಂದಿದ್ದರು. ಅಲ್ಲಿಗೆ 50 ವರ್ಷ ಕಳೆದರೂ ಇನ್ನೂವರೆಗೂ ವಿಜ್ಞಾನಿಗಳು ಆ ಮಾದರಿಗಳನ್ನು ಸಂಶೋಧನೆ ಮಾಡುತ್ತಲೇ ಇದ್ದು, ಈಗಲೂ ಹೊಸ ಅಧ್ಯಯನಾ ವರದಿಗಳನ್ನು ಪ್ರಕಟಿಸುತ್ತಿದ್ದಾರೆ.

ಅಂದರೆ ಖಗೋಳ ಮಾದರಿಗಳನ್ನು ತರುವ ಸವಾಲು ಒಂದೆಡೆಯಾದರೆ, ಅವನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿ ಅದರ ಬಗ್ಗೆ ತಿಳಿಯುವುದು ಮತ್ತೊಂದು ಕ್ಲಿಷ್ಟಕರ ಪ್ರಕ್ರಿಯೆಯಾಗಿದೆ. ಒಟ್ಟಾರೆಯಾಗಿ ಮುಂದಿನ ಪೀಳಿಗೆಗಾದರೂ ನಾವು ಈಗ ತಿಳಿದಿರುವುದು ಉಪಯೋಗಕ್ಕೆ ಬರಲಿದೆ ಎಂಬ ಭರವಸೆಯಲ್ಲಿ ದೀರ್ಘಾವಧಿಯ ಇಂಥ ಖಗೋಳ ವಿಜ್ಞಾನ ಯೋಜನೆಗಳು ಮುನ್ನಡೆಯುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.