ETV Bharat / bharat

ಭಾರತದಲ್ಲಿ ನೀರಿನ ಕೊರತೆಗೆ ಇರುವ ಪರಿಹಾರಗಳು - ಭಾರತದಲ್ಲಿ ನೀರಿನ ಕೊರತೆ

ಭಾರತದಲ್ಲಿ ಗಂಭೀರ ಜಲ ಸಂಪನ್ಮೂಲ ಸಮಸ್ಯೆ ಎದುರಾಗುತ್ತಿದ್ದು, ಪರಿಸ್ಥಿತಿ ಮುಂದುವರಿದರೆ 2025ರ ವೇಳೆಗೆ ನೀರಿನ ಬೇಡಿಕೆಯ ದೇಶವಾಗಲಿದ್ದರೆ, 2050ರ ವೇಳೆಗೆ ನೀರಿನ ಕೊರತೆಯ ದೇಶವಾಗಲಿದೆ.

ಭಾರತದಲ್ಲಿ ನೀರಿನ ಕೊರತೆಗೆ ಇರುವ ಪರಿಹಾರಗಳು
author img

By

Published : Nov 22, 2019, 9:22 PM IST

ನವದೆಹಲಿ: ಮನುಷ್ಯನಿಗೆ ನೀರು ಬೇಕೇ ಬೇಕು. ಇದು ಇಡೀ ಭೂಮಿಯ ಸ್ವತ್ತೂ ಹೌದು. ಜೀವನ ಮಟ್ಟವನ್ನು ನಿರ್ಧರಿಸುವ ಸಾಮಾಜಿಕ ಆರ್ಥಿಕ ಅಂಶವೂ ಹೌದು. ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಳವಾಗಿ ನೀರಿನ ಅಗತ್ಯ ಹೆಚ್ಚುತ್ತಿದ್ದಂತೆಯೇ, ನೀರಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಂತರ ಹೆಚ್ಚಲು ಆರಂಭವಾಗುತ್ತಿದೆ. ಭಾರತದಲ್ಲಿ ಗಂಭೀರ ಜಲ ಸಂಪನ್ಮೂಲ ಸಮಸ್ಯೆ ಎದುರಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2025ರ ವೇಳೆಗೆ ನೀರಿನ ಬೇಡಿಕೆಯ ದೇಶವಾಗಲಿದ್ದರೆ, 2050ರ ವೇಳೆಗೆ ನೀರಿನ ಕೊರತೆಯ ದೇಶವಾಗಲಿದೆ.

ನದಿಗಳು ಜಲ ಸಂಪನ್ಮೂಲದ ಪ್ರಮುಖ ಮೂಲ. ಇವುಗಳ ಹರಿವಿನಿಂದಾಗಿ ನೀರಿನ ಬಳಕೆ ಅವಕಾಶ ಹೆಚ್ಚಿದರೂ ಅವು ಅಡ್ಡಿಗಳನ್ನೂ ಹೊಂದಿವೆ. ನದಿಗಳ ನಿರ್ವಹಣೆ ಮುಕ್ತವಾಗಿ ನಡೆಯುತ್ತಿಲ್ಲ. ಇದು ರಾಜಕೀಯ ಮತ್ತು ಆರ್ಥಿಕ ಚೌಕಟ್ಟಿನೊಳಗೆ ನಡೆಯುತ್ತಿದೆ. ನದಿ ಮೂಲದ ಸಮಸ್ಯೆಗಳು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗುತ್ತವೆ. ಅಧಿಕಾರ, ಪ್ರಭಾವ ಮತ್ತು ಸಂಪನ್ಮೂಲ ನಿಯೋಜನೆ ಮತ್ತು ನೀತಿಗಳ ಅನುಷ್ಠಾನದಲ್ಲಿ ರಾಜಕೀಯ ನಡೆಯುತ್ತದೆ. ಅಷ್ಟೇ ಅಲ್ಲ, ರಾಜ್ಯಗಳು ಮತ್ತು ವ್ಯಾಪಾರಗಳ ಸಂಬಂಧ ನಿರ್ವಹಣೆಯಲ್ಲೂ ರಾಜಕೀಯ ನಡೆಯುತ್ತದೆ.

ನದಿಗಳನ್ನು ಸಂಪರ್ಕಿಸುವುದು ಅಥವಾ ಆಣೆಕಟ್ಟೆಗಳು ಮತ್ತು ಬ್ಯಾರೇಜ್‌ಗಳನ್ನು ನಿರ್ಮಿಸುವಂತಹ ವಿನ್ಯಾಸ ಸಂಬಂಧಿ ನದಿ ನೀತಿಗಳ ಜಾರಿಯನ್ನೂ ರಾಜಕೀಯ ಹಿನ್ನೆಲೆಯಲ್ಲಿ ನಡೆಸಲಾಗುತ್ತದೆ. ನದಿ ಪಾತ್ರ ರಾಜ್ಯಗಳು ವಿಭಿನ್ನ ದೃಷ್ಟಿಕೋನ ಹೊಂದಿರುತ್ತವೆ ಮತ್ತು ಇದರಿಂದಾಗಿ ಪವರ್‌ ಗೇಮ್‌ ನಡೆಯುತ್ತದೆ. ದೇಶದ ವಿದೇಶಿ ನೀತಿಯಲ್ಲಿ ನದಿಗಳನ್ನು ಅತ್ಯಂತ ಸರಳ ಅಂಶ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಇದನ್ನು ಅಭಿವೃದ್ದಿಗೆ ಗುರಿಗಳಿಗೆ ಮತ್ತು ದೇಶೀ ಅಗತ್ಯಗಳಿಗೆ ಸಂಪರ್ಕ ಹೊಂದಿರುವ ಸಂಗತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇವು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮವನ್ನು ಹೊಂದಿರುತ್ತವೆ.

ಈ ವಲಯದಲ್ಲಿ ನೀರಿನ ಸವಾಲು ಎದ್ದಿರುವ ಹಿನ್ನೆಲೆಯಲ್ಲಿ ಸಂವೇದನಾಶೀಲವಾದ ನದಿ ಪಾತ್ರದ ನೀತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ರಾಜಕೀಯದ ವಾಸ್ತವಗಳನ್ನು ನಿರ್ಲಕ್ಷಿಸದೇ ಆರೋಗ್ಯರವಾದ ನದಿಗಳ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಚಾಲ್ತಿಯಲ್ಲಿರುವ ಹಲವು ಒಪ್ಪಂದಗಳನ್ನು ಮರುಪರಿಶೀಲನೆ ನಡೆಸಬೇಕಿದೆ ಮತ್ತು ಹೊಸ ಒಪ್ಪಂದಗಳನ್ನು ಪ್ರಸ್ತುತ ನೀರಿನ ಸ್ಥಿತಿಗತಿಯನ್ನು ತಿಳಿದು ಮಾಡಬೇಕಿದೆ.

ನದಿ ತೀರದ ರಾಜಕೀಯದಲ್ಲಿ ನದಿ ಮೂಲ, ಮಧ್ಯ ಮತ್ತು ಕೆಳ ಭಾಗಗಳ ಭೌಗೋಳಿಕ ರಾಜಕೀಯವೇ ಪ್ರಮುಖವಾಗಿದೆ. ನದಿ ತೀರದ ಸಮಸ್ಯೆಗಳನ್ನು ಪರಿಹರಿಸುವುದು ಈ ಭಾಗದ ಜಲಮೂಲದ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮಕಾರಿಯಾದ ಜಲ ರಾಜತಾಂತ್ರಿಕತೆಯ ಮೂಲಕ ದೇಶದ ನೀರಿನ ಅಗತ್ಯವನ್ನು ಸಮತೋಲನಗೊಳಿಸಿಕೊಳ್ಳಬೇಕಿದೆ ಮತ್ತು ದೊಡ್ಡ ಮಟ್ಟದಲ್ಲಿ ಭದ್ರತಾ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬೇಕಿದೆ.

ನಮ್ಮ ಗ್ರಹದ ಶೇ. 3 ರಷ್ಟರಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿದೆ.ಈ ಪೈಕಿ ಶೇ. 2 ರಷ್ಟು ಹಿಮಾಲಯದಲ್ಲಿ ಹೆಪ್ಪುಗಟ್ಟಿದೆ. ನದಿಗಳು, ಕೊಳಗಳು, ಕೆರೆಗಳು ಹಾಗೂ ಇತರ ರೂಪದಲ್ಲಿ ಶೇ. 1 ರಷ್ಟು ನೀರಿದೆ. ಈ ನೀರು ಸುಲಭ ಲಭ್ಯವಾಗಿದ್ದು, ಜನರು ಇದನ್ನೇ ಅವಲಂಬಿಸಿದ್ದಾರೆ. ನೀರಿನ ಸಮಸ್ಯೆಯನ್ನು ಎದುರಿಸುವಾಗ ಈ ಪ್ರಮಾಣದ ನೀರು ಮಹತ್ವದ ಪ್ರಭಾವವನ್ನು ಬೀರುತ್ತವೆ.

ಕಳೆದ ಶತಮಾನದಲ್ಲಿ ವಿಶ್ವದ ಜನಸಂಖ್ಯೆ ಮೂರು ಪಟ್ಟಾಗಿದೆ ಮತ್ತು ನೀರಿನ ಬಳಕೆ ಆರು ಪಟ್ಟು ಹೆಚ್ಚಿದೆ. 2030ರ ವೇಳೆಗೆ ನೀರಿನ ಬೇಡಿಕೆಯು ಶೇ. 40 ರಷ್ಟು ಹೆಚ್ಚಳವಾಗುತ್ತದೆ ಮತ್ತು ಭಾರತ ಮತ್ತು ಚೀನಾ ಸೇರಿದಂತೆ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ದೇಶಗಳಲ್ಲಿ ಇದು ಶೇ. 50ರಷ್ಟು ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ವಿಶ್ವಸಂಸ್ಥೆಯ 2004 ರ ಅಂದಾಜಿನ ಪ್ರಕಾರ, ಪ್ರಸ್ತುತ 6.7 ಬಿಲಿಯನ್‌ ಜನಸಂಖ್ಯೆಗೆ ಹೋಲಿಸಿದರೆ, 2030 ರ ವೇಳೆಗೆ ವಿಶ್ವದ ಜನಸಂಖ್ಯೆಯು 7.5 ಬಿಲಿಯನ್‌ ಆಗಲಿದೆ (ಕನಿಷ್ಠ ಅಂದಾಜು) ಮತ್ತು 2050ರ ವೇಳೆಗೆ 9 ಬಿಲಿಯನ್‌ ಆಗಲಿದೆ (ಮಧ್ಯಮ ಅಂದಾಜು).

ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವ ದೇಶಗಳಲ್ಲೇ ಗಮನಾರ್ಹ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗಲಿದೆ. ಅತಿ ಹೆಚ್ಚು ಜನಸಂಖ್ಯೆಯ ಸಾಂದ್ರತೆ ಇರುವ ದೇಶಗಳಲ್ಲಿ ಬೇಡಿಕೆ (ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕತೆಯ ವಿಚಾರದಲ್ಲಿ) ಮತ್ತು ಪೂರೈಕೆಯಲ್ಲಿ (ಲಭ್ಯತೆ ವಿಚಾರದಲ್ಲಿ) ಹೆಚ್ಚುತ್ತಿರುವ ಅಂತರವು ಮುಂದಿನ ದಶಕದಲ್ಲಿ ಗಂಭೀರ ಸಮಸ್ಯೆಯಾಗಿ ಎದುರಾಗಲಿದೆ.

ಭಾರತದ ನೀರಿನ ಬೇಡಿಕೆ ಅಂದಾಜು ಆತಂಕಕಾರಿಯಾಗಿದೆ. 1999ರ ವರದಿಯಲ್ಲಿ ವಿಶ್ವಬ್ಯಾಂಕ್‌ ಸೂಚಿಸಿದಂತೆ, 2025 ರ ವೇಳೆಗೆ ಒಟ್ಟಾರೆ ನೀರಿನ ಬೇಡಿಕೆಯು 552 ಬಿಸಿಎಂ (ಬಿಲಿಯನ್‌ ಕ್ಯೂಬಿಕ್‌ ಮೀಟರುಗಳು) ಇಂದ 1050 ಬಿಸಿಎಂಗೆ ಹೆಚ್ಚಳವಾಗಲಿದೆ. ಅಂದರೆ ದೇಶದಲ್ಲಿ ಲಭ್ಯವಿರುವ ಎಲ್ಲ ಜಲಸಂಪನ್ಮೂಲಗಳನ್ನು ನಾವು ಬಳಸಲಿದ್ದೇವೆ. ತಲಾ ನೀರು ಲಭ್ಯತೆಯು 1947ರ ವರದಿಯಲ್ಲಿ 5000 ಕ್ಯೂಬಿಕ್‌ ಮೀಟರ್ ಪ್ರತಿ ವರ್ಷ ಇತ್ತಾದರೂ, 1997ರ ವೇಳೆಗೆ ಇದು 2000 ಕ್ಯೂಬಿಕ್‌ ಮೀಟರುಗಳಾಗಿತ್ತು.

ಇನ್ನು 2025 ರವೇಳೆಗೆ ಇದು 1500 ಕ್ಯೂಬಿಕ್‌ ಮೀಟರ್​ ಪ್ರತಿ ವರ್ಷಕ್ಕೆ ಇಳಿಕೆಯಾಗಲಿದೆ. ನೀರಿನ ಕೊರತೆಯ ಪ್ರಮಾಣವನ್ನು ಗಮನಿಸಿದರೆ ಇದು ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ. ಅಷ್ಟೇ ಅಲ್ಲ, ಭಾರತದ 20 ಪ್ರಮುಖ ನದಿಗಳ ಪೈಕಿ ಆರು ನದಿಗಳ ಪ್ರತಿ ವರ್ಷದ ನೀರಿನ ಕೊರತೆ ಮಟ್ಟ 1000 ಕ್ಯೂಬಿಕ್‌ ಮೀಟುಗಳಿಗಿಂತ ಕಡಿಮೆ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೆಕಿನ್ಸೆ ವರದಿ (2009) ಹೇಳುವಂತೆ 2030 ರ ವೇಳೆಗೆ, ಭಾರತದಲ್ಲಿ ನೀರಿನ ಬೇಡಿಕೆಯು 1.5 ಟ್ರಿಲಿಯನ್‌ ಎಂ3 ಆಗಿರಲಿದ್ದು, ಜನಸಂಖ್ಯೆ ಹೆಚ್ಚಳ, ಭತ್ತ, ಗೋಧಿ ಮತ್ತು ಸಕ್ಕರೆ ಬೆಳೆಯ ಅಗತ್ಯಕ್ಕೆ ಈ ನೀರಿನ ಬೇಡಿಕೆ ವ್ಯಕ್ತವಾಗಲಿದೆ.

ವರದಿಯ ಪ್ರಕಾರ ಪ್ರಸ್ತುತ ನೀರಿನ ಪೂರೈಕೆಯು ಅಂದಾಜು 740 ಬಿಲಿಯನ್‌ ಎಂ3 ಆಗಿದೆ. ಭವಿಷ್ಯದ ನೀರಿನ ಸಮಸ್ಯೆಯು ಆರ್ಥಿಕ ಪ್ರಗತಿಯ ಮೇಲೆ ಬಾಧಿಸಲಿದ್ದು, ಕೃಷಿ ವಲಯವೇ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುವ ಬೇಡಿಕೆ ವ್ಯಕ್ತಪಡಿಸಲಿದೆ. ಜನಸಂಖ್ಯೆ ಹೆಚ್ಚಳ, ಜೀವನ ಮಟ್ಟ ಸುಧಾರಣೆ ಮತ್ತು ಸಂಪನ್ಮೂಲ ಮಿತಿಯಿಂದಾಗಿ ಆಹಾರ, ಇಂಧನ ಮತ್ತು ನೀರಿನ ಬೇಡಿಕೆಯು ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣವಾಗಸಲಿವೆ.

ನೀರು ಬೇಡಿಕೆ ನಿರ್ವಹಣೆ ಕಾರ್ಯತಂತ್ರದಿಂದ ಹೆಚ್ಚುವರಿ ನೀರು ಪೂರೈಕೆಯಾಗಲಿದೆ. ಆದರೆ, ಇದು ನೀರಿನ ಕೊರತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಹೀಗಾಗಿ ನೀರು ಪೂರೈಕೆ ನಿರ್ವಹಣೆಯಲ್ಲಿ ಪರಿಣಾಮಕಾರಿ ಕಾರ್ಯತಂತ್ರವೊಂದರ ಅಗತ್ಯ ಇದ್ದೇ ಇದೆ. ನೀರಿನ ಲಭ್ಯತೆಯ ತಾತ್ಕಾಲಿಕ ಮತ್ತು ಭೌಗೋಳಿಕ ವಿಧಾನದ ಮೇಲೆ ಮಹತ್ವದ ಪರಿಣಾಮ ಬೀರಲಿರುವ ಹವಾಮಾನ ವೈಪರೀತ್ಯದ ನಿಟ್ಟಿನಲ್ಲಿ ಇದು ಅತ್ಯಂತ ಅಗತ್ಯವಾಗಿದೆ.

ಹೆಚ್ಚುವರಿ ಸಂಗ್ರಹ, ಮಳೆ ನೀರು ಕೊಯ್ಲು ಮತ್ತು ನೀರು ಮರುಬಳಕೆ ಹಾಗೂ ಲವಣಾಂಶ ಸಂಸ್ಕರಣೆಯಂತಹ ಪೂರೈಕೆ ನಿರ್ವಹಣೆಯ ಪ್ರಸ್ತುತ ಪ್ರಕ್ರಿಯೆಗಳು ಉಪಯುಕ್ತ ಹಾಗೂ ಪ್ರಮುಖವಾಗಿದೆ. ಆದರೆ ಇವು ಮಳೆ ಸುರಿಯುವ ವಿಧಾನ ಬದಲಾವಣೆ ಮತ್ತು ನೀರಿನ ಲಭ್ಯತೆಗೆ ಸಂಬಂಧಿಸಿದ ಬರ-ಪ್ರವಾಹ ಸನ್ನಿವೇಶವನ್ನು ಎದುರಿಸಲು ಪರಿಣಾಮಕಾರಿಯಾಗಿರುವುದಿಲ್ಲ. ನೀರಿನ ಬೇಡಿಕೆ ಮತ್ತು ಪೂರೈಕೆ ಅಂತರವನ್ನು ನಿವಾರಿಸಲು ಮತ್ತು ಹವಾಮಾನ ವೈಪರೀತ್ಯದ ಸಂಭಾವ್ಯತೆಯ ಪರಿಣಾಮವನ್ನು ನಿವಾರಿಸಲು, ಪೂರೈಕೆ ನಿರ್ವಹಣೆಯ ಕುರಿತಾದ ನಮ್ಮ ಚಿಂತನೆಯನ್ನೇ ಸಂಪೂರ್ಣ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ.

ಎರಡು ಪ್ರಮುಖ ಸಂಗತಿಗಳ ಮೇಲೆ ತಕ್ಷಣ ಗಮನ ಹರಿಸಬೇಕಿದೆ. ಮೊದಲ ಸಂಗತಿಯೆಂದರೆ, ಸಣ್ಣ ಮತ್ತು ದೊಡ್ಡ ಕೆರೆಗಳನ್ನು ಪುನಶ್ಚೇತನ ಮತ್ತು ಪುನರುಜ್ಜೀವನಗೊಳಿಸಿ ಸ್ಥಳೀಯವಾಗಿ ಹರಿಯುವ ನೀರನ್ನು ಸಂಗ್ರಹಿಸುವುದಾಗಿದೆ. ಈ ಪ್ರಯತ್ನವು ಭಾರತದಲ್ಲಿ ಪ್ರಮುಖವಾಗಿದ್ದು, ಇಲ್ಲಿ ನೀರಾವರಿ ಮತ್ತು ಕುಡಿಯು ನೀರಿನ ಅಗತ್ಯವನ್ನು ಪೂರೈಸುವಲ್ಲಿ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಗೆ ಕೆರೆ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಸ್ತುತ ಹಾಗೂ ಭವಿಷ್ಯದ ನೀರಿನ ಸಮಸ್ಯೆಯನ್ನು ಪೂರೈಸಬಹುದಾದ ಮತ್ತೊಂದು ಪ್ರಯತ್ನವೆಂದರೆ, ರಾಷ್ಟ್ರೀಯ ವಾಟರ್ ಗ್ರಿಡ್ ರಚನೆ ಮಾಡಿ, ಲಭ್ಯ ಜಲ ಸಂಭಾವ್ಯತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಮತ್ತು ಬರ-ಪ್ರವಾಹ ಸಮಸ್ಯೆಯ ಪರಿಣಾಮವನ್ನು ಕಡಿಮೆ ಮಾಡುವುದು ಮತ್ತು ಪ್ರಾದೇಶಿಕ ನೀರು ಪೂರೈಕೆಯಲ್ಲಿ ಸಮತೋಲನ ಸಾಧಿಸುವುದಾಗಿದೆ. ಈ ಹೊಸ ಪೂರೈಕೆ ನಿರ್ವಹಣೆ ಪ್ರಕ್ರಿಯೆಯನ್ನು ನೀರು ಪೂರೈಕೆಯಲ್ಲಿನ ಅಂತರ ಹೆಚ್ಚುತ್ತಿರುವುದರಿಂದ ಮತ್ತು ಪ್ರಸ್ತುತ ಹಾಗೂ ಭವಿಷ್ಯದ ನೀರಿನ ಬೇಡಿಕೆ ಮತ್ತು ಪೂರೈಕೆಯ ಮೇಲೆ ಹವಾಮಾನ ವೈಪರೀತ್ಯದ ನಿರೀಕ್ಷಿತ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಿದೆ.

ರಾಷ್ಟ್ರೀಯ ನದಿ ಜೋಡಣೆ ಯೋಜನೆ (ಎನ್‌ಆರ್‌ಎಲ್‌ಪಿ) ಬಗ್ಗೆ ದೇಶಾದ್ಯಂತ ವಿವಿಧ ರಾಜಕೀಯ ವಲಯದಲ್ಲಿ ಸಮ್ಮತಿ ಇದ್ದು, ಪ್ರಾಜೆಕ್ಟ್‌ ಆರಂಭಿಸಲು ಅಗತ್ಯ ಇಚ್ಛಾಶಕ್ತಿಯ ಕೊರತೆ ಇದೆ. ಆದರೆ, ಅಂತಿಮವಾಗಿ ಸುಪ್ರೀಂಕೋರ್ಟ್‌ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಕಾರ್ಪಡೆಯನ್ನು ರಚಿಸಿ 2012 ರ ವೇಲೆಗೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಸರ್ಕಾರಕ್ಕೆ 2002 ರಲ್ಲಿ ನಿರ್ದೇಶಿಸಿತು. ಆದರೆ, ಈವರೆಗೂ ಯೋಜನೆ ಜಾರಿ ಆರಂಭವಾಗಿಲ್ಲ. ಕಾರ್ಯಪಡೆ ನೀಡಿದ ವರದಿಯೂ ಮೂಲೆ ಸೇರಿದೆ.

ಹಣಕಾಸು, ಕಾನೂನು ಮತ್ತು ರಾಜಕೀಯ ಸವಾಲುಗಳ ರೀತಿಯಲ್ಲೇ ಎನ್‌ಆರ್‌ಎಲ್‌ಪಿಯನ್ನು ಒಳಗೊಂಡ ಪೂರೈಕೆ ನಿರ್ವಹಣೆ ಕಾರ್ಯತಂತ್ರದ ಆರ್ಥಿಕ ಸಾಧ್ಯತೆ ಮತ್ತು ಕಾರ್ಯತಂತ್ರ ಪ್ರಾಮುಖ್ಯತೆಯೂ ಸ್ಪಷ್ಟವಾಗಿದೆ. ಆರ್ಥಿಕ, ಕಾನೂನು ಮತ್ತು ರಾಜಕೀಯ ಮಿತಿಗಳ ಮಧ್ಯೆಯೂ ಇದನ್ನು ಹೇಗೆ ಒಗ್ಗೂಡಿಸಲಾಗುತ್ತದೆ ಮತ್ತು ಜಾರಿಗೊಳಿಸಲಾಗುತ್ತದೆ ಎಂಬುದರ ಮೇಲೆ ಇದರ ಪರಿಣಾಮ ಮತ್ತು ಪ್ರತಿಫಲ ಅವಲಂಬಿಸಿರುತ್ತದೆ. ಆದರೆ ಒಂದೇ ಬಾರಿಗೆ ಎನ್‌ಆರ್‌ಎಲ್‌ಪಿಯನ್ನು ಜಾರಿಗೊಳಿಸುವುದು ವೆಚ್ಚ ಮತ್ತು ಲಾಭವನ್ನು ಪರಿಗಣಿಸಿ ಹೇಳುವುದಾದರೆ ಉತ್ತಮವಾದ ಸಂಗತಿ. ಆದರೆ ಪ್ರಾಯೋಗಿಕ ಮತ್ತು ವ್ಯೂಹಾತ್ಮಕ ದೃಷ್ಟಿಕೋನದಿಂದ ಹೇಳುವುದಾದರೆ ಹಂತ ಹಂತವಾಗಿ ಇದನ್ನು ಜಾರಿಗೊಳಿಸುವುದು ಉತ್ತಮ. ಮೊದಲು ಕಡಿಮೆ ವೆಚ್ಚ, ಕಾನೂನು ಮತ್ತು ರಾಜಕೀಯ ಸಮಸ್ಯೆಯನ್ನು ಹೊಂದಿರುವ ಜೋಡಣೆಯ ಮೇಲೆ ಗಮನ ಹರಿಸುವುದು ಒಳ್ಳೆಯದು.

ಸಕಾಲಿಕ ನದಿ ಜೋಡಣೆಯನ್ನು ಸ್ಪಷ್ಟ ಮತ್ತು ನಿಖರ ಕಾಲಾನುಕ್ರಮದಲ್ಲಿ ಮಾಡಬೇಕು. ಇದರಿಂದ ವಿತ್ತೀಯ ಹೊರೆಯೂ ಕಡಿಮೆಯಾಗುತ್ತದೆ ಮತ್ತು ಇನ್ನಷ್ಟು ಕಠಿಣವಾದ ಜೋಡಣೆಯನ್ನು ಜಾರಿಗೊಳಿಸಲು ಅನುಕೂಲಕರ ವಾತಾವರಣವನ್ನೂ ಇದು ಉಂಟು ಮಾಡುತ್ತದೆ. ಇದೇ ವೇಳೆ, ಜಲ ಮೂಲ ಅಭಿವೃದ್ಧಿ ಮತ್ತು ರಾಜ್ಯಗಳಲ್ಲಿ ಸಂಘರ್ಷ ಪರಿಹಾರದ ನಿಟ್ಟಿನಲ್ಲಿ ಹೆಚ್ಚಿನ ಪಾತ್ರ ವಹಿಸಲು ಕಾನೂನಾತ್ಮಕ ಮತ್ತು ಸಾಂಸ್ಥಿಕ ಸುಧಾರಣೆಗಳತ್ತವೂ ಕೇಂದ್ರ ಸರ್ಕಾರ ಶ್ರಮಿಸಬೇಕಿದೆ. ಈ ಸಾಂವಿಧಾನಿಕ ಸುಧಾರಣೆಗಳು ಮತ್ತು ಅನುಷ್ಠಾನದ ಕಾಲಾನುಕ್ರಮ ವ್ಯೂಹವು ಪೂರೈಕೆ ನಿರ್ವಹಣೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಅನುವು ಮಾಡುತ್ತವೆ.

ಪಿವಿ ರಾವ್‌, ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಪೆನ್ನಾರ್‌ ಇಂಡಸ್ಟ್ರೀಸ್‌

Please Publish It
---

ETV Bharat Logo

Copyright © 2025 Ushodaya Enterprises Pvt. Ltd., All Rights Reserved.