ETV Bharat / bharat

ಅಮೋನಿಯಂ ನೈಟ್ರೇಟ್ ನಿಯಮ ಉಲ್ಲಂಘನೆ; ಶ್ರವಣ್​ ಶಿಪ್ಪಿಂಗ್ ಕಂಪನಿಗೆ ವಾರೆಂಟ್​ ಜಾರಿ!

ವಿಶಾಖಪಟ್ಟಣಂನಲ್ಲಿ ಅಮೋನಿಯಂ ನೈಟ್ರೇಟ್​ ಗೋದಾಮುಗಳನ್ನು ನಡೆಸುತ್ತಿರುವ ಶ್ರವಣ್​ ಶಿಪ್ಪಿಂಗ್​ ಪ್ರೈವೆಟ್​ ಲಿಮಿಟೆಡ್​ ಕಂಪನಿಯು ಅಮೋನಿಯಂ ನೈಟ್ರೇಟ್ ನಿಯಮ-2012ನ್ನು ಉಲ್ಲಂಘಿಸಿದಕ್ಕಾಗಿ ವಾರೆಂಟ್​ ನೀಡಲಾಗಿದೆ. ಅಲ್ಲದೆ ಒಂದು ವಾರದೊಳಗೆ ಸೂಕ್ತ ಪ್ರತಿಕ್ರಿಯೆ ಸಲ್ಲಿಸಲು ಕಂಪನಿಗೆ ಸೂಚಿಸಲಾಗಿದೆ.

author img

By

Published : Sep 14, 2020, 7:57 PM IST

Sravan Shipping Co
ಶ್ರವಣ್​ ಶಿಪ್ಪಿಂಗ್ ಕಂಪನಿ

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಅಮೋನಿಯಂ ನೈಟ್ರೇಟ್ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ, ಶ್ರವಣ್​ ಶಿಪ್ಪಿಂಗ್​ ಪ್ರೈವೆಟ್​ ಲಿಮಿಟೆಡ್​ ಕಂಪನಿಗೆ ಆಂಧ್ರ ಪೊಲೀಸರು ವಾರೆಂಟ್​ ಜಾರಿಗೊಳಿಸಿದ್ದಾರೆ.

ಶ್ರವಣ್​ ಶಿಪ್ಪಿಂಗ್​ ಕಂಪನಿಯು, ವಿಶಾಖಪಟ್ಟಣಂನ ಚುಕ್ಕವಾಣಿ ಪಾಲೆಂನಲ್ಲಿ ಅಮೋನಿಯಂ ನೈಟ್ರೇಟ್​ ಗೋದಾಮುಗಳನ್ನು ನಡೆಸುತ್ತಿದೆ. ಕಂಪನಿಯು ಅಮೋನಿಯಂ ನೈಟ್ರೇಟ್ ನಿಯಮ-2012ನ್ನು ಉಲ್ಲಂಘಿಸಿದಕ್ಕಾಗಿ, ಈ ಕಂಪನಿಗೆ ವಾರೆಂಟ್​ ನೀಡಲಾಗಿದೆ.

ಈ ಸಂಬಂಧ ಪೊಲೀಸ್ ಆಯುಕ್ತ ಮನೀಶ್ ಕುಮಾರ್ ಸಿನ್ಹಾ ನೇತೃತ್ವದ ತಂಡವು ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದು, ಒಂದು ವಾರದೊಳಗೆ ಸೂಕ್ತ ಪ್ರತಿಕ್ರಿಯೆ ಸಲ್ಲಿಸಲು ಕಂಪನಿಗೆ ಸೂಚಿಸಲಾಗಿದೆ.

ಅಮೋನಿಯಂ ನೈಟ್ರೇಟ್ ನಿಯಮದ ಪ್ರಕಾರ, ಅಮೋನಿಯಂ ನೈಟ್ರೇಟ್ ಹೊಂದಿರುವ ಗೋದಾಮುಗಳು ಸಂರಕ್ಷಿತ ಪ್ರದೇಶಗಳಿಂದ ಕನಿಷ್ಠ 90 ಮೀಟರ್ ದೂರದಲ್ಲಿರಬೇಕು. ಆದರೆ ಕಂಪನಿಯು ಈ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ.

ಅಮೋನಿಯಂ ನೈಟ್ರೇಟ್​ ಗೋದಾಮಿನ ಬ್ಲಾಕ್​ಗಳ ನಡುವೆ ಕನಿಷ್ಠ 9 ಮೀಟರ್ ಅಂತರವಿರಬೇಕು. ಆದರೆ ಈ ಗೋದಾಮುಗಳ ಆವರಣದಲ್ಲಿ ಒಟ್ಟು ಹತ್ತು ಗೋದಾಮುಗಳಿವೆ. ಅವುಗಳ ನಡುವಿನ ಅಂತರವು ಒಂಬತ್ತು ಮೀಟರ್‌ಗಿಂತ ಕಡಿಮೆಯಿದೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.