ನವದೆಹಲಿ: ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಈ ವಾರ ಭಾರತ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಇತ್ತ ವಾಲ್ಮಾರ್ಟ್ ಇಂಡಿಯಾ ಹಿರಿಯ 56 ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಸಾಂಸ್ಥಿಕ ಪುನಾರಚನೆ ಪ್ರಕ್ರಿಯೆಯ ಭಾಗವಾಗಿ 56 ಹಿರಿಯ ಅಧಿಕಾರಿಗಳನ್ನು ಹೊರ - ಹೋಗುವಂತೆ ಕೇಳಿಕೊಂಡಿದೆ. ಇನ್ನು ಎರಡನೇ ಸುತ್ತಿನ ಹೊರಹಾಕುವಿಕೆ ಪ್ರಕ್ರಿಯೆ ಏಪ್ರಿಲ್‌ನಲ್ಲಿ ನಡೆಯಲಿದೆ.
ಈ ಕಂಪನಿಯ ಸುಮಾರು 28 ಸಗಟು ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ಮಳಿಗೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ಸರಿಯಾದ ರೀತಿಯಲ್ಲಿ ಸಂಘಟಿತವಾಗಿವೆಯೇ ಎಂದು ತಿಳಿಯಲು ಸಾಂಸ್ಥಿಕ ರಚನೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಕಂಪನಿ ಹೇಳಿದೆ.
ವಾಲ್ ಮಾರ್ಟ್ 2007ರಲ್ಲಿ ತನ್ನ ನಗದು - ಸಾಗಿಸುವ ವ್ಯವಹಾರಕ್ಕಾಗಿ ಭಾರತೀಯರೊಂದಿಗೆ ಪಾಲುದಾರಿಕೆ ಮಾಡಿಕೊಂಡಿತು. ಬಳಿಕ 2013 ರಲ್ಲಿ ತನ್ನದೇ ಆದ ರೀತಿಯಲ್ಲಿ ವ್ಯಾಪಾರ ವಹಿವಾಟು ಆರಂಭಿಸಿತು. ಕಂಪನಿಯು ಮುಂಬೈ, ಲಖನೌ ಮತ್ತು ಹೈದರಾಬಾದ್‌ನಲ್ಲಿ ಕೇಂದ್ರಗಳನ್ನು ಹೊಂದಿದೆ.