ETV Bharat / bharat

ವಿಶಾಖಪಟ್ಟಣಂ ಕೈಗಾರಿಕೆಯಲ್ಲಿ ಸೋರಿಕೆಯಾದ ಅನಿಲ ಯಾವುದು ಗೊತ್ತೇ? ಪರಿಣಾಮಗಳೇನು? - Vizag Tragedy news

ಮಾನವ ದೇಹಕ್ಕೆ ಸ್ಟೈರೀನ್‌ ಅನಿಲ ಸೋಕಿದರೆ ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ. ಇದಲ್ಲದೆ ಕಣ್ಣಿನಲ್ಲಿ ಕಿರಿಕಿರಿ ಮತ್ತು ಕೆರಳಿಕೆ ಹಾಗೂ ಕರುಳಿನ ಮೇಲೂ ಪರಿಣಾಮ ಬೀರುತ್ತದೆ. ಇವಿಷ್ಟೇ ಅಲ್ಲದೆ ತಲೆನೋವು, ನಿತ್ರಾಣ, ಬಲಹೀನತೆ, ಖಿನ್ನತೆ, ಕರ್ಣದೋಷ ಸೇರಿದಂತೆ ಕಿಡ್ನಿ ಸಮಸ್ಯೆಗಳೂ ಉಂಟಾಗುತ್ತವೆ.

Styrene gas leak
ಸ್ಟೈರೀನ್ ಅನಿಲ ಸೋರಿಕೆ
author img

By

Published : May 7, 2020, 12:07 PM IST

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಗುರುವಾರ ಮುಂಜಾನೆ ಅನಿಲ ಸೋರಿಕೆಯಾಗಿ ಕನಿಷ್ಠ 9 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ವರದಿಗಳ ಪ್ರಕಾರ, ಎಲ್​ಜಿ ಪಾಲಿಮರ್ಸ್​​ನ ಕೆಮಿಕಲ್ ಫ್ಯಾಕ್ಟರಿಯ ಅನಿಲ ಸ್ಥಾವರದಿಂದ 'ಸ್ಟೈರೀನ್ ಅನಿಲ' ಸೋರಿಕೆಯಾಗಿದೆ. ಇದರಿಂದ ಜನರು ಉಸಿರಾಟದ ಸಮಸ್ಯೆ ಎದುರಾಗಿ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಅಲ್ಲದೆ ಕಣ್ಣು, ಚರ್ಮ ಮತ್ತು ಮೂಗಿಗೆ ಕಿರಿಕಿರಿ ಉಂಟಾಗಿದ್ದು 300ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ.

ಸ್ಟೈರೀನ್ ಅನಿಲವನ್ನು ಯಾವುದಕ್ಕೆ ಬಳಸಲಾಗುತ್ತದೆ?

Styrene gas leak
ಸ್ಟೈರೀನ್ ಅನಿಲವನ್ನು ಯಾವುದಕ್ಕೆ ಬಳಸಲಾಗುತ್ತದೆ?

ಸ್ಟೈರೀನ್ ಬಣ್ಣರಹಿತ ಸುಡುವಂತಹ ದ್ರವ ರೂಪದ ಅನಿಲವಾಗಿದ್ದು, ಅದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ರಾಳಗಳು, ಫೈಬರ್​ಗ್ಲಾಸ್, ರಬ್ಬರ್ ಮತ್ತು ಲ್ಯಾಟೆಕ್ಸ್​ಗಲ್ಲಿ ಬಳಸಲಾಗುತ್ತದೆ. ಪ್ಲಾಸ್ಟಿಕ್​ ಪೈಪ್​ಗಳು, ಆಟೋಮೊಬೈಲ್​ ಭಾಗಗಳು, ಕುಡಿಯುವ ಕಪ್​ಗಳ ತಯಾರಿಯಲ್ಲಿಯೂ ಬಳಕೆಯಾಗುತ್ತವೆ.

ಇದರಿಂದ ಮನುಷ್ಯನ ಮೇಲಾಗುವ ಪರಿಣಾಮಗಳೇನು?

Styrene gas leak
ಮನುಷ್ಯನ ಮೇಲಾಗುವ ಪರಿಣಾಮ

ಮಾನವ ದೇಹಕ್ಕೆ ಸ್ಟೈರೀನ್‌ ಅನಿಲ ಸೋಕಿದರೆ ಮುಖ್ಯವಾಗಿ ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ. ಇದಲ್ಲದೆ ಕಣ್ಣಿನಲ್ಲಿ ಕಿರಿಕಿರಿ ಮತ್ತು ಕೆರಳಿಕೆ ಹಾಗೂ ಜಠರದ ಕರುಳಿನ ಮೇಲೂ ಪರಿಣಾಮ ಬೀರುತ್ತದೆ.

ಇವಿಷ್ಟೇ ಅಲ್ಲದೆ ತಲೆನೋವು, ನಿತ್ರಾಣ, ಬಲಹೀನತೆ, ಖಿನ್ನತೆ, ಕರ್ಣದೋಷ ಸೇರಿದಂತೆ ಕಿಡ್ನಿ ಸಮಸ್ಯೆಗಳೂ ಉಂಟಾಗುತ್ತವೆ. ಈ ಅನಿಲ ಅಪಾಯಕಾರಿಯಾಗಿದ್ದು, ಈಗಾಗಲೇ 5000ಕ್ಕೂ ಹೆಚ್ಚು ಮಂದಿ ಘಟನೆಯಿಂದ ಅಸ್ವಸ್ಥರಾಗಿರುವ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.