ಜಮ್ಮು (ಜಮ್ಮು ಕಾಶ್ಮೀರ): ದೋಡಾ ಜಿಲ್ಲೆಯ ಗಣೌರಿಯ - ತಂತಾ ಗ್ರಾಮವು ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದಿದೆ. ಆ ಮೂಲಕ ದಶಕಗಳಿಂದ ಕತ್ತಲೆಯಲ್ಲಿದ್ದ ಗ್ರಾಮಗಳಿಗೆ ಬೆಳಕು ಬಂದಿದೆ.
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗ್ರಾಮಸ್ಥರು, ಲೆಫ್ಟಿನೆಂಟರ್ ಗವರ್ನರ್ ಮನೋಜ್ ಸಿನ್ಹಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಒಂದು ತಿಂಗಳೊಳಗೆ ವಿದ್ಯುತ್ ಪೂರೈಸುವಂತೆ ಭರವಸೆ ನೀಡಿದ್ದ ಗವರ್ನರ್, ಜಮ್ಮು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ (ಜೆಪಿಡಿಸಿಎಲ್)ಗೆ ಗ್ರಾಮಗಳಿಗೆ ವಿದ್ಯುತ್ ಪೂರೈಸುವಂತೆ ಸೂಚಿಸಿದ್ದರು. ಹದಿನೈದು ದಿನಗಳೊಳಗೆ ಬೆಳಕು ಕಂಡ ಗ್ರಾಮಸ್ಥರು ಎಲ್ಜಿಗೆ ಧನ್ಯವಾದ ತಿಳಿಸಿದ್ದಾರೆ.
ಅಲ್ಲದೆ, ಸ್ಥಳೀಯರು ಜಿಲ್ಲಾ ಅಭಿವೃದ್ಧಿ ಆಯುಕ್ತ ಸಾಗರ್, ಗ್ರಾಮಕ್ಕೆ ತೆರಳಿ ಔಪಚಾರಿಕವಾಗಿ ವಿದ್ಯುದ್ದೀಪ ಬೆಳಗಿಸಿದರು. ಜಮ್ಮುಕಾಶ್ಮೀರದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದೇ ನಮ್ಮ ಗುರಿ ಎಂದು ಎಲ್ಜಿ ಮನೋಜ್ ಸಿನ್ಹಾ ಪುನರಚ್ಚರಿಸಿದ್ದಾರೆ.