ಕೋವಿಡ್-19 ವಿರುದ್ಧ ತೈವಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಹಾಗೂ ಜರ್ಮನಿಗಳ ಯಶಸ್ಸಿನ ಕಥೆಯನ್ನು ನಾವು ಕೇಳಿದ್ದೇವೆ. ಈ ಎಲ್ಲಾ ದೇಶಗಳು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಈವರೆಗೆ ಅತ್ಯುತ್ತಮ ಕ್ರಮಗಳಿಂದಾಗಿ ರೋಗ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ. ಅದು ಎಷ್ಟರಮಟ್ಟಿಗೆ ಅಂದ್ರೇ, ಆ ದೇಶಗಳೆಲ್ಲಾ ಈಗ ಲಾಕ್‍ಡೌನ್ ತೆರವಿನತ್ತ ಹೆಜ್ಜೆ ಇಟ್ಟಿವೆ.
ಆದರೆ, ಆಶ್ಚರ್ಯಕರ ಸಂಗತಿ ಅಂದರೆ ಯಾರೂ ಕೂಡಾ ವಿಯೆಟ್ನಾಂ ಕೊರೊನಾ ವೈರಸ್ ವಿರುದ್ಧದ ಯುದ್ದದಲ್ಲಿ ಹೇಗೆ ಗೆಲುವು ಸಾಧಿಸಿದೆ ಎಂದು ಪ್ರಸ್ತಾಪಿಸುತ್ತಿಲ್ಲ. ಮೇಲೆ ಪ್ರಸ್ತಾಪಿಸಿದ ದೇಶಗಳಲ್ಲಿ ಕೋವಿಡ್-19ರಿಂದ ಜನ ಸಾವನ್ನಪ್ಪಿದ್ದಾರೆ. ಆದರೆ, ವಿಯೆಟ್ನಾಂ ದೇಶ ಒಂದೇ ಒಂದು ಕೊರೊನಾ ಸಾವು ಕಂಡಿಲ್ಲ. ಮೇ8ರ ದಾಖಲೆಗಳಂತೆ ಜರ್ಮನಿಯಲ್ಲಿ 7,392 ಕೋವಿಡ್-19 ಸಂಬಂಧಿತ ಸಾವು ವರದಿಯಾಗಿವೆ. ಸಿಂಗಾಪುರದಲ್ಲಿ 20, ತೈವಾನ್‍ನಲ್ಲಿ 6 ಹಾಗೂ ದಕ್ಷಿಣ ಕೊರಿಯಾದಲ್ಲಿ 256 ಮಂದಿ ಕೋವಿಡ್ 19 ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ದೂರದೃಷ್ಟಿಯ ಹಾಗೂ ತನ್ನ ವಿವೇಕದ ನಿರ್ಧಾರಗಳಿಂದ ವಿಯೆಟ್ನಾಂ ತನ್ನಲ್ಲಿ ಒಂದೇ ಒಂದು ಕೋವಿಡ್-19 ಸಾವು ಸಂಭವಿಸದಂತೆ ನೋಡಿಕೊಂಡಿದೆ.
ಯಾವತ್ತು ತನ್ನ ದೇಶದಲ್ಲಿ ಕೋವಿಡ್-19 ಮಹಾಮಾರಿ ದುಷ್ಟರಿಣಾಮಗಳನ್ನು ಉಂಟು ಮಾಡಲು ಆರಂಭಿಸಿತೋ, ಅಂದಿನಿಂದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್-19 ಚೀನಾ ವೈರಸ್ ಎಂದು ಕರೆಯುತ್ತಿದ್ದಾರೆ. ಆದರೆ, ವಿಯೆಟ್ನಾಂ ಚೀನಾವನ್ನು ಆರಂಭದಿಂದಲೇ ಚೆನ್ನಾಗಿ ಅರಿತುಕೊಂಡಿದೆ. ಇದು ಆ ದೇಶ ಚೀನಾ-ವಿಯೆಟ್ನಾಮೀಸ್ ಯುದ್ಧದ ಬಳಿಕ ಕಂಡುಕೊಂಡ ಪಾಠ. ವಿಯೆಟ್ನಾಂ ಮೂಲದ ಸೈಬರ್ ಸುರಕ್ಷತಾ ಸಂಸ್ಥೆ ಎಪಿಟಿ32, ಚೀನಾದಲ್ಲಿ ಒಂದು ಹೊಸ ವೈರಸ್ ಹರಡುತ್ತಿರುವುದನ್ನು ಪತ್ತೆ ಹಚ್ಚಿತು. ಕೂಡಲೇ ಅದು ವಿಯೆಟ್ನಾಂ ಸರ್ಕಾರ, ವ್ಯೂಹಾನ್ ನಗರ ಆಡಳಿತ ಹಾಗೂ ಚೀನಾ ಸರ್ಕಾರ ಈ ವೈರಸ್‍ನ ಎದುರಿಸಲು ತೆಗೆದುಕೊಳ್ಳುತ್ತಿರುವ ತುರ್ತು ಕ್ರಮಗಳನ್ನು ಅನುಸರಿಸಲು ಸೈಬರ್ ಸುರಕ್ಷತಾ ಸಂಸ್ಥೆಗಳ ಸೇವೆ ತೆಗೆದುಕೊಂಡಿತು.
ಎಪಿಟಿ31 ಸಂಸ್ಥೆ 2021ರಿಂದಲೇ ಅಮೆರಿಕಾ, ಜರ್ಮನಿ ಹಾಗೂ ಚೀನಾದ ಸಂಸ್ಥೆಗಳ ರಹಸ್ಯ ಅರಿಯಲು ಸೈಬರ್ ಆಕ್ರಮಣ ನಡೆಸುತ್ತಿದೆ ಎಂದು ಅಮೆರಿಕಾದ ಸೈಬರ್ ಸೆಕ್ಯುರಿಟಿ ಸಂಸ್ಥೆ ಫೈರ್ ಗುರುತಿಸಿದೆ. ಅಮೆರಿಕಾದ ಜೊತೆಗೆ ವಿಯೆಟ್ನಾಂ ಕೂಡಾ ನವಂಬರ್-ಡಿಸೆಂಬರ್ 2019ರಲ್ಲಿ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ವೈರಸ್ ಕುರಿತ ಪ್ರಕಟಣೆಗಳ ಬಗ್ಗೆ ಕುತೂಹಲ ತಾಳಿತು. ಆ ಬಳಿಕ ವಿದ್ಯಾರ್ಥಿಗಳು, ರಾಯಭಾರ ಕಚೇರಿ ಹಾಗೂ ಚೀನಾದ ಉದ್ಯಮಿಗಳಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ವಿಯೆಟ್ನಾಂ ಸರ್ಕಾರ ತಡಮಾಡದೆ, ಈ ವೈರಸ್ ಪ್ರಸರಣ ತಡೆಗೆ ಒಂದು ಕಾರ್ಯನೀತಿ ರೂಪಿಸಿತು. ದೇಶ ಚೀನಾದ ಜೊತೆಗೆ 1,281 ಕಿಲೋಮೀಟರ್ ಗಡಿಯನ್ನು ಹಂಚಿಕೊಳ್ಳುತ್ತಿರುವುದರಿಂದ, ವಿಯೆಟ್ನಾಂ ಸರ್ಕಾರ ದೇಶಕ್ಕೆ ವೈರಸ್ ಬೆದರಿಕೆ ಇರುವುದನ್ನು ಬಹಳ ಮುಂಚಿತವಾಗಿಯೆ ಗ್ರಹಿಸಿತು. ಕೋವಿಡ್-19 ಪ್ರಸರಣ ತಡೆಗೆ 2020ರ ಫೆಬ್ರವರಿ ತಿಂಗಳಿನಲ್ಲಿ ವಿಯೆಟ್ನಾಂ ಸರ್ಕಾರ ಮೂರು ಪದರಗಳ ಕಾರ್ಯ ನೀತಿ ರೂಪಿಸಿತು. ಎಡಪಂಥೀಯ ದೇಶವಾದರೂ, ನಾಗರಿಕ ಹಕ್ಕುಗಳನ್ನು ಮೀರಿ ಕೂಡಾ, ಈ ಕಾರ್ಯನೀತಿಯನ್ನು ಅದು ಜಾರಿಗೊಳಿಸಿತು.
ಫೆಬ್ರವರಿ ಮೊದಲ ಭಾಗದಲ್ಲೇ ಉಳಿದ ದೇಶಗಳಿಗಿಂತ ಮುಂಚಿತವಾಗಿ, ವಿಯೆಟ್ನಾಂ ತನ್ನೆಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನದಲ್ಲಿ ಆಗಮಿಸುವವರ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಿತು. ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಪ್ರಯಾಣದ ಪೂರ್ತಿ ವಿವರಗಳನ್ನು ಹಾಗೂ ಸಂಪರ್ಕಿತರ ವಿವರವನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಬೇಕಿತ್ತು. 38* ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ಉಷ್ಣತೆ ಇದ್ದವರನ್ನು ಸಮೀಪದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷಿಸಲಾಗುತ್ತಿತ್ತು. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ವಿಯೆಟ್ನಾಂ ಸರ್ಕಾರ, ಹೋಟೆಲ್, ರೆಸ್ಟೋರೆಂಟ್ಸ್, ಬ್ಯಾಂಕ್, ಅಂಗಡಿಗಳು, ಅಪಾರ್ಟ್‍ಮೆಂಟ್‍ಗಳು ಹೀಗೆ ಎಲ್ಲೆಡೆ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಿತು. ಮೇ 8ರ ಹೊತ್ತಿಗೆ ವಿಯೆಟ್ನಾಂ 2,61,004 ಕೋವಿಡ್ 19 ಪರೀಕ್ಷೆಗಳನ್ನು ನಡೆಸಿದೆ.
ಯಾರಾದರೂ ಈ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡು ಬಂದರೆ, ಇಡೀ ರಸ್ತೆಯೆ ಸೋಂಕುಪೀಡಿತ ಎಂದು ಘೋಷಿಸಿ, ಜನರ ಸಂಚಾರವನ್ನು ನಿರ್ಬಂಧಿಸಲಾಗುತ್ತಿತ್ತು. ಈ ಎಲ್ಲಾ ಕಾರಣಕ್ಕಾಗಿಯೆ 9 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಇಲ್ಲಿಯವರೆಗೆ, ಕೇವಲ 288 ಕೋವಿಡ್19 ಪ್ರಕರಣ ವರದಿಯಾಗಿವೆ. ಟೆಸ್ಟಿಂಗ್ ಕಿಟ್‍ಗಳಿಗೆ ಚೀನಾ ಅಥವಾ ಇನ್ನಿತರ ದೇಶಗಳನ್ನು ಅವಲಂಬಿಸದೆ ಸ್ಥಳೀಯವಾಗಿ ಅವುಗಳನ್ನು ಉತ್ಪಾದಿಸಲಾಗುತ್ತದೆ. ಈ ಟೆಸ್ಟ್ ಕಿಟ್ ದರ 25 ಅಮೆರಿಕನ್ ಡಾಲರ್‌ಗಳಷ್ಟಿದ್ದು, ಕೇವಲ ಒಂದೂವರೆ ಗಂಟೆಯಲ್ಲಿ ನಿಖರ ಫಲಿತಾಂಶ ನೀಡುತ್ತದೆ. ಈ ಸ್ಥಳೀಯ ಕಿಟ್‍ಗಳು ಕೂಡಾ ಕೋವಿಡ್-19 ವಿರುದ್ಧದ ವಿಯೆಟ್ನಾಂ ದೇಶ ನಡೆಸಿದ ಯುದ್ದದಲ್ಲಿ ಮಹತ್ವದ ಪಾತ್ರವಹಿಸಿತು.
ಫೆಬ್ರವರಿ 2ನೇ ವಾರದ ವೇಳೆಗೆ ವಿದೇಶಗಳಿಂದ ಆಗಮಿಸಿದ ವಿಯೆಟ್ನಾಂ ಪ್ರಜೆಗಳನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್‍ಗೆ ಕಳುಹಿಸಲಾಯಿತು. ಈ ಕ್ವಾರಂಟೈನ್ ಅನ್ನು ವಿಳಂಬ ಮಾಡಿದ ದೇಶಗಳಿಂದ ಅದಕ್ಕಾಗಿ ದುಬಾರಿ ಬೆಲೆ ತೆರುತ್ತಿವೆ. ಮಾರ್ಚ್‍ನಿಂದಲೇ ವಿಯೆಟ್ನಾಂ ಕೆಲವು ಆಯ್ದ ನಗರಗಳನ್ನು ಲಾಕ್‍ಡೌನ್ ಮಾಡಿತು. ಪರೀಕ್ಷೆ ಹಾಗೂ ಪತ್ತೆ ಕಾರ್ಯವನ್ನು ಕೋವಿಡ್ 19 ವರದಿಯಾದ ಎಲ್ಲಾ ಹಳ್ಳಿಗಳಲ್ಲೂ ನಡೆಸಲಾಯಿತು ಹಾಗೂ ಅಂತಹ ಹಳ್ಳಿಗಳನ್ನು ಕೂಡಲೇ ನಿರ್ಬಂಧಿಸಲಾಯಿತು.
2020ರ ಆರಂಭದಿಂದಲೇ ಅಲ್ಲಿನ ಸರಕಾರ ತನ್ನ ಜನತೆಯನ್ನು ಕೊರೊನಾ ವೈರಸ್ ವಿರುದ್ಧ ಎಚ್ಚರಿಸುತ್ತಾ ಬಂದಿದೆ. ಇದು ಸಾಮಾನ್ಯ ಶೀತ ಜ್ವರ (ಫ್ಲೂ ಜ್ವರ) ಅಲ್ಲ ಎಂದು ಅದು ಮಾಹಿತಿ ನೀಡುತ್ತಿದೆ. ದೇಶದ ಪ್ರಧಾನಿಯಿಂದಿಡಿದು, ಎಲ್ಲಾ ನಾಯಕರು, ಸಚಿವರು, ಈ ಬಗ್ಗೆ ಜನಸಾಮಾನ್ಯರಲ್ಲಿ ಈ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದರು. ಸರಕಾರ ಕೋವಿಡ್ 19 ರೋಗಿಗಳು ಹಾಗೂ ಕ್ವಾರೆಂಟೈನ್‍ನಿಂದ ತಪ್ಪಿಸಿಕೊಂಡವರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾರಂಭಿಸಿತು. ರೋಗಿಯ ಹೆಸರಿನ ಬದಲಿಗೆ, ರೋಗಿ ಸಂಖ್ಯೆಯನ್ನು ಮಾತ್ರ ಪ್ರಕಟಿಸಲಾಗುತ್ತಿತ್ತು. ಖಂಡಿತವಾಗಿಯೂ ವಿಯೆಟ್ನಾಂ ಉಳಿದ ದೇಶಗಳು ಈಗ ಮಾಡುತ್ತಿರುವುದರಿಂದ ವಿಭಿನ್ನವಾಗಿ ಏನೂ ಮಾಡಲಿಲ್ಲ. ಆದರೆ ಈ ಸಾಂಕ್ರಾಮಿಕ ರೋಗಕ್ಕೆ ದೇಶದ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು ಏಕೆಂದರೆ, ಅದು ಯಾವ ದೇಶ ಕೂಡಾ ಕೋವಿಡ್ 19ರ ಪರಿಣಾಮ ಹಾಗೂ ಫಲಶ್ರುತಿಯನ್ನು ಅಂದಾಜು ಮಾಡುವ ಮುನ್ನವೇ ಈ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಕೆಲಸ ಆರಂಭಿಸಿತ್ತು.