ETV Bharat / bharat

ಗಂಡಸರ ಮೇಲೆ ನಂಬಿಕೆ ಇಲ್ವಂತೆ... ಹನುಮಾನ ಮಂದಿರದಲ್ಲಿ ಯುವತಿಯರಿಬ್ಬರ ಮದುವೆ! - ಇಬ್ಬರು ಮಹಿಳೆಯರು

ಪರಸ್ಪರ ಒಪ್ಪಿಕೊಂಡಿರುವ ಯುವತಿಯರು ಹನುಮಾನ್​ ಮಂದಿರದಲ್ಲಿ ಸಂಪ್ರದಾಯದಂತೆ ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.

ಮದುವೆ ಮಾಡಿಕೊಂಡ ಯುವತಿಯರು
author img

By

Published : Jul 4, 2019, 5:11 PM IST

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಹನುಮಾನ ಮಂದಿರದಲ್ಲಿ ವಿಚಿತ್ರವಾದ ಘಟನೆವೊಂದು ನಡೆದಿದ್ದು, ಇಬ್ಬರು ಯುವತಿಯರು ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ಈ ಮ್ಯಾರೇಜ್​ ನೋಡಿದವರು ಹೌಹಾರಿದ್ದಾರೆ.

ಸಡಗರ-ಸಂಭ್ರಮದಿಂದ ಗಂಡು-ಹೆಣ್ಣು ಮದುವೆಯಾಗಿ ಸುಖ ಸಂಸಾರ ನಡೆಸುವುದು ಕಾಮನ್​. ಆದರೆ, ಇಬ್ಬರು ಯುವತಿಯರು ತಮ್ಮ ಇಷ್ಟಕ್ಕೆ ಅನುಗುಣವಾಗಿ ಮದುವೆ ಮಾಡಿಕೊಂಡು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದಾರೆ.

ಮದುವೆಯಾಗಲು ಕಾರಣ!?
ಮದುವೆಯಾಗುವ ಉದ್ದೇಶದಿಂದ ಇಬ್ಬರು ಯುವತಿಯರು ಹನುಮಾನ ಮಂದಿರಕ್ಕೆ ಹೋಗಿದ್ದಾರೆ. ಅಲ್ಲಿನ ಪೂಜಾರಿ ಮುಂದೆ ತಾವು ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದರಿಂದ ಆಶ್ಚರ್ಯಕ್ಕೊಳಗಾದ ಪೂಜಾರಿ ಕೂಡ ಯಾಕೆ ಈ ನಿರ್ಧಾರ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರು ನಾವು ಇಷ್ಟಪಟ್ಟಿದ್ದು, ಕೊನೆಯುಸಿರು ಇರುವವರೆಗೂ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜತೆಗೆ ಪ್ರಸ್ತುತ ದಿನಮಾನಗಳಲ್ಲಿ ಗಂಡಸರನ್ನ ನಂಬಲು ಸಾಧ್ಯವಿಲ್ಲ. ಒಂದಿಲ್ಲ ಒಂದು ವಿಚಾರಕ್ಕಾಗಿ ಅವರು ನಮಗೆ ತೊಂದರೆ ನೀಡುತ್ತಾರೆ ಎಂದಿದ್ದು, ಯಾವುದೇ ಸಮಯದಲ್ಲಾದರೂ ನಮಗೆ ಮೋಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ತಾವಿಬ್ಬರು ಮದುವೆಯಾಗಿರುವ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣ ಫೇಸ್​ಬುಕ್​​ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನ ನೋಡಿರುವ ಅನೇಕರು ವಿವಿಧ ರೀತಿಯ ಕಮೆಂಟ್​ ಮಾಡಿದ್ದಾರೆ.

Intro:Body:

ಗಂಡಸರ ಮೇಲೆ ನಂಬಿಕೆ ಇಲ್ವಂತೆ... ಇಬ್ಬರು ಯುವತಿಯರೇ ಹನುಮಾನ ಮಂದಿರದಲ್ಲಿ ಮದುವೆ! 

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಹನುಮಾನ ಮಂದಿರದಲ್ಲಿ ವಿಚಿತ್ರವಾದ ಘಟನೆವೊಂದು ನಡೆದಿದ್ದು, ಇಬ್ಬರು ಯುವತಿಯರು ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ಈ ಮ್ಯಾರೇಜ್​ ನೋಡಿದವರು ಹೌಹಾರಿದ್ದಾರೆ. 

ಸಡಗರ-ಸಂಭ್ರಮದಿಂದ ಗಂಡು-ಹೆಣ್ಣು ಮದುವೆಯಾಗಿ ಸುಖ ಸಂಸಾರ ನಡೆಸುವುದು ಕಾಮನ್​. ಆದರೆ ಇಬ್ಬರು ಯುವತಿಯರು ತಮ್ಮ ಇಷ್ಟಕ್ಕೆ ಅನುಗುಣವಾಗಿ ಮದುವೆ ಮಾಡಿಕೊಂಡು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದಾರೆ. 

ಮದುವೆಯಾಗಲು ಕಾರಣ!? 

ಮದುವೆಯಾಗುವ ಉದ್ದೇಶದಿಂದ ಇಬ್ಬರು ಯುವತಿಯರು ಹನುಮಾನ ಮಂದಿರಕ್ಕೆ ಹೋಗಿದ್ದಾರೆ. ಅಲ್ಲಿನ ಪೂಜಾರಿ ಮುಂದೆ ತಾವು ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದರಿಂದ ಆಶ್ಚರ್ಯಕ್ಕೊಳಗಾದ ಪೂಜಾರಿ ಕೂಡ ಯಾಕೆ ಈ ನಿರ್ಧಾರ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರು ನಾವು ಇಷ್ಟಪಟ್ಟಿದ್ದು, ಕೊನೆಯುಸಿರು ಇರುವವರೆಗೂ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ ಪ್ರಸ್ತುಕ ದಿನಮಾನಗಳಲ್ಲಿ ಗಂಡಸರನ್ನ ನಂಬಲು ಸಾಧ್ಯವಿಲ್ಲ. ಒಂದಿಲ್ಲ ಒಂದು ವಿಚಾರಕ್ಕಾಗಿ ಅವರು ನಮಗೆ ತೊಂದರೆ ನೀಡುತ್ತಾರೆ ಎಂದಿದ್ದು, ಯಾವುದೇ ಸಮಯದಲ್ಲಾದರೂ ನಮಗೆ ಮೋಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. 

ಇನ್ನು ತಾವಿಬ್ಬರು ಮದುವೆಯಾಗಿರುವ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣ ಫೇಸ್​ಬುಕ್​​ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನ ನೋಡಿರುವ ಅನೇಕರು ವಿವಿಧ ರೀತಿಯ ಕಮೆಂಟ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.