ETV Bharat / bharat

ಬ್ರಿಟನ್​, ಬಾಂಗ್ಲಾ, ಗಲ್ಫ್​ ರಾಷ್ಟ್ರಗಳಲ್ಲಿ ಸಿಲುಕಿರೋ ಭಾರತೀಯರು ಇಂದು ತವರಿಗೆ ವಾಪಸ್‌ - ವಂದೇ ಭಾರತ್ ಮಿಷನ್

ಮೇ 7ರಂದು ಆರಂಭವಾಗಿರುವ ಮೆಗಾ ಏರ್​ಲಿಫ್ಟ್​ ಇಂದಿಗೆ ಮೂರನೇ ದಿನ ಪೂರ್ಣಗೊಳಿಸುತ್ತಿದೆ. ಸುಮಾರು 2 ಲಕ್ಷ ಅನಿವಾಸಿ ಭಾರತೀಯರನ್ನು ವಿದೇಶದಿಂದ ಭಾರತಕ್ಕೆ ಕರೆತರುವ ಐತಿಹಾಸಿಕ ವೈಮಾನಿಕ ಸ್ಥಳಾಂತರಕ್ಕೆ ಭಾರತದ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ವಿದೇಶಗಳಿಗೆ ಹಾರುತ್ತಿದೆ.

evacuation
ವಂದೇ ಭಾರತ್ ಮಿಷನ್
author img

By

Published : May 9, 2020, 3:43 PM IST

ನವದೆಹಲಿ: ಕತಾರ್, ಓಮನ್, ಮಲೇಷ್ಯಾ, ಯುಎಇ, ಮತ್ತು ಬ್ರಿಟನ್​ ಮುಂತಾದ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶನಿವಾರ ವಿಶೇಷ ವಿಮಾನ ಕಳಿಸುತ್ತಿದೆ.

ವಂದೇ ಭಾರತ್ ಮಿಷನ್​ನ ಮೂರನೇ ದಿನವಾದ ಇಂದು ಢಾಕಾ, ಸಿಂಗಾಪುರ, ನಿವಾರ್ಕ್(ನ್ಯೂಜೆರ್ಸಿ) ಮತ್ತು ಕುವೈತ್‌ಗೆ ನಾಲ್ಕು ಏರ್ ಇಂಡಿಯಾ ವಿಮಾನಗಳು ಹಾಲಿದ್ದು, ದೋಹಾ, ಮಸ್ಕತ್, ಕೌಲಾಲಂಪುರ್, ಶಾರ್ಜಾ ಮತ್ತು ಕುವೈತ್‌ಗೆ ವಾಪಸಾತಿ ಹಾರಾಟ ನಡೆಸಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿದ್ಧಪಡಿಸಿದ ಸ್ಥಳಾಂತರ ವೇಳಾಪಟ್ಟಿಯ ಪ್ರಕಾರ, ವಿಮಾನಯಾನವು ಇಂದು ಕೊಚ್ಚಿಯಿಂದ ದೋಹಾಕ್ಕೆ ಐಎಕ್ಸ್ 475, ಕೊಚ್ಚಿಯಿಂದ ಕುವೈತ್‌ಗೆ ಐಎಕ್ಸ್ 395, ಐಎಕ್ಸ್ 443 ಕೊಚ್ಚಿಯಿಂದ ಮಸ್ಕತ್, ಐಎಕ್ಸ್ 682 ತಿರುಚಿರಾಪಳ್ಳಿಯಿಂದ ಕೌಲಾಲಂಪುರಕ್ಕೆ ಮತ್ತು ಫ್ಲೈಟ್ ಐಎಕ್ಸ್ 183 ದೆಹಲಿಯಿಂದ ಶಾರ್ಜಾಗೆ ಹಾರಲಿದೆ. ಐಎಕ್ಸ್ 184 ವಿಮಾನವು ಹಿಂದಿರುಗುವಾಗ ಮೊದಲು ಲಕ್ನೋದಲ್ಲಿ ಇಳಿದು ನಂತರ ದೆಹಲಿಯಲ್ಲಿ ಲ್ಯಾಂಡ್​ ಆಗಲಿದೆ.

ಅಂತೆಯೇ, ಏರ್ ಇಂಡಿಯಾ ವಿಮಾನ ಎಐ 1242 ಢಾಕಾದಿಂದ ದೆಹಲಿಗೆ ಬರಲಿದೆ. ಎಐ 130 ಲಂಡನ್‌ನಿಂದ ಮುಂಬೈಗೆ, ಎಐ 174 ಸ್ಯಾನ್​ಫ್ರಾನ್ಸಿಸ್ಕೋದಿಂದ ಮುಂಬೈಗೆ ಮತ್ತು ಎಐ 988 ಕುವೈತ್‌ನಿಂದ ಹೈದರಾಬಾದ್‌ಗೆ ಬಂದಿಳಿಯಲಿದೆ.

ಈ ನಡುವೆ ಲಾಕ್​ಡೌನ್​ನಿಂದಾಗಿ ಪ್ರಸ್ತುತ ಭಾರತದಲ್ಲಿ ಸಿಲುಕಿರುವ ಕತಾರ್, ಒಮಾನ್, ಮಲೇಷ್ಯಾ, ಯುಎಇ ಮತ್ತು ಕುವೈತ್ ಪ್ರಜೆಗಳಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಬುಕಿಂಗ್ ಆರಂಭಿಸಿದೆ.

ವಂದೇ ಭಾರತ್ ಮಿಷನ್​ನ 2ನೇ ದಿನವಾದ ನಿನ್ನೆ, ವಿಶೇಷ ವಿಮಾನಗಳು ಸಿಂಗಾಪುರ, ಢಾಕಾ ಮತ್ತು ಗಲ್ಫ್​ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ 1,000 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.