ಡೆಹ್ರಾಡೂನ್: ಉತ್ತರಾಖಂಡದ ಬಿಜೆಪಿ ಶಾಸಕರೊಬ್ಬರು ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಈ ಮಧ್ಯೆ, ಶಾಸಕರ ಪತ್ನಿ, ಮಹಿಳೆ ಮತ್ತು ಇತರ ನಾಲ್ವರ ವಿರುದ್ಧ ಡೆಹ್ರಾಡೂನ್‌ನ ನೆಹರು ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪ ಮಾಡಿದ ಮಹಿಳೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಜೆಪಿ ಶಾಸಕ ತನ್ನೊಂದಿಗೆ ಎರಡು ವರ್ಷಗಳಿಂದ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ದೂರಿದ್ದಾರೆ.
ತನ್ನ ಮಗಳ ಡಿಎನ್‌ಎ ಮಾದರಿ ತನ್ನ ಗಂಡನ ಮಾದರಿಯೊಂದಿಗೆ ಹೊಂದಿಕೆಯಾಗದಿದ್ದರೆ, ಶಾಸಕರ ಡಿಎನ್‌ಎ ಜೊತೆ ಹೊಂದಿಕೆಯಾಗಬೇಕು ಎಂದು ಸಂತ್ರಸ್ತೆ ಹೇಳಿದ್ದಾರೆ. ಬಿಜೆಪಿ ಶಾಸಕರ ಪತ್ನಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡೆಹ್ರಾಡೂನ್ ಎಸ್ಎಸ್ಪಿ ಅರುಣ್ ಮೋಹನ್ ಜೋಶಿ ತಿಳಿಸಿದ್ದಾರೆ.