ರಾಣಿಖೇತ್(ಉತ್ತರಾಖಂಡ): ಸಾಮಾನ್ಯವಾಗಿ ಕೊತ್ತಂಬರಿ ಗಿಡ ಒಂದರಿಂದ ಮೂರು ಅಡಿ ಎತ್ತರ ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ 7 ಅಡಿ ಉದ್ದ ( 2.16 ಮೀಟರ್) ಕೊತ್ತಂಬರಿ ಗಿಡ ಬೆಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ.
ಉತ್ತರಾಖಂಡದ ರಾಣಿಖೇತ್ನ ರೈತ ಗೋಪಾಲ್ ದತ್ ಈ ಸಾಧನೆ ಮಾಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿ ಮೂಲಕ 2.16 ಮೀಟರ್ ಉದ್ಧವಾದ ಕೊತ್ತಂಬರಿ ಗಿಡ ಬೆಳೆಸಿದ್ದು, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಎತ್ತರವಾಗಿ ಬೆಳೆದ ಕೊತ್ತಂಬರಿ ಗಿಡ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಪ್ರಗತಿ ಪರ ರೈತ ಎಂದು ಗುರುತಿಸಿಕೊಂಡಿರುವ ಇವರು, ತಮ್ಮ ತೋಟದಲ್ಲಿ ವಿವಿಧ ಹಣ್ಣು ಸಾವಯವ ಕೃಷಿ ಮೂಲಕ ಬೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
-
उत्तराखण्ड रानीखेत निवासी @GopalDatt19 जी जिन्होंने जैविक विधि से #धनिया (coriander) का उत्पादन करते हुए गिनीज वर्ल्ड रिकॉर्डस के विगत कीर्तिमान 1.6 मी. को पीछे छोड़ते हुए 2.16 मीटर का नया कीर्तिमान स्थापित किया है.! pic.twitter.com/tVZMVk6Bh9
— Ajay Bhatt (@AjaybhattBJP4UK) June 3, 2020 " class="align-text-top noRightClick twitterSection" data="
">उत्तराखण्ड रानीखेत निवासी @GopalDatt19 जी जिन्होंने जैविक विधि से #धनिया (coriander) का उत्पादन करते हुए गिनीज वर्ल्ड रिकॉर्डस के विगत कीर्तिमान 1.6 मी. को पीछे छोड़ते हुए 2.16 मीटर का नया कीर्तिमान स्थापित किया है.! pic.twitter.com/tVZMVk6Bh9
— Ajay Bhatt (@AjaybhattBJP4UK) June 3, 2020उत्तराखण्ड रानीखेत निवासी @GopalDatt19 जी जिन्होंने जैविक विधि से #धनिया (coriander) का उत्पादन करते हुए गिनीज वर्ल्ड रिकॉर्डस के विगत कीर्तिमान 1.6 मी. को पीछे छोड़ते हुए 2.16 मीटर का नया कीर्तिमान स्थापित किया है.! pic.twitter.com/tVZMVk6Bh9
— Ajay Bhatt (@AjaybhattBJP4UK) June 3, 2020
ರೈತನ ಸಾಧನೆಯನ್ನ ಸಂಸದರಾಗಿರುವ ಅಜಯ್ ಭಟ್ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಈ ಕೊತ್ತಂಬರಿ ಕಾಂಡದ ದಪ್ಪ ಅರ್ಥ ಇಂಚಿನಿಂದ 1 ಇಂಚಿನವರೆಗೆ ಇದೆ. ತಮ್ಮ ತೋಟದಲ್ಲಿ ಬೆಳೆಯುವ ಬೆಳೆಗಳಿಗೆ ಸಗಣಿ ಹಾಗೂ ಬೇವು ಗೊಬ್ಬರವಾಗಿ ಬಳಕೆ ಮಾಡುತ್ತಾರೆ.