ETV Bharat / bharat

ವ್ಯಾಪಾರ ಸಮರ ಕೊನೆಗೊಂಡೀತೆ : ಸುರೇಶ್ ಬಾಫ್ನಾ

author img

By

Published : Feb 16, 2020, 12:23 PM IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸ ಹತ್ತಿರವಾದಂತೆ ಎರಡೂ ದೇಶಗಳ ನಡುವೆ ವರ್ಷದಿಂದಲೂ ನಡೆಯುತ್ತಿರುವ ವ್ಯಾಪಾರ ಸಮರ ಕೊನೆಗೊಳ್ಳುವುದು ಎಂಬ ವಿಶ್ವಾಸ ಅನೇಕರಲ್ಲಿ ಮೂಡಿದೆ.

US President Donald Trump
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಟ್ರಂಪ್ ಅವರು ತಮ್ಮ ಭಾರತ ಪ್ರವಾಸದ ವಿಷಯವನ್ನು ತಿಳಿಸುತ್ತಲೇ ಉಭಯ ದೇಶಗಳು ಒಂದು ಸಮಾನ ವೇದಿಕೆಗೆ ಬರಲು ಸಾಧ್ಯವಾದರೆ ವ್ಯಾಪಾರಿ ಒಪ್ಪಂದವೊಂದಕ್ಕೆ ಸಹಿ ಹಾಕಲು ಸಾಧ್ಯ ಎಂದು ಹೇಳಿದ್ದರು. ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ, ಅವರ ಆಡಳಿತದಲ್ಲಿ ಆರ್ಥಿಕ ಸ್ವರಕ್ಷಣಾತ್ಮಕ ನೆಲೆಯ ನೀತಿಗಳು ಮತ್ತು ವ್ಯಾಪಾರಿ ನೀತಿಗಳೇ ಆಡಳಿತವನ್ನು ಮುನ್ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಕುತೂಹಲಕಾರಿ ಸಂಗತಿಯೇನೆಂದರೆ ಭಾರತ ಮತ್ತು ಅಮೆರಿಕಗಳು ಪರಸ್ಪರರನ್ನು ವ್ಯೂಹತಾಂತ್ರಿಕ ಸಹಭಾಗಿಗಳಾಗಿ ಪರಿಗಣಿಸುತ್ತವಾದರೂ ವ್ಯಾಪಾರದ ವಿಷಯ ಬಂದಾಗ ಎರಡೂ ಪರಸ್ಪರರೊಂದಿಗೆ ತಿಕ್ಕಾಟ ನಡೆಸತೊಡಗಿವೆ. ಎರಡೂ ದೇಶಗಳ ನಡುವೆ ಹೈನುಗಾರಿಕೆ, ಕೃಷಿ ಮತ್ತು ಟೆಕ್ನಾಲಜಿ ವಿಷಯಗಳ ಕುರಿತಂತೆ ವ್ಯಾಜ್ಯವೇರ್ಪಟ್ಟಿದೆ. ಚೀನಾ, ಮೆಕ್ಸಿಕೋ ಮತ್ತು ಜಪಾನ್ ದೇಶಗಳೊಂದಿಗೆ ಹಲವಾರು ವ್ಯಾಪಾರಿ ಒಪ್ಪಂದಗಳಿಗೆ ಸಹಿ ಹಾಕಿರುವ ಟ್ರಂಪ್ ಅವರು ವಿಶ್ವ ವ್ಯಾಪಾರ ಸಂಘಟನೆ (WTO)ಯಂತಹ ಸಂಘಟನೆಗಳ ಕುರಿತು ತಮಗೆ ಅಷ್ಟಾಗಿ ವಿಶ‍್ವಾಸವಿಲ್ಲ ಎಂದು ನುಡಿದಿದ್ದಾರೆ.

ವ್ಯಾಪಾರ ಮತ್ತು ತಂತ್ರಜ್ಞಾನಗಳ ವಿಷಯದಲ್ಲಿ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರಿ ಸಹಭಾಗಿಯಾಗಿದೆ. 2014ರಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಸುಮಾರು 182 ಶತಕೋಟಿ ಡಾಲರ್ ನಷ್ಟಿತ್ತು. ಎರಡೂ ದೇಶಗಳ ನಡುವೆ ವ್ಯಾಪಾರಿ ಸಂಬಂಧ ಮತ್ತೆ ಮೊದಲಿನಂತೆ ಸುಲಲಿತವಾಗಿ ನಡೆಯುವುದೇ ಆದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಇದು 200 ಶತಕೋಟಿ ಡಾಲರ್ ಮಟ್ಟಕ್ಕೆ ತಲುಪುವುದರಲ್ಲಿ ಅನುಮಾನವಿಲ್ಲ. ಎರಡೂ ದೇಶಗಳ ನಡುವಿನ ಈ ವ್ಯಾಪಾರದ ಅಂತಃಸಾಮರ್ಥ್ಯವು ಸಾಕಾರಗೊಳ್ಳಬೇಕೆಂದರೆ ಅಮೆರಿಕ ಮತ್ತು ಭಾರತಗಳ ನಡುವೆ ಒಂದು ವ್ಯಾಪಾರಿ ಒಪ್ಪಂದ ನಡೆಯಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾವು ಚೀನಾದ ಅನುಭವಗಳಿಂದ ಒಂದೆರಡು ವಿಷಯಗಳನ್ನು ಕಲಿತುಕೊಳ್ಳಬೇಕೆನಿಸುತ್ತದೆ. ನಮ್ಮ ರಾಷ್ಟ್ರಗಳನ್ನು ಬಾಧಿಸುತ್ತಿರುವ ವ್ಯಾಪಾರಿ ಆತಂಕಗಳನ್ನು ದೂರ ಮಾಡಿಕೊಂಡಾಗ ಮಾತ್ರವೇ ಅಮೆರಿಕದೊಂದಿಗಿನ ನಮ್ಮ ಸಹಭಾಗಿತ್ವ ಗಟ್ಟಿಗೊಳ್ಳಲು ಸಾಧ್ಯ.

ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರಗಳಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಎದುರಿಸಲು ಬೇಕಾದ ಯಂತ್ರಾಂಗವೊಂದನ್ನು ರೂಪಿಸುವುದು ಸಹ ಟ್ರಂಪ್‍ ಅವರ ಮುಖ್ಯ ಅಜೆಂಡಾಗಳಲ್ಲಿ ಒಂದಾಗಿದೆ. ಕಳೆದ ವರ್ಷ, ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್ ‘ಏಷಿಯಾ-ಪೆಸಿಫಿಕ್’ ಎಂಬ ಪದದ ಬದಲಿಗೆ ‘ಇಂಡೋ-ಪೆಸಿಫಿಕ್’ ಎಂಬ ಪದವನ್ನು ಬಳಸಿತ್ತು. ಇದು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವಲ್ಲಿ ಭಾರತ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಎಂಬುದರ ದ್ಯೋತಕವಾಗಿದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ನಡುವೆ ನಡೆಯುತ್ತಿರುವ ಸೈನಿಕ ಸಮರಾಭ್ಯಾಸಗಳನ್ನು ಈ ಪ್ರದೇಶದಲ್ಲಿ ಚೀನಾ ಅಳವಡಿಸುತ್ತಿರುವ ಆಕ್ರಮಣಕಾರಿ ನೀತಿಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ಈ ನಾಲ್ಕು ದೇಶಗಳ ವಿದೇಶಾಂಗ ಸಚಿವರ ನಡುವಿನ ಸಭೆಯು ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮಯದಲ್ಲಿ ನಡೆಯಿತು. ಈ ಪ್ರದೇಶದಲ್ಲಿ ಅನಾವರಣಗೊಳ್ಳುತ್ತಿರುವ ಭೂ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿಯೇ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಟ್ರಂಪ್ ಅಧ್ಯಕ್ಷನಾದ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ನಡುವೆ ಅಮೆರಿಕದ ಸ್ಥಾನಮಾನದಲ್ಲಿ ಹಿನ್ನಡೆಯಾಗಿದೆ. ಆದರೆ ಚೀನಾ ಮಾತ್ರ ಆರ್ಥಿಕವಾಗಿ ಮತ್ತು ಸೈನಿಕವಾಗಿ ತನ್ನ ಸ್ಥಾನವನ್ನು ಅಂತಾರಾಷ್ಟ್ರೀಯ ಸಮುದಾಯದ ನಡುವೆ ಮತ್ತಷ್ಟು ಭದ್ರಗೊಳಿಸಿಕೊಂಡಿದೆ. ಭಾರತದ ವಿಷಯದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಹಲವಾರು ಬಗೆಗಳಲ್ಲಿ ಕಾಣಬಹುದಾಗಿದೆ. ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚೀನಾ ಆಕ್ರಮಣಕಾರಿ ಧೋರಣೆ ತಳೆದಿದ್ದು ಇದನ್ನು ರುಜುವಾತುಗೊಳಿಸುತ್ತದೆ. ಚೀನಾ ಮತ್ತು ಪಾಕಿಸ್ತಾನಗಳು ಒಂದಾಗಿ ಭಾರತಕ್ಕೆ ಪ್ರಮುಖ ಸೈನಿಕ ಸವಾಲಾಗಿ ಉದ್ಭವಿಸಿವೆ. ಅಂತಾರಾಷ್ಟ್ರೀಯವಾಗಿ ಚೀನಾವು ಅಮೆರಿಕದ ಪ್ರಾಬಲ್ಯವನ್ನು ಪ್ರಶ್ನಿಸಿದೆ. ಹೀಗಾಗಿ ಭಾರತವು ತನ್ನ ಹಿತಾಸಕ್ತಿಗಳನ್ನು ಬಲಪಡಿಸಿಕೊಳ್ಳಲು ಅಮೆರಿಕ ಮತ್ತಿತರ ದೇಶಗಳ ಸಹಯೋಗವನ್ನು ಪಡೆದುಕೊಳ್ಳುವ ಅಗತ್ಯವಿದೆ. ನಾವು ಯಾವುದೇ ಚೀನಾ ವಿರೋಧಿ ಬಣದ ಭಾಗವಾಗಬಾರದು ಆದರೆ ಚೀನಾದ ಆಕ್ರಮಣಕ್ಕೆ ರಾಜತಾಂತ್ರಿಕ ರೀತಿಯಲ್ಲೇ ಉತ್ತರ ನೀಡುವುದು ಅತ್ಯಂತ ಅವಶ್ಯಕವಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ಕೃತಕ ದ್ವೀಪಗಳನ್ನು ಅಭಿವೃದ್ಧಿಪಡಿಸಿಕೊಂಡು ತನ್ನ ಸೈನಿಕ ಸಾಮರ್ಥ್ಯವನ್ನು ವಿಸ್ತರಿಸಿಕೊಂಡಿರುವುದು ಜಗತ್ತಿನ ಇತರ ದೇಶಗಳಿಗೆ ಎಚ್ಚರಿಕೆ ಗಂಟೆಯಾಗಬೇಕಿದೆ. ಪರಿಸ್ಥಿತಿ ಹೇಗಾಗಿದೆಯೆಂದರೆ ಚೀನಾದ ದಾಳಿಯನ್ನು ಎದುರಿಸಲು ಅಮೆರಿಕಕ್ಕೆ ತನಗೆ ತಾನೇ ಸಾಮರ್ಥ್ಯವಿಲ್ಲ ಎನಿಸತೊಡಗಿದೆ. ಹೀಗಾಗಿಯೇ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಅಮೆರಿಕ ಪರಿಗಣಿಸಿದೆ. ಎರಡು ದೇಶಗಳ ನಡುವಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳ ಸೇನೆಗಳ ನಡುವೆ ಹೆಚ್ಚಿನ ಸಹಕಾರವನ್ನು ಕಾರ್ಯಾಚರಣೆ ಮತ್ತು ಸಂವಹನಗಳ ಕ್ಷೇತ್ರದಲ್ಲಿ ಕಂಡಿದ್ದೇವೆ. ಕಳೆದ 12 ವರ್ಷಗಳಲ್ಲಿ ಭಾರತವು ಸುಮಾರು 20 ಶತಕೋಟಿ ಡಾಲರುಗಳಷ್ಟು ಮೌಲ್ಯದ ರಕ್ಷಣಾ ಸಾಧನಗಳನ್ನು ಅಮೆರಿಕದಿಂದ ಖರೀದಿಸಿದೆ. ಎರಡು ದೇಶಗಳ ನಡುವೆ ರಕ್ಷಣಾ ವಿಷಯದಲ್ಲಿ ಎಂತಹ ಆಳವಾದ ಬೆಸುಗೆ ಇದೆ ಎಂಬುದನ್ನು ಇದು ಸೂಚಿಸುತ್ತದೆ.

ಭಾರತ ಮತ್ತು ಅಮೆರಿಕದ ನಡುವೆ ಶೃಂಗಸಭೆ ಮಟ್ಟದಲ್ಲಿ ಮಾತುಕತೆ ನಡೆದಾಗ ಅಲ್ಲಿ ಪಾಕಿಸ್ತಾನದ ಪ್ರಸ್ತಾಪವೂ ಬರುತ್ತದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ತಯಾರಿದ್ದರೆ ಕಾಶ್ಮೀರದ ವಿಷಯದಲ್ಲಿ ತಾನು ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಅಧ್ಯಕ್ಷ ಟ್ರಂಪ್ ಹಲವು ಬಾರಿ ಪುನರುಚ್ಛರಿಸಿದ್ದಾರೆ. ಟ್ರಂಪ್‍ ಅವರೊಂದಿಗೆ ಸೇರಿ ನಡೆಸಿದ ಸುದ್ದಿಗೋಷ್ಠಿಯ ಸಮಯದಲ್ಲಿ ಅಂತ ಮಧ್ಯಸ್ಥಿಕೆಗೆ ಯಾವುದೇ ಅವಕಾಶವಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನವು ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಉಗ್ರರಿಗೆ ಸಹಾಯ ಒದಗಿಸುವುದನ್ನು ಕೂಡಲೇ ಕೈ ಬಿಡಬೇಕು ಎಂದು ಅಮೆರಿಕವು ಪದೇ ಪದೇ ತಿಳಿಸಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕಗಳ ನಡುವೆ ಉನ್ನತ ಮಟ್ಟದ ಸಹಕಾರವಿದೆ. ಈಗ ಅದು ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಭಾರತ-ಪಾಕಿಸ್ತಾನಗಳ ನಡುವೆ ಮಾತುಕತೆ ಆಗಲಿ ಎಂದು ಟ್ರಂಪ್ ಅವರು ಈಗಲೂ ಮತ್ತೊಮ್ಮೆ ಹೇಳಬಹುದು. ಸಧ್ಯದ ಸನ್ನಿವೇಶದಲ್ಲಿ ಪಾಕಿಸ್ತಾನದೊಂದಿಗೆ ಅಂತಹ ಮಾತುಕತೆಗೆ ಅವಕಾಶ ಇಲ್ಲವಾಗಿದೆ. ಸಾಮಾನ್ಯವಾಗಿ ಭಾರತಕ್ಕೆ ಅಮೆರಿಕದ ಅಧ್ಯಕ್ಷರು ಭೇಟಿ ನೀಡಿದ ತರುವಾಯದಲ್ಲಿ ಪಾಕಿಸ್ತಾನಕ್ಕೆ ಒಂದು ಕಿರುಭೇಟಿ ನೀಡುವ ವಾಡಿಕೆ ಇತ್ತು. ಆದರೆ ಈ ಸಲ ಟ್ರಂಪ್ ಮಾತ್ರ ಹಾಗೆ ಮಾಡದೇ ಪಾಕಿಸ್ತಾನದಲ್ಲಿ ವಾತಾವರಣ ಪೂರಕವಾಗಿಲ್ಲ ಎಂಬುದನ್ನು ಸಾಂಕೇತಿಕವಾಗಿ ತಿಳಿಸಿದ್ದಾರೆ.

ಸುರೇಶ್ ಬಾಫ್ನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.