ETV Bharat / bharat

ಇಷ್ಟೊಂದು ಮೊತ್ತದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ-ಅಮೆರಿಕ - ಭಾರತ ಅಮೆರಿಕಾ ರಕ್ಷಣಾ ಒಪ್ಪಂದ ಸುದ್ದಿ

ಅಮೆರಿಕ ವಿದೇಶಾಂಗ ಇಲಾಖೆ ಕಳೆದ ಸೋಮವಾರ ಸಂಯೋಜಿತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದೆ. ಕಳೆದ ಫೆಬ್ರವರಿ 7ರಂದೇ ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದಲ್ಲದೇ ಈ ಸಂಬಂಧ ಯುಎಸ್ ಕಾಂಗ್ರೆಸ್​ಗೆ ಮಾಹಿತಿ ಕೂಡಾ ರವಾನಿಸಿತ್ತು.

ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ, ಅಮೆರಿಕಾ
author img

By

Published : Feb 11, 2020, 1:30 PM IST

ವಾಷಿಂಗ್ಟನ್​: ಅಮೆರಿಕವು ಭಾರತದೊಂದಿಗೆ ಅಂದಾಜು 1.867 ಬಿಲಿಯನ್​ ಡಾಲರ್​ ಮೊತ್ತದ ಸಂಯೋಜಿತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ (Integrated Air Defence Weapon System-IADWS) ಒಪ್ಪಂದಕ್ಕೆ ಸಹಿ ಹಾಕಲಿದೆ.

ಅಮೆರಿಕ ವಿದೇಶಾಂಗ ಇಲಾಖೆ ಕಳೆದ ಸೋಮವಾರ ಸಂಯೋಜಿತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ ಮಾರಾಟ ಅನುಮೋದಿಸುವ ನಿರ್ಣಯ' ಕೈಗೊಂಡಿತ್ತು. ಕಳೆದ ಫೆಬ್ರವರಿ 7ರಂದೇ ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ ಮಾರಾಟ ಮಾಡುವ ನಿರ್ಧಾರದ ಬಗ್ಗೆ ಅಮೆರಿಕ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಯುಎಸ್ ಕಾಂಗ್ರೆಸ್​ಗೆ ತಿಳಿಸಿತ್ತು.

ಉಪಕರಣಗಳ ಉದ್ದೇಶಿತ ಮಾರಾಟ ಮತ್ತು ಬೆಂಬಲವು ಈ ಪ್ರದೇಶದ ಮೂಲಭೂತ ಸೇನಾ ಸಮತೋಲನವನ್ನು ಬದಲಿಸುವುದಿಲ್ಲ ಎಂದು ಯುಎಸ್ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಮೂಲಕ ಅಮೆರಿಕ ಶತ್ರು ರಾಷ್ಟ್ರಗಳಿಗೆ ಟಾಂಗ್ ಕೂಡಾ ಕೊಟ್ಟಿದೆ.

ಯಾವ ಯಾವ ಖರೀದಿಗೆ ಒಪ್ಪಿಗೆ: ಭಾರತವು, AN/MPQ-64Fl ಸೆಂಟಿನೆಲ್ ರೇಡಾರ್ ಸಿಸ್ಟಮ್​, 118 AMRAAM AIM-120C-7/C-8 ಕ್ಷಿಪಣಿ, 3 AMRAAM ಮಾರ್ಗದರ್ಶನ ವಿಭಾಗದ ವ್ಯವಸ್ಥೆ, 4 AMRAAM ನಿಯಂತ್ರಣ ವಿಭಾಗಗಳು ಮತ್ತು 134 ಸ್ಟಿಂಗರ್ FIM -92L ಕ್ಷಿಪಣಿಗಳು ಸೇರಿದಂತೆ IADWS ಖರೀದಿಗೆ ಕೋರಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಇದರೊಂದಿಗೆ 32 M4A1 ರೈಫಲ್‌ಗಳು, 40,320 M855 5.56 mm ಕಾಟ್ರಿಡ್ಜ್​ಗಳು, ಅಗ್ನಿಶಾಮಕ ಕೇಂದ್ರ (FDC) ಮತ್ತು ಹ್ಯಾಂಡ್ಹೆಲ್ಡ್ ರಿಮೋಟ್ ಒದಗಿಸಲು ಭಾರತ ದೊಡ್ಡಣ್ಣನಿಗೆ ಬೇಡಿಕೆ ಇಟ್ಟಿದೆ.

ಈ ಒಪ್ಪಂದವು ಎಲೆಕ್ಟ್ರಿಕಲ್ ಆಪ್ಟಿಕಲ್/ಇನ್ಫ್ರಾರೆಡ್ (EO/IR) ಸಂವೇದಕ ವ್ಯವಸ್ಥೆಗಳನ್ನು ಸಹ ಒಳಗೊಂಡಿದೆ. ಜೊತೆಗೆ AMRAAM ಅಭಿವೃದ್ಧಿಯೇತರ ಐಟಂ - ವಾಯುಗಾಮಿ ಉಪಕರಣ ಘಟಕಗಳು (NDIAAIU), ಮಲ್ಟಿ-ಸ್ಪೆಕ್ಟ್ರಲ್ ಟಾರ್ಗೆಟಿಂಗ್ ಸಿಸ್ಟಮ್-ಮಾಡೆಲ್ ಎ (MTS-A); ಕ್ಯಾನಿಸ್ಟರ್ ಲಾಂಚರ್ಸ್ (CN); ಹೈ ಮೊಬಿಲಿಟಿ ಲಾಂಚರ್ಸ್ (HML) ಮತ್ತು ಡ್ಯುಯಲ್ ಮೌಂಟ್ ಸ್ಟಿಂಗರ್ (DMS) ಏರ್ ಡಿಫೆನ್ಸ್ ಸಿಸ್ಟಮ್​ಗಳನ್ನು ಒಳಗೊಂಡಿದೆ.

ಈ ಉದ್ದೇಶಿತ ಮಾರಾಟವು ಅಮೆರಿಕ - ಭಾರತ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಮತ್ತು ಪ್ರಮುಖ ರಕ್ಷಣಾತ್ಮಕ ಪಾಲುದಾರನ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತದೆ. ಇದು ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕತೆಗೆ ಪ್ರಮುಖ ಶಕ್ತಿಯಾಗಿ ಮುಂದುವರಿದಿದೆ ಎಂದು ಅಮೆರಿಕ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.